Tumbe Group of International Journals

Full Text


ಸಂಪ್ರದಾಯ ಬದ್ಧ ಭಾರತೀಯ ಸಮಾಜದ ನಿಲುವು

ಗಿರೀಶ್ ಎಂ..

ಪ್ರಥಮ ಬಿ.ಎ. (ಹೆಚ್.ಇ.ಇ.)

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

girishgy46966@gmail.com   Ph:6361001257

 

            ಭಾರತೀಯ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನಗಳು ಹೀನಾಯ ಸ್ಥಿತಿಯನ್ನು ತಲುಪಿ ಮೂಕ ಪ್ರೇಕ್ಷಕರಂತೆ ಪ್ರಾಧಾನ್ಯತೆ ಇಲ್ಲದಂತೆ, ಸಮಾನತೆ ಇಲ್ಲದೆ ಸಮಾಜದ ನಾನಾ ನಂಬಿಕೆಗಳು, ಸಂಪ್ರದಾಯ, ರೂಢಿಗಳೆಂಬ ಹೋಮದಲ್ಲಿ ಬೇಯುತ್ತಿವೆ. ಸಾಹಿತ್ಯಗಳು, ಗ್ರಂಥಗಳು, ಬುದ್ಧಿ ಜೀವಿಗಳ ಹೇಳಿಕೆಗಳು ಸಾವಿರಗಟ್ಟಲೆಯಾದರೂ ಹೆಣ್ಣಿನ ವಿಚಾರದಲ್ಲಿ ಎಲ್ಲಾ ಸಾಮಾಜಿಕ ಕ್ಷೇತ್ರದಲ್ಲಿ ತಾರತಮ್ಯವೆಂಬುದಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಸ್ತ್ರೀಪರ ವಾದಿಗಳು ಅವುಗಳನ್ನು ಬಣ್ಣಿಸುತ್ತಾ, ತಿಳಿ ಹೇಳುತ್ತಾ ಬಂದಿದ್ದಾದರೂ ಸಹ ಅಸಮಾನತೆ ಸಂವಿಧಾನದ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿ ಇರುವುದನ್ನು ಕಾಣಬಹುದಾಗಿದೆ. ಅರ್ಥವಿಲ್ಲದ ಅನಾಚಾರಗಳು, ನಂಬಿಕೆಗಳಿಗೆ ಇಂತಹ ತಂತ್ರಜ್ಞಾನದ ಯುಗದಲ್ಲಿಯೂ ಹೆಣ್ಣು ಬಲಿಯಾಗುವುದನ್ನು ಕಾಣಬಹುದಾಗಿದೆ. ಅಸ್ತಿತ್ವವೇ ಇಲ್ಲದೇ ಆಚರಣೆಗಳು ರೂಢಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಆಚರಣೆಗೆ ತಂದು ಪ್ರಾಬಲ್ಯವನ್ನು ಮರೆಯುತ್ತಿರುವ ಸಂಪ್ರದಾಯ ವಾದಿಗಳು ಹೆಣ್ಣಿನ ವಿಷಯದಲ್ಲಿ ತುಚ್ಷ ಮನೋಭಾವನೆಯನ್ನು ಹೊಂದಿರುವರು. ಭಾರತವನ್ನು ಸಂಪ್ರದಾಯಗಳ ಬೀಡು ಎನ್ನುವ ಬದಲು “ಮಹಿಳೆಯನ್ನು ಶೋಷಿಸುವ ನಾಡು” ಎಂದರೆ ತಪ್ಪಾಗಲಾರದು. ಅದೇ ಹೆಣ್ಣು ಈ ಸಮಾಜದಲ್ಲಿ ಇಲ್ಲದಿದ್ದರೆ ಜನಾಂಗವೇ ಬೆಳೆಯುತ್ತಿರಲಿಲ್ಲ ಎಂದು ಗೊತ್ತಿದ್ದರೂ, ದೈಹಿಕ ಸಾಮಥ್ರ್ಯತೆ ಒಂದನ್ನೇ ಇಟ್ಟುಕೊಂಡು ಎಲ್ಲದಕ್ಕೂ ಅಸಮರ್ಥಳು ಎಂದಿರುವುದು ಶೋಚನೀಯ ಸಂಗತಿಯಾಗಿದೆ. ಮಹಿಳೆಯರ ಸಮಾನತೆಯನ್ನು ತರಲು ಹಲವಾರು ಸ್ತ್ರೀ ಪರ ವಾದಿಗಳು ಕವಿಗಳು, ಲೇಖಕರು, ಕಾದಂಬರಿಕಾರರು ತಮ್ಮದೇ ಆದ ಬರವಣಿಗೆಗಳ ಮೂಲಕ ಸಮಾಜವನ್ನು ತಿದ್ದುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ.

            ಬಾಲ್ಯವಿವಾಹ, ಪುನರ್ವಿವಾಹ, ಅಸಮಾನತೆ, ದೇವದಾಸಿ ಪದ್ಧತಿಯಂತಹ ದುಷ್ಟ ಆಚರಣೆಗಳಿಗೆ ಮುಗ್ದರಂತೆ ಬಲಿಯಾಗುತ್ತಿರುವುದನ್ನು ಉಗ್ರವಾಗಿ ಖಂಡಿಸಿದವರು ಹಲವಾರು ಮಂದಿ. ಅದರಲ್ಲಿ “ಕೊಡಗಿನ ಗೌರಮ್ಮ” ಸಹ ಒಬ್ಬರು. ಹೆಣ್ಣಿನ ವಿವಾಹದ ಬಗ್ಗೆ ಮತ್ತು ಅವರ ಕಳಂಕದ ಬಗ್ಗೆ ಬಿಡಂಭನಾತ್ಮಕವಾಗಿ ತಿಳಿಸಿದ್ದಾರೆ.

ಕೊಡಗಿನ ಗೌರಮ್ಮ : ಸ್ತ್ರೀಪರ ವಾದಿಯಾದ ಕೊಡಗಿನ ಗೌರಮ್ಮನವರು ಕನ್ನಡ ನವೋದಯ ಕಾಲದ ಮಹಿಳಾ ಸಾಹಿತಿ ಹಾಗೂ ಸೃಜನಾಶೀಲ ಸಾಹಿತಿಯಾಗಿ ಹೆಸರು ಗಳಿಸಿದ್ದಾರೆ. ಕೊಡಗು ಇವರ ಜನ್ಮಸ್ಥಳ. “ಕಂಬನಿ ಮತ್ತು ಚಿಗುರು” ಎಂಬುವುದು ಇವರ ಕಥಾಸಂಗ್ರಹವಾಗಿದ್ದು, ಇವರು ಕಥಾಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ಜೀವನದಲ್ಲಿ ಸ್ವಂತ ಶೋಷಣೆಗೆ ಒಳಗಾದವರು ಕೆಲವೇ ವರ್ಷ ದಾಂಪತ್ಯ ಜೀವನವನ್ನು ನಡೆಸಿದ ಇವರು. ತಮ್ಮ 27 ವಯಸ್ಸಿಗೆ ಮರಣಕ್ಕೆ ತುತ್ತಾದರು. ತಮ್ಮ ಸೂಕ್ಷ್ಮ ಸಂವೇದನೆಯಿಂದ ಕನ್ನಡ ಕಥಾ ಪ್ರಪಂಚಕ್ಕೆ ಹೊಸದಾರಿ ತೋರಿದ ವಿಶಿಷ್ಟ ಕಥೆಗಾರ್ತಿಯಾಗಿದ್ದಾರೆ. ಕೊಡಗಿನ ಗೌರಮ್ಮನವರು ಸಣ್ಣಕಥೆಗಳಲ್ಲಿ ಹೆಣ್ಣಿನ ಮನಸ್ಸಿನ ಒಳ ನೋವುಗಳ ಭಾವುಕ ಸಂಕರ್ಷಗಳು, ಅಸಹಾಯಕತೆಗಳು ಹಾಗೂ ಸ್ತ್ರೀ ಮನಸ್ಸಿನ ಭಾವುಕ ಪ್ರಪಂಚದ ಸೂಕ್ಷ್ಮತೆಯನ್ನು ಪ್ರತಿಬಿಂಬಿತವಾಗಿದೆ.

ಕಥೆಯ ಒಳನೋಟ : ಪುನರ್ವಿವಾಹ : ಕಥೆಯಲ್ಲಿ ಶತಮಾನದಿಂದಲೂ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಹೇಗೆ ಶೋಷಿಸುತ್ತಿದೆ ಎಂಬುದು ಕಥಾವಸ್ತುವಾಗಿದೆ. ಹೆಂಡತಿ ಸತ್ತರೆ ಮತ್ತು ಮದುವೆಯಾಗುವ ಎಲ್ಲಾ ರೀತಿಯ ಹಕ್ಕು ಭಾದ್ಯತೆಗಳನ್ನು ಪುರುಷರು ಹೊಂದಿರುವನು. ಆದರೆ ಅದೇ ಹೆಣ್ಣಿನ ಪುನರ್‍ವಿವಾಹ ವಿಚಾರ ಬಂದಾಗ ಹಿಯ್ಯಾಳಿಕೆಗಳು, ಅಸಹ್ಯ ಮನೋಭಾವನೆಗಳು ಹೇಗೆ ಗಂಡಸರೆಲ್ಲಾ ಬರುವುದೆಂದು ತಿಳಿಸಲಾಗಿದೆ. ಇದಲ್ಲದೇ ಯೌವ್ವನ, ಸೌಂಧರ್ಯ ಅಷ್ಟೇ ಗಂಡಸರಿಗೆ ಪ್ರಧಾನ ಅಷ್ಟೆ ಇನ್ನುಳಿದವು ಉಪಯೋಗಕ್ಕೆ ಬಾರದ ಧೂಳು ತುಂಬಿದ ವಸ್ತುಗಳಂತೆ ಮೂಲೆಯಲ್ಲಿ ಬೀಳುವ ಒಂದು ಶೋಚನೀಯ ಸಂಗತಿ ಇದರಲ್ಲಿ ನಿರೂಪಿತವಾಗಿದೆ.

            ಕಥೆಗಾರ್ತಿ ಮೊದಲ ಭಾಗದಲ್ಲಿ ಒಂದು ಗಂಡು-ಹೆಣ್ಣಿನ ಸಾಂಸಾರಿಕ ಜೀವನದ ದುಃಖಕರ ಸಂಗತಿಯನ್ನು ತಿಳಿಸಿದ್ದಾರೆ. ಇಲ್ಲಿ ಬರುವ ಪಾತ್ರಗಳೆಂದರೆ ಸಾವಿತ್ರಿ, ರಾಜಿ, ಕುಸುಮ ಎಂಬ ಹೆಣ್ಣಿನ ಪಾತ್ರಗಳನ್ನು ಮಾತ್ರ ಪರಿಚಯಿಸಿದ್ದು ಗಂಡನ ಹೆಸರನ್ನು ತಿಳಿಸಿರುವುದಿಲ್ಲ. ಈ ಅಂಶದಲ್ಲೇ ತಿಳಿಯುವುದು ಕಥೆಗಾರ್ತಿಯರಿಗೆ ಗಂಡು ಪ್ರಧಾನದ ಮೇಲಿನ ಅಸಮಾಧಾನ ಭಾವನೆಯನ್ನು ತಿಳಿಯಬಹುದು.

             ಪ್ರೀತಿ ವಾತ್ಸಲ್ಯದಿಂದ ಕೂಡಿದ ಒಂದು ಸಂಸಾರದಲ್ಲಿ ಹೆಂಡತಿ ಸಾವಿತ್ರಿಗೆ ಆಕಸ್ಮಿಕ ಮರಣ ಬರುತ್ತದೆ. ಆ ಸಂದರ್ಭದಲ್ಲಿ ಅವಳ ಗಂಡ 35 ವರ್ಷ ವಯಸ್ಸು, ಹದಿನೈದು ವರ್ಷಗಳಿಂದ ಅವನ ಸಹಚರಿಯಾಗಿದ್ದ ಅವಳನ್ನು ಕಳೆದುಕೊಂಡ ಅವನಿಗೆ ಜೀವನವೇ ನಿಸ್ಸಾರವೆಂದು ತೋರಿಸಿತು. ಅವನು ಮುಂದಿನ ಜೀವನವನನು ವಿಧುರನಾಗಿಯೇ ಇರಬೇಕೆಂದು ನಿಶ್ಚಯಿಸಿಕೊಂಡ. ಅವನಿಗೆ ಒಬ್ಬಳು ಮಗಳಿದ್ದಳು. ಅವಳ ಹೆಸರು ಕುಸುಮ. ಅವರ ತಾಯಿ ಅವನನ್ನು ಮದುವೆಯಾಗಲು ಒತ್ತಾಯಿಸಿದರೂ ಒಪ್ಪುತ್ತಿರಲಿಲ್ಲ.

            ಕಥೆಯಲ್ಲಿ ನಿರೂಪಿಸಿರುವ ಪುರುಷ ಇನ್ನೊಬ್ಬ ಬಾಲೆಯನ್ನು ನೋಡಿ ಈ ಹಿಂದೆ ಇದ್ದಂತಹ ಹೆಂಡತಿಯ ಮೇಲಿನ ಪ್ರಾಮಾಣಿಕತೆ, ನೆನಪು, ಪ್ರೀತಿ ಎಂಬ ಪ್ರೇಮಬಂಧನಗಳನ್ನು ಕಳಚಿ ಮದುವೆಯನ್ನು ಆದರೆ ಅವಳನ್ನೇ ಆಗಬೇಕೆಂಬ ಅವನ ನಿಲುವಿಗೆ ಅವಳ ಸೌಂಧರ್ಯ , ಯೌವ್ವನವೇ ಕಾರಣವೇ ಹೊರತು ಇನ್ನಾವುದಲ್ಲ. ಈ ಮೋಹವೆಂಬ ಮೋಡಿಯು ಯಾವ ರೀತಿ ಮನುಷ್ಯನನ್ನು ಬದಲಾಯಿಸುತ್ತದೆ ಎಂದರೆ ಜನ್ಮ ಕೊಟ್ಟ ಮಗಳ ಮೇಲೂ ಪ್ರೀತಿಯನ್ನು ಇಲ್ಲದಂತೆ ಮಾಡುತ್ತದೆ ಎಂಬುದು ಕಥೆಗಾರ್ತಿಯವರು ವ್ಯಕ್ತಪಡಿಸಿರುವ ಒಂದು ಶೋಚನೀಯ ಸಂಗತಿಯಾಗಿದೆ. ಅದೇ ದಿನವೇ ಆತನು ತಾಯಿಗೆ ಹೇಳಿದ ಮದುವೆಯ ಮಾತುಕತೆಯಾಡಲು ತಿಳಿಸಿದನು. ಈ ಮದುವೆಗೆ ರಾಜಿಯ ತಾಯಿಯೂ ಒಪ್ಪುತ್ತಾರೆ. ಕಾರಣವಿಷ್ಟೇ “ಹುಡುಗನೂ ಆಶ್ವರ್ಯವಂತ”. ಇಲ್ಲಿ ತಿಳಿದು ಬರುವುದೇನೆಂದರೆ ಬಡವರಾದರೂ ಸಂಪತ್ತನ್ನು ಮಾತ್ರ ಅಪೇಕ್ಷಿಸುತ್ತಾರೆ ಅಂತಹ ಸಂಬಂಧಗಳು ಬಂದ ವಿಚಾರ ಮಾಡದೇ ಒಪ್ಪಿಕೊಳ್ಳುತ್ತಾರೆ. ಏಕೆಂದರೆ “ಸಂಪತ್ತು ಅವರ ಮಗಳನ್ನು ಸುಖದಿಂದ ಇಡುತ್ತದೆಯೆಂಬುದು”. ನೆಮ್ಮದಿಯುತ ಜೀವನವನ್ನು ನಡೆಸಲು ಶ್ರೀಮಂತಿಕೆ ಮುಖ್ಯದಲ್ಲ. ಒಳ್ಳೆಯ ಮನಸ್ಸು, ಪ್ರೀತಿ, ವಾತ್ಸಲ್ಯ ಪ್ರಧಾನವೆಂದು ಅರಿಯಬೇಕು. ಇನ್ನೊಂದು ಅಭಿಪ್ರಾಯವನ್ನು ಹೇಳುವುದಾದರೆ ಇಲ್ಲಿ ಸಂಪ್ರದಾಯವಾದ ಮೂಡಿಬರುತ್ತದೆ. ಪೂರ್ವಜರು ನಡೆಸಿರುವ ಸ್ವಂತ ನಿರ್ಧಾರಗಳು (ಯುವಕ-ಯುವತಿಯ ನಿರ್ಧಾರಗಳು ಅಮುಖ್ಯ) ಇನ್ನೂ ಚಾಲ್ತಿಯಲ್ಲಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ.

            ಮದುವೆಗೆ ಇನ್ನೂ ನಾಲ್ಕು ತಿಂಗಳು ಇತ್ತು, ಆ ಪುರುಷನು ರಾಜಿಯ ಮುಖವನ್ನು ಪ್ರತಿ ದಿನವೆಲ್ಲಾ ನೋಡಬಹುದೆಂದು ಶಾಲೆಗೆ ಕಳುಹಿಸಲು ಹೇಳುತ್ತಾನೆ. ಅವನು ಆ ರೀತಿಯಾಗಿ ಹೇಳಿರುವುದು ವಿದ್ಯಾಭ್ಯಾಸಕ್ಕೆ ಭಂಗವಾಗುತ್ತದೆಯೆಂದಲ್ಲಾ, ಬದಲಿಗೆ ಅವಳನ್ನು ಪ್ರತಿದಿನ ನೋಡಬಹುದು ಎಂಬುದಾಗಿದೆ. ಈ 3 ಭಾಗದಲ್ಲಿ ಕಥೆಗಾರ್ತಿಯರು ಮೋಹದಿಂದ ಕೂಡಿದ ಪುರುಷನ ಅಸಭ್ಯ ವರ್ತನೆಯನ್ನು ವ್ಯಂಗ್ಯ ಮಾಡಿದ್ದಾರೆ. ಅಂತಹ ಹೀನಾಕೃತ್ಯಗಳೆಂದರೆ ಪುರುಷನು ಸೀಬೆಯ ಮರದ ಮೇಲೆ ಕುಳಿತು ಅವಳ ಸೌಂಧರ್ಯವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾನೆಂಬುದು ಒಂದಾದರೆ, ಇನ್ನೊಂದು ‘ವಾಕಿಂಗ್’ ಹೋಗುವ ನೆಪದಲ್ಲಿ ಅವಳನ್ನು ನೋಡಲು ಹೋಗುತ್ತಿದ್ದನು. ಆ ಪುರುಷನ ಭಾವನೆ ಏನೆಂದರೆ “ತನ್ನಲ್ಲಿ ಐಶ್ವರ್ಯ ಮತ್ತು ಸಕಲ ಸಂಪತ್ತು ಅವಳಿಗೆ ಸುಖನೀಡುವುದು ಎಂಬುದಾಗಿದೆ.

            ಈ ಗಂಡಸಿನ ಮಗಳು ಕುಸುಮೆ ರಾಜಿಗೆ ತುಂಬಾ ಹತ್ತಿರವಾಗಿದ್ದಳು. ಅವಳನ್ನು ಬಿಟ್ಟು ಇರುತ್ತಿರಲಿಲ್ಲಾ, ಕನಸ್ಸಿನಲ್ಲೂ ಸಹ ರಾಜಿಯ ಹೆಸರನ್ನು ಕನವರಿಸುತ್ತಿದ್ದಳು. ಇಲ್ಲಿನ ವಿಶೇಷತೆ “ಮುಗ್ದ ಮಕ್ಕಳ ಮನಸ್ಸು ಸಕ್ಕರೆಯಂತಿರುವ ಪ್ರೀತಿ, ಮಮತೆಯ ಕಡೆಯೇ ಹೋಗುತ್ತದೆ ಹೊರತು ಕಹಿ ತುಂಬಿದ ಬೇವಿನ ಕಡೆಯಲ್ಲ” ಎಂಬುದು ಗೋಚರವಾಗುತ್ತದೆ. ಬೇವು (ಅಂದರೆ ಪ್ರೀತಿಯೇ ಇಲ್ಲದ ಅವಶ್ಯಕ ಮಾತಾ-ಪಿತ) ಸಾಂಪ್ರದಾಯಿಕವಾಗಿ ಶ್ರೇಷ್ಠತೆಯನ್ನು ಹೊಂದಿದೆಯಾದರೂ ಅದರ ಬಳಕೆ ವಿರಳ. ಅಂದರೆ ಮಕ್ಕಳು ಪ್ರೀತಿಯನ್ನು ತಂದೆ-ತಾಯಿಯಿಂದ ಹೇರಳವಾಗಿ ಅಪೇಕ್ಷಿಸುತ್ತಾರೆ ಎಂದು ತಿಳಿಯುವುದು. ರಾಜಿಗೆ ಈತನ ಮೇಲೆ ಎಳ್ಳಷ್ಟೂ ಪ್ರೀತಿ, ವಿಶ್ವಾಸವಿರಲಿಲ್ಲ. ಆದ್ದರಿಂದಲೇ ಇವಳು ಆತನನ್ನು ಈ ರೀತಿಯಾಗಿ ಪ್ರಶ್ನಿಸಿದಳು “ ಹೆಂಡತಿ ಸತ್ತು ಮೂರು ತಿಂಗಳಾಗಿದೆ. ಮಗಳಿದ್ದಾಳೆ ಅವಳನ್ನು, ಅವಳ ಪ್ರೀತಿಯನ್ನು ಬಿಟ್ಟು ತನ್ನನ್ನು ಕೈಹಿಡಿಯಲು ಬಂದಿದ್ದಾರೆಂದು ವ್ಯಂಗ್ಯ ಮಾಡಿದಳು. ಅದಕ್ಕೆ ಆ ಪುರುಷ ಹೇಳಿದ್ದೂ ಅವನ ಐಶ್ವರ್ಯ ಅವಳನ್ನು ಸುಖವಾಗಿ ಇಡುವುದೆಂದು ಹೇಳಿದನು. ಇಲ್ಲಿ ಈ ಪದ ಮತ್ತೊಂದು ಬಾರಿಯೂ ಬಳಕೆಯಾಗಿ ತಿಳಿಸುವುದೇನೆಂದರೆ ಕೇವಲ ವ್ಯವಹಾರ ಮತ್ತು ಜೀವವನ್ನು ಬಳಕೆಗೆ ಮಾತ್ರವೇ ಉಪಯಗಿಸುತ್ತಿದ್ದ ಹಣ ಈ ದಿನ ಎಲ್ಲಾ ನೈತಿಕ ರಂಗಗಳನ್ನು ಕಬಳಿಸಿರುವುದುದೆಂದರೆ ತಪ್ಪಾಗಲಾರದು.

            ಕೊನೆಗೆ ರಾಜಿಯು ತಾನು ಬಾಲ ವಿಧವೆಯೆಂದಾಗ ಪುರುಷನು ಅವಳ ಮೇಲಿದ್ದ ವ್ಯಾಮೋಹ ಬಿಟ್ಟು ಅಸಹ್ಯ ದುಷ್ಟ ಭಾವನೆಯನ್ನು ಅವಳ ಮೇಲೆ ಹೊಂದುತ್ತಾನೆ. ಅವಳನ್ನು ಅಮಂಗಳವೆಂದು ಕರೆಯುತ್ತಾನೆ. ಒಂದು ಹೆಣ್ಣು ವಿಧವೆಯಾದರೆ ಅವಳು ಅಮಂಗಳ, ಆ ಪುರುಷ ವಿಧುರನೆಂದರೆ ಆ ಸ್ಥಾನ ಅವನಿಗೆ ಹೊಂದುವುದಿಲ್ಲವೇಕೆ? ಎಂಬುದು ಕಥೆಗಾರ್ತಿಯ ದಿಟ್ಟ ಪ್ರಶ್ನೆ. ಆ ಪುರುಷನಿಗೆ ಸತ್ಯಸಂಗತಿಯನ್ನು ಹೇಳುವ ಪೂರ್ವದಲ್ಲಿ ಇದ್ದಂತಹ ಅಭಿಪ್ರಾಯ ಈಗವಿಲ್ಲವೇಕೆ ? ಎಂಬುದು ಮತ್ತೊಂದು ಪ್ರಶ್ನೆ ಕಥೆಗಾರ್ತಿಯರು ರಾಜಿಯೆಂಬ ಪಾತ್ರ ಹೆಣ್ಣಿನ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ಈ ಕೊನೆಯ ಭಾಗದಲ್ಲಿ ನಿಮ್ಮಂತಹ ಕಾಮುಕರ ಮೋಹವನ್ನು ಪ್ರೀತಿಯೆಂದು ತಿಳಿದು ಮದುವೆಯಾಗುವ ಹುಚ್ಚಿ ನಾನಲ್ಲ. ಎಂದಿನವರೆಗೆ ಜೀವನವಿರುತ್ತದೆಯೋ ಅಂದಿನವರೆಗೂ ನಾನು ನನ್ನಂತೆಯೇ ಸಮಾಜದ ಅತ್ಯಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ. ಇಲ್ಲಿ ಕಥೆಗಾರ್ತಿ ಶಾಸ್ತ್ರಗಳ ಹೇಳಿಕೆಗಳನ್ನು ಸ್ಪಷ್ಟೀಕರಿಸುತ್ತಾರೆ. ಮನಸ್ಮೃತಿ, ವಶಿಷ್ಠಸ್ತುತಿ ಮುಂತಾದವುಗಳು ನ್ಯಾಯದ ವಿರೋಧವಲ್ಲ. ಅವಳಿಗೆ ಬಣ್ಣಹಚ್ಚಿ ಸಮಾಜವನ್ನು ಅದರ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಸಂಪ್ರದಾಯವಾದಿಗಳನ್ನು ಖಂಡಿಸುತ್ತಿದ್ದಾರೆ. “ಮನವೂ ವಿಧವಾ ವಿವಾಹಕ್ಕೆ ಪೂರ್ಣ ಸಮ್ಮತಿಯನ್ನು ನೀಡಿದ್ದಾನೆಂದು ಕಥೆಗಾರ್ತಿ ತಿಳಿಸಿದ್ದಾರೆ.”

ಕೊನೆಯಲ್ಲಿ ಆ ಪುರುಷನು ತನ್ನ ಮನಸ್ಸನ್ನು ಬದಲಿಸಿಕೊಂಡು ಕ್ಷಮೆಯಾಚಿಸುತ್ತಾನೆ. ಇಲ್ಲಿ ತಿಳಿಯುವುದೇನೆಂದರೆ ಸಮರ್ಪಕ ಮತ್ತು ಆಧಾರಸಹಿತ ಚರ್ಚೆ ಹಾಗೂ ಹೋರಾಟದಲ್ಲಿ ತೊಡಗಿದರೆ ಯಶಸ್ಸು/ಪ್ರತಿಫಲ ದೊರೆಯುತ್ತದೆ. ಸಮಾಜ ಕಳಂಕ ಮತ್ತು ಶೋಷಣೆರಹಿತವಾಗಿ ಅಭಿವೃದ್ಧಿ ಎಂಬ ಗುರಿಯನ್ನು ಶೀಘ್ರದಲ್ಲೇ ಮುಟ್ಟಬಲ್ಲದು ಎಂಬುದು ನನ್ನ ಅಭಿಪ್ರಾಯ.

   


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal