Tumbe Group of International Journals

Full Text


ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ತುಮಕೂರು - ಸಮಾಜಶಾಸ್ತ್ರ ವಿಭಾಗ ವಾರ್ಷಿಕ ವರದಿ 2017-18   ಡಾ. ಅಶ್ವಾಖ್ ಅಹಮದ್ ಬಿ.ಎ ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ತುಮಕೂರು. VISION: To be a depertment of high repute with regard to research application and transmission of knowledge in social sciences to promote social development. MISSION: Training manpower for effective understand of values and social relationship in the society and to evaluate themselves. ಸರ್ಕಾರಿ ಪ್ರಥಮದರ್ಜೆ ಕಾಲೇಜು ತುಮಕೂರು 2011-12 ನೇ ಸಾಲಿನಲ್ಲಿ ಪ್ರಾರಂಭಗೊಂಡಿತು ಅದೇ ವರ್ಷದಲ್ಲಿ ಸಮಾಜಶಾಸ್ತ್ರ ವಿಭಾಗವು ಪ್ರಾರಂಭವಾಯಿತು ಈ ವಿಭಾಗವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿಯುತ್ತಿದೆ.ವಿದ್ಯಾರ್ಥಿಗಳು,ಸಮಾಜದ ಮೌಲ್ಯಗಳು,ಸಾಮಾಜಿಕ ಸಂಬಂದಗಳನ್ನು ಕಲಿಯಲು ಮತ್ತು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ತಿದ್ದಿಕೊಳ್ಳಲು  ಉತ್ತಮವಾದ ಅವಕಾಶ ನೀಡುತ್ತಿದೆ. ಸಮಾಜಶಾಸ್ತ್ರ ವಿಭಾಗವು ಕಾರ್ಯಗಾರಗಳನ್ನು ವಿಶೇಷ ಉಪನ್ಯಾಸಗಳನ್ನು ಸಮೀಕ್ಷೆಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪ್ರಜೆಗಳಾಗಿ ಮತ್ತು ಜವಾಬ್ದಾರಿಯುತ ನಾಗರೀಕರನ್ನಾಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಡಾ. ಅಶ್ವಾಖ್ ಅಹಮದ್ ರವರು ಸಮಜಶಾಸ್ತ್ರದ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯ ಮುಖ್ಯಸ್ಥರಾದ ಪ್ರೊ.  ಜಗಧೀಶ್ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಸಹಾಯದಿಂದ 2017-18 ನೇ ವರ್ಷದ ಪ್ರಾರಂಭವು ಹಿರಿಯ ವಿದ್ಯಾರ್ಥಿಗಳಿಂದ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಂಧರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸಮಾಜಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ ವತಿಯಿಂದ ಸಾಮಾಜಿಕ ಸಮಸ್ಯೆಗಳ ನಿವಾರಣೆಯಲ್ಲಿ ಯುವಜನತೆ ಪಾತ್ರ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದ್ದಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವರದಕ್ಷಿಣೆ ವಿರೋಧಿ ವೇದಿಕೆಯ ಪ್ರದಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರವರು ಮಾತನಾಡಿ ಸಮಾಜದಲ್ಲಿರುವ ಪಿ ಡುಗುಗಳನ್ನು ವಿದ್ಯಾರ್ಥಿಗಳು ನಿವಾರಿಸಬೇಕು ಕಲಿಯುವ ದಿನಗಳಲ್ಲಿಯೆ ಸಮಾಜದ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ತಿಳಿಸಿದರು. ಡಾ. ಅಶ್ವಾಖ್ ಅಹಮದ್ ಬಿ.ಎ.ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸಮಾಜವು ಇಂದು ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿದೆ ಮಾನವೀಯ ಸಂಭಂಧಗಳ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಬಹುದೆಂದು ಕಲಿಯಬೇಕೆಂದು ಮತ್ತು ಆರೊಗ್ಯಕರ ಸಂಭಂಧಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು. ಪ್ರೋ, ಲೀಲಾವತಿಯವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮೊಬೈಲ್‍ಗಳು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಮುಂದಿನ ಭವಿಷ್ಯಕ್ಕೆ ಮನಸ್ಸನ್ನು ಧೃಡಗೊಳಿಸಿ ಕಲಿಕೆಯಲ್ಲಿ ತೊಡಗಬೇಕೆಂದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ನಾಗರಾಜು ಜಿ.ಕೆ. ಡಾ,ತಿಪ್ಪೇಸ್ವಾಮಿ ಪ್ರೊ, ಎಂ,ಎನ್,ಎನ್ ಪ್ರಸಾದ್, ಪ್ರೊ, ಪ್ರಸನ್ನ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅಪೂರ್ವರವರು ಪ್ರಾರ್ಥಿಸಿದರು. ವಿದ್ಯಾರ್ಥಿ ಶ್ರೀಧರರವರು ಸ್ವಾಗತಿಸಿದರು ರಶ್ಮಿ ವಂದಿಸಿದರು ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal