Tumbe Group of International Journals

Full Text


ಹನಿಗವನಗಳು - ಕಣ್ಣಲ್ಲಿ ಕನಸು ಮುದ್ದಾದ ಮುನಿಸು

ಯಶಸ್ವಿನಿ  ಹೆಚ್.ಆರ್.

ದಿತೀಯ ಬಿ.ಎ., (ಹೆಚ್.ಇ.ಇ.)

ಜಿ.ಎಫ್.ಜಿ.ಸಿ., ತುಮಕೂರು.

yashuyash02082000@gmail.com   Ph: 8747884183

*          ಕಣ್ಣಲ್ಲಿ ಕನಸು ಮುದ್ದಾದ ಮುನಿಸು, ಎಂಥಾ ಸೊಗಸು

            ಮುಖದಲ್ಲಿ ನಗುವು, ನನಗಿದೆಯ ಒಲವು

            ಮಗುವಂಥ ಮನಸ್ಸು, ಮುಗಿಯದ ವಯಸ್ಸು

            ನಡತೆಯಲ್ಲಿ ಸೊಗಸು, ಗೆಳತಿ ಹೆಸರಲ್ಲೇ ನಿನಗಿದೆ ಯಾವಾಗಲೂ ಯಶಸ್ಸು

*          ಅಂಧವಾದ ಹೃದಯ ಆಸರೆಗಾಗಿ

            ಮುಕ್ತವಾದ ಮನಸ್ಸು ನೆಮ್ಮದಿಗಾಗಿ

            ಭರವಸೆಯ ಭಾವನೆ ಬದುಕಿಗಾಗಿ

            ನನ್ನೆದೆಯ ನೆನಪು ನಾಳೆಗಾಗಿ, ಈ ನಮ್ಮ ಸ್ನೇಹಕ್ಕಾಗಿ

*          ನಮ್ಮ ಮನಸ್ಸಿನಲ್ಲಿ

            ಬರೀ ಗೆಲುವಿನ ಕಿಚ್ಚು ಇದ್ದರೆ

            ಬೆಂಕಿ ಕೂಡ ನಮ್ಮನ್ನು ಸುಡುವುದಿಲ್ಲ

            ಅದೇ ನಮ್ಮ ಮನಸ್ಸಿನಲ್ಲಿ

            ಬರಿ ಹೊಟ್ಟೆ ಕಿಚ್ಚು ಇದ್ದರೆ

            ಬೆಂಕಿ ಇಲ್ಲದೆ ನಮ್ಮ ದೇಹವನ್ನು ನಾವೇ ಸುಟ್ಟುಕೊಂಡಂತೆ.

*          ಕಣ್ಣಲ್ಲೆ ನಗುತ ಮನದಲ್ಲಿ ಮಿಡಿತ

            ಗುಳಿಕೆನ್ನೆಯಲ್ಲಿ ನೆನಪಾಗೊ ಬಾಲೆ

            ಸ್ನೇಹದಿ ಬಳಿಗೆ ಮನಸಿನ ಒಳಗೆ

            ಕೈ ಹಿಡಿದು ಕರೆವೆ ಸ್ವಾಗತವು, ಈ ಸ್ನೇಹ ಲೋಕಕ್ಕೆ. 

*          ಅಂದು ಕಂಡ ನೀನು,

            ನೀರಿನಲ್ಲಿ ಮೀನು

            ಅಂದಿನಿಂದ ನಾನು,

            ನಿನಗಾದೆ ಪ್ಯಾನು

*          ಕನಸೆಂಬ ಸಾಗರದಲ್ಲಿ

            ಮನಸ್ಸೆಂಬ ಮಂದಿರದಲ್ಲಿ

            ಹಣತೆಯಲ್ಲಿ ಪ್ರೀತಿ ಹುಟ್ಟಿ

            ಯಾವಾಗಲೂ ಈ ಪ್ರೀತಿ ಮಿನುಗುತ್ತಿರಲಿ.

                                         


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal