Tumbe Group of International Journals

Full Text


ಪರಿಸರಪ್ರೇಮಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಶಾಲಿನಿ ಎಂ.ಡಿ. ಪ್ರಥಮ ಬಿ.ಎಸ್ಸಿ., (ಸಿ.ಬಿ.ಜಡ್.) ಜಿ.ಎಫ್.ಜಿ.ಸಿ., ತುಮಕೂರು.             ಕನ್ನಡದ ಕಥಾ ಸಾಹಿತ್ಯದ ಸಂವೇದನೆಯ ಸಾಧ್ಯತೆಗಳನ್ನು ವಿಸ್ತರಿಸಿದವರು ಪೂರ್ಣಚಂದ್ರತೇಜಸ್ವಿಯವರು ಕುವೆಂಪು ನಂತರ ತಲೆಮಾರಿನ ಅದ್ಭುತ ಪ್ರತಿಭೆ ಮಾತ್ರವಲ್ಲ ಅವರು ಒಂದು ಚಿಂತನಾ ವಿಧಾನವೂ ಹೌದು. ಗ್ರಾಮ ಬದುಕಿನ ಒಳಸುಳಿಗಳನ್ನು ನಿರುದ್ವಿಗ್ನವಾಗಿ ಚಿಂತಿಸುವ ತೇಜಸ್ವಿಯವರ ಕತೆಗಳು ಹೊಸ ಜೀವನ ಮೀಮಾಂಸೆಯನ್ನೇ ಕಟ್ಟುತ್ತವೆ. ತಮ್ಮ ಲವಲವಿಕೆಯ ಬರವಣಿಗೆಯಲ್ಲಿ ದೈನಂದಿನ ಬದುಕಿನ ಸರಳ ವಾಸ್ತವಗಳನ್ನು ಚಿತ್ರಿಸುತ್ತಿರುವಂತೆ ತೋರಿದರೂ ಅವುಗಳ ಕೊನೆಯಲ್ಲಿ ತಾತ್ವಿಕ ಒಳನೋಟವೊಂದನ್ನು ಗಾಢವಾಗಿ ಕಾಣಿಸುತ್ತದೆ. ಯಾವುದೇ ಪಂಥ, ಶೈಲಿ, ಇಸಂಗಳಿಗೆ ಒಳಗಾಗದ ನಿರಂಕುಶ ನಿಲುವಿನ ತೇಜಸ್ವಿ - ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆಧುನಿಕತೆ, ಪರಿಸರ ಮುಂತಾದ ವಿಷಯಗಳ ಬಗ್ಗೆ ವಿಶಿಷ್ಟ ಒಳನೋಟವುಳ್ಳವರು. ಬದುಕಿನ ಬಿಕ್ಕಟ್ಟುಗಳನ್ನು, ಸೂಕ್ಷ್ಮಗಳನ್ನು ಅತ್ಯಂತ ಸರಳವಾಗಿ ನಿರೂಪಿಸುವ ಕಥನಕ್ರಮ ಅವರ ವೈಶಿಷ್ಟ್ಯವಾಗಿದೆ.             ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಸೆಪ್ಟೆಂಬರ್ 08 1938ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಕುವೆಂಪು ಹಾಗೂ ಹೇಮಾವತಿ ದಂಪತಿಯ ಮಗನಾಗಿ ಜನಿಸಿದರು. ಇವರ ವಿದ್ಯಾಭ್ಯಾಸ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಸಿದರು. ಇವರು ವೃತ್ತಿಯಲ್ಲಿ ಕೃಷಿಕ, ಲೇಖಕ, ಛಾಯಾಚಿತ್ರಗಾರ ಹಾಗೂ ಶಿಕಾರಿಯ ಹವ್ಯಾಸವೂ ಇತ್ತು.   ವೃತ್ತಿ-ಪ್ರವೃತ್ತಿ :       ಇವರ ಮೊದಲ ಕಥೆ ಲಿಂಗ ಬಂದ. ಈ ಕತೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜೊತೆಜೊತೆಗೆ ಅಗಾಧವಾದ ಸಾಹಿತ್ಯದ ಕೃಷಿ ಮಾಡಿದವರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗೂ ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಹಿತ್ಯ ಕೃಷಿ : ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕತೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಅನೇಕ ಮಹತ್ವ ಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡಗಳು, ಬೇಟೆಯ ವೈವಿದ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. “ಕರ್ವಾಲೋ” ಕತಿಯಲ್ಲಿ ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಒತ್ತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.             ಪೂರ್ಣಚಂದ್ರ ತೇಜಸ್ವಿಯರ ಪತ್ನಿ ರಾಜೇಶ್ವರಿ ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ‘ನಿರುತ್ತರ’ ಮೂಡಿಗೆರೆಯಲ್ಲಿ ವಾಸಿಸುತ್ತಿದ್ದಾರೆ. ತೇಜಸ್ವಿಯವರು ತಮ್ಮ ಮನೆ ನಿರುತ್ತರದಲ್ಲಿ 2007ರ ಏಪ್ರಿಲ್ 5 ರ ಮಧ್ಯಾಹ್ನ 2 ಘಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು 69 ವರ್ಷ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal