Tumbe Group of International Journals

Full Text


ಬದಲಾ() ಹೆಣ್ಣು & ಪುಢಾರಿಗಳು

ಗಂಗಾಂಬಿಕೆ ಬಿ.ಎನ್.

ಉಪನ್ಯಾಸಕರು, ಕನ್ನಡ ವಿಭಾಗ,

 ಸ.ಪ್ರ.ದ. ಕಾಲೇಜು, ತುಮಕೂರು.

gangambikebn@gmail.com    Ph:  8105498121

 

            ಅಂದಿನ ಹೆಣ್ಣು

            ಮಣ್ಣಿನ ಮಡಕೆಯಂತೆ ಬಲು ನಾಜೂಕು

            ಆದರೂ....... ಮಡಕೆಗೆ ಸ್ವಾತಂತ್ರವಿತ್ತು !

            ಉರಿ ಜೋರಾದಾಗ ಕುದಿದು ಉಕ್ಕಲು

            ಅನಿಸಿದ್ದನ್ನು ಕಕ್ಕಲು !

 

            ಹೂಂ............. ಇಂದಿನ ಹೆಣ್ಣು

            ನವನಾಗರೀಕತೆಯ ಜೋಕು ! ಎಲ್ಲ

            ಒತ್ತಡವನ್ನು ತನ್ನೊಳಗಿಟ್ಟುಕೊಂಡು

            ತಡೆತಡೆದು ಇಷ್ಟಿಷ್ಟೇ ಇಷ್ಟಿಷ್ಟೇ

            (ಬಿಸಿ) ಉಸಿರು ಬಿಡಬೇಕು ಕುಕ್ಕರಿನಂತೆ !!

 

ಪುಢಾರಿಗಳು

            ರಾಜಕೀಯದವರ ಚಿತ್ತ ಅತ್ತ-ಇತ್ತ

            ಒಬ್ಬರೂ ಸಾಗಿಸರು ದೇಶವನು ಪ್ರಗತಿಯತ್ತ

            ಬಡವರನು ಉದ್ಧರಿಸುವೆವೆಂದು ಪಣತೊಟ್ಟು !

            ಮತ್ತೆ ಮತ್ತೆ ನಡೆಸುವರು ದೇಶವನು ಓಟಿನತ್ತ

            ಜನರಾದರೋ ಕಾಯುವರು ಎಂದಾದರೊಂದು ದಿನ !

            ಬರುವನು ನಮ್ಮೆಲ್ಲರ ನೆಚ್ಚಿನ ನಾಯಕನೆಂದು

            ಅದಕಾಗಿಯೇ ಮತ್ತೆ ಮತ್ತೆ ಮಾಡುವರು ಓಟು

            ಆದರವರೋ ಮುಗ್ಧ ಮನಸುಗಳನರಿಯದ ಮೂಢರು

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal