Tumbe Group of International Journals

Full Text


ಉಬ್ಬಿತಯ್ಯ ಕೊಬ್ಬಿತಯ್ಯ ಕರಿಯ ಕೋಣ

ಡಾ. ಶಿವಲಿಂಗಮೂರ್ತಿ

ಮುಖ್ಯಸ್ಥರು, ಕನ್ನಡ ವಿಭಾಗ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

 

            ಉಬ್ಬಿತಯ್ಯ ಕೊಬ್ಬಿತಯ್ಯ

            ಸೊಕ್ಕಿದಂತ ಕರಿಯ ಕೋಣ

            ಮಂದಿ ಕೇಕೆ ಹಾಕುವಾಗ

            ಬಾಲಬೀಸಿ ಕತ್ತು ಕುಣಿಸಿ

            ಗುದ್ದಿಗುದ್ದಿ ಕೊಂಬು ಹಣೆಗೆ

            ಮಣ್ಣು ಮೆತ್ತಿಕೊಂಡಿತಯ್ಯೋ           ||ಉಬ್ಬಿತಯ್ಯ||

 

            ಹೊಲಸು ಮೂಸಿ ಹಿಗ್ಗಿ ತಾನು

            ನೆಲವು ಕುಸಿಯೆ ಕುಣಿದು ಕುಣಿದು

            ಪೊದರು ಮೆಳೆಯ ನುಗ್ಗಿತಯ್ಯ

            ಸೊಕ್ಕಿನಿಂದ ಕರಿಯಕೋಣ   ||ಉಬ್ಬಿತಯ್ಯ||

 

            ಅಲ್ಲಿ ಇಲ್ಲಿ ನೀರು ಬಾನು

            ಇದರ ಬಿಂಬ ತೋರಿತಯ್ಯ    ||ಉಬ್ಬಿತಯ್ಯ||

 

            ಹಿಡಿಹಿಡಿ ಮೇವು ಹಾಕಿ

            ಮಯ್ಯ ತೊಳೆದು ನುಣುಪು ಮಾಡಿ

            ಬೆನ್ನ ತಟ್ಟಿ ಕೊರಳ ಮುಟ್ಟಿ

            ಭಲೇ ಭಲೇ ಎನುತ ಮಂದಿ

            ಕಾಣದಂತೆ ಮಚ್ಚು ಮಸೆದು

            ಮಾರಿಜಾತ್ರೆ ಕಾಯುತಿಹರೊ ||ಉಬ್ಬಿತಯ್ಯ||

 

            ತನ್ನ ತಾ ಅರಿಯದ ಕೋಣ

            ಮುಖ ಸ್ತುತಿಗೆ ಮರುಳಾಗಿ

            ಕಾಳ ಕತ್ತಲೆಯೊಳಗೆ ಕರಗಿ

            ಕುರುಹು ಇರದೆ ಹೋಯಿತಯ್ಯೊ ||ಉಬ್ಬಿತಯ್ಯ||


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal