Tumbe Group of International Journals

Full Text


ಸಜ್ಜನರ ಸ್ವಾಭಿಮಾನ ಎಸ್. ಆರ್.  ನರೇಂದ್ರಬಾಬು ಅಧೀಕ್ಷಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು   ತನ್ನ ಬಗ್ಗೆ ತಾನು ಅಭಿಮಾನ ಹೊಂದಿರುವುದಕ್ಕೆ ಸ್ವಾಭಿಮಾನವೆಂದು ಅರ್ಥೈಸಬಹುದು.  ಸ್ವಾಭಿಮಾನವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.  ಕರುಣೆ, ಪ್ರೀತಿಯ ಮೋಡಿಗೆ ಮರುಳಾಗಿ ಕೆಲವರು ಸ್ವಾಭಿಮಾನದ ಬಿಗಿಯನ್ನು ಸಡಿಲಗೊಳಿಸಬಹುದು ಆದರೆ ಕೆ¯ವರು ಇವ್ಯಾವುದಕ್ಕೂ ಮಣಿಯದೆ ಸ್ವಾಭಿಮಾನವೇ ತಮ್ಮ ಮಾನವೆಂದರಿತು ಸ್ವಾಭಿಮಾನವನ್ನು ಪೂಜ್ಯ ಭಾವನೆಯಿಂದ ಕಾಣುವರು.  ವ್ಯಕ್ತಿಯ ನಡೆ ನುಡಿಗಳು ಸ್ವಾಭಿಮಾನದ ಪ್ರತಿಬಿಂಬ ಕೆಲವೊಮ್ಮೆ  ಮೌನವೂ ಇದರ ಸಂಕೇತವಾಗಿರಬಹುದು. ಸ್ವಾಭಿಮಾನವನ್ನು ಅರ್ಥ ಮಾಡಿಕೊಳ್ಳದವರು ಇದನ್ನು ಅಹಂಕಾರವೆಂದು ಭಾವಿಸುವರು ಆದರೆ ವಾಸ್ತವತೆಯ ಗರ್ಭವನ್ನು ಹೊಕ್ಕಿ ನೋಡಿದಾಗ ಸ್ವಾರ್ಥದ ಛಾಯೆಯೂ ಸಹ ಕಾಣಸಿಗುವುದಿಲ್ಲ.  ಜೇನು ಕಡಿದರೂ ಅದರ ಸಿಹಿ ಮಧುರವಿದ್ದಂತೆ ಸ್ವಾಭಿಮಾನಿಗಳಾದವರು  ಮೇಲ್ನೋಟಕ್ಕೆ ಒರಟಾಗಿ ಕಂಡರೂ ಆಂತರ್ಯದಲ್ಲಿ ಪ್ರೀತಿ, ವಿಶ್ವಾಸ ಕರುಣೆ, ತ್ಯಾಗಗಳೆಂಬ ಪದಗಳಿಗೆ ಸ್ಥಾನಮಾನಗಳನ್ನು ಮೀಸಲಿಟ್ಟಿರುತ್ತಾರೆ.  ಯಾವುದೇ ವಿಚಾರವು  ತಮ್ಮ ಸ್ವಾಭಿಮಾನವನ್ನು ಕೆಣಕಿದಾಗ ಮಾತ್ರ ಅವರು ವಿವೇಚನಾಶೀಲತೆಯನ್ನು ಕಳೆದುಕೊಂಡು ತಮ್ಮ ತನವನ್ನೇ ಕಳೆದುಕೊಳ್ಳುವ ಹಂತ ತಲುಪುತ್ತಾರೆ.                ಸಿರಿವಂತಿಕೆಯನ್ನು ಎರಡು ದೃಷ್ಠಿಗಳಿಂದ ನೋಡಬಹುದು,  ಮೊದಲನೆಯದು ಹೃದಯ ಸಿರಿವಂತಿಕೆ, ಎರಡನೆಯದು ಐಶ್ವರ್ಯ ಸಿರಿವಂತಿಕೆ.  ನ್ಯಾಯ ಸತ್ಯದ ಪರ ನೇರ ನಡೆ ನುಡಿಗಳನ್ನು ಸದಾ ಹರಿಸುತ್ತಾ ಸಮಾಜದ ಕಣ್ಣಿನಿಂದ ದೂರವಾಗಿರುವ ಸ್ವಾಭಿಮಾನಿಗಳೆಲ್ಲರೂ ಸ್ವಾವಲಂಬನೆಯನ್ನು ಅನುಸರಿಸಿ, ಆತ್ಮೀಯರ ಏಳಿಗೆಗೂ ಸಹಾಯ ಹಸ್ತವನ್ನು ನೀಡಿ ಹೃದಯ ಸಿರಿವಂತಿಕೆಯನ್ನು ಬೆಳೆಸಿಕೊಂಡರೆ ಇದಕ್ಕೆ ಹೊರತಾದವರು ಸ್ವಾವಲಂಬನೆಯ ಜೊತೆಗೆ ಆತ್ಮೀಯರನ್ನು ಅವಲಂಬಿಸಿ ಐಶ್ವರ್ಯದ ಸಿರಿವಂತೆಯನ್ನು ಬೆಳೆಸಿಕೊಂಡಿರುತ್ತಾರೆ.                ಆಕಾಶಕ್ಕೆ ಏಣಿಯಿಲ್ಲ ಆಸೆಗೆ ಕೊನೆಯಿಲ್ಲ ಎಂಬುದು ಸತ್ಯ, ಇಲ್ಲಿ ಸ್ವಾಭಿಮಾನಿಗಳೆಂಬ ಮಾತ್ರಕ್ಕೆ ಅವರಲ್ಲಿ ಆಸೆ ಆಕಾಂಕ್ಷೆಗಳಿಲ್ಲ ಎಂಬರ್ಥವಲ್ಲ ಅವರಲ್ಲೂ  ಮಾನವ ಸಹಜ ಆಸೆಗಳಿರುತ್ತವೆ, ಆದರೆ ಇವು ಸಾಮನ್ಯವಾಗಿ ನಿಗೂಡವಾಗಿರುತ್ತವೆ.  ನಿಶ್ಚಲ ಮನಸ್ಸಿನ ಈ ಅಭಿಮಾನಿಗಳು ಕೈ ಕಟ್ಟಿ ತಲೆಬಾಗಿ ಆಸೆಗಳ ಈಡೇರಿಕೆಗಾಗಿ ಎಂದೂ ಪ್ರಯತ್ನಪಡುವುದಿಲ್ಲ,  ಬದಲಿಗೆ ತಾವು ಪ್ರಯತ್ನ ಪಡದೇ ಬಂದಂತಹ ಅವಕಾಶಗಳನ್ನು ಮಾತ್ರ ತ್ಯಜಿಸದೇ ಉನ್ನತಿಗಾಗಿ ಅವಕಾಶಗಳನ್ನೇ ಸೋಪಾನವನ್ನಾಗಿ ಮಾಡಿಕೊಳ್ಳುತ್ತಾರೆ.  ಇನ್ನೊಬ್ಬರ ಸ್ವತ್ತನ್ನು ಕನಸಿನಲ್ಲೂ ಬಯಸದ ಸ್ವಾಭಿಮಾನಿಗಳಲ್ಲಿ ಅಂಜಿಕೆ ಎಂಬುದು ಸಾಮಾನ್ಯವಾಗಿ ಕಂಡುಬರುವುದಿಲ್ಲ. “ಅಂಜಿಕೆಯ ಮೂಲ ಆಸೆ” ಈ ಆಸೆಗಳಿಗೆ ಸ್ವಾಭಿಮಾನಿಗಳು ಕಡಿವಾಣ ಹಾಕುವುದರ ಮೂಲಕ ಅಂಜಿಕೆಯನ್ನು ತಮ್ಮ ಬದುಕಿನ ಅರ್ಥಕೋಶದಿಂದ ಕಿತ್ತೊಗೆದಿರುತ್ತಾರೆ.  ಇವರಲ್ಲಿ ಅಂಜಿಕೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಬವಿಸಿದರೆ ಸಿಗುವ ಉತ್ತರ ಕೆಟ್ಟದನ್ನು  ಎದುರಿಸುವ ಸಾಮಥ್ರ್ಯವಿರುವ ಇವರು ಒಳ್ಳೆಯದನ್ನು ಕಂಡಾಗ ಶರಣಾಗತಿಯ ಭಾವವನ್ನು ಪ್ರದರ್ಶಿಸಿ ಅನ್ಯರೆದುರು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವ ಜಾಣ್ಮೆವುಳ್ಳವರಾಗಿರುತ್ತಾರೆ      ತಮ್ಮಲ್ಲಿದ್ದ ಸಂಪತ್ತನ್ನು ಕಷ್ಟದಲ್ಲಿರುವವರಿಗೆ ಹಂಚಿ ದಾನಿಗಳೆನಿಸಿಕೊಳ್ಳುವ ಸ್ವಾಭಿಮಾನಿಗಳು  ತಾವೇ ಕಷ್ಟಗಳ ಸರಮಾಲೆಗೆ ಸಿಲುಕಿದಾಗ ಪರರ ಸಹಾಯವನ್ನು ವಿನಯ ಪೂರ್ವಕವಾಗಿ ನಿರಾಕರಿಸುತ್ತಾರೆ ಬಡತನದ ರೇಖೆಯಲ್ಲಿದ್ದು, ಬಡತನವೇ ಕಿತ್ತು ತಿನ್ನುತ್ತಿದ್ದರೂ ಅನ್ಯರ ಆಶ್ರಯ ಪಡೆಯುವುದು ಸೂಕ್ತವಲ್ಲ ಎಂಬ ನಿಲುವುಗಳೊಂದಿಗೆ ಬದುಕನ್ನು ಬರಡು ಮಾಡಿಕೊಂಡು ಸ್ವಾಭಿಮಾನಿಗಳು ನೋವಿನ ನೆರಳಿನಲ್ಲಿರುತ್ತಾರೆ.  “ಸ್ವಾಭಿಮಾನ ಇದ್ದರೆ ಬಾಳಿಲ್ಲ ಇದನ್ನು ಪೋಷಿಸಿದರೆ ಬದುಕಿಲ್ಲ” ಎಂಬ ಕಟು  ಸತ್ಯದ ಮಾತನ್ನು ಅರಿತಿದ್ದರೂ ಅಭಿಮಾನಿಗಳು ಎಂದಿಗೂ ಸ್ವಾಭಿಮಾನಕ್ಕೆ ಕಳಂಕ ತರುವ ರೀತಿಯಲ್ಲಿ ವರ್ತಿಸುವುದಿಲ್ಲ  ಎಂಬುದು ನಿಜಕ್ಕೂ  ಶ್ಲಾಘಿಸುವ ವಿಚಾರವಾಗಿದೆ.      ಸ್ವಾಭಿಮಾನದ ಸೆರೆಯನ್ನು ಸ್ವತಃ ತಾವೇ ನಿರ್ಮಿಸಿಕೊಂಡು ಬಂಧಿತರಾಗಿರುವ ಸ್ವಾಭಿಮಾನಿಗಳ ನಿಲುವು, ನಿಷ್ಟೆ, ಅಚಲತೆ ಮತ್ತು ಸ್ವಾಭಿಮಾನಕ್ಕೆ ನನ್ನದೊಂದು ನಮನ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal