Tumbe Group of International Journals

Full Text


ಭಕ್ತಿಯ ಅಲಂಕಾರ - ಅಪ್ಪನ ಪ್ರೀತಿ - ನಿಸ್ವಾರ್ಥ ಪ್ರಕೃತಿ

ಪ್ರಿಯಾಂಕ ಎಸ್ ಬಿ

ದ್ವಿತೀಯ ವರ್ಷ ಬಿಎಸ್ಸಿ (ಸಿಬಿಜೆಡ್)

ಜಿಎಫ್‍ಜಿಸಿ ತುಮಕೂರು

priyankaseethakal@gmail.com  Ph: 6361311821

ಭಕ್ತಿಯ ಅಲಂಕಾರ

ಈ ಶಂಕರನ ಬಳಿ ನಾ ಬಂದೆ

ಪೂಜಿಸಲೆಂದು

ಅವನ ಸ್ವರೂಪ ಕಂಡು

ಎಂದೂ ಕಾಣದ ನಿನ್ನ ಅಮೂಲ್ಯವಾದ

ಮೊಗವನ್ನು ನೋಡಿ

ಭಕ್ತಿಯಿಂದ ತಂದ ಫಲ ಪುಷ್ಪಗಳಿಂದ ಅಲಂಕರಿಸಿದೆ

ಆ ನಿನ್ನ ಅಲಂಕೃತಿಗೆ ಬಾಗಿ ಶರಣಾದೆ ನನ್ನಪ್ಪ

ನಿನ್ನ ಪುಟ್ಟ ಮಗಳು ನಾನು

ನನ್ನ ದೊಡ್ಡ ಕನಸಿನ ಭಾಗ ನೀನು

ಆ ಕನಸಿನ ಅರಮನೆಯಲ್ಲಿ ನೀನೆ ರಾಜ

ಆ ರಾಜನ ಪ್ರೀತಿಯ ಮಗಳಾದ ರಾಜಕುಮಾರಿಯೇ ನಾನು

ಅಪ್ಪನ ಪ್ರೀತಿ

ಅಪ್ಪನ ನಿನ್ನ ಪ್ರೀತಿಯ ಮಗಳಾದ ನಾನು

ನನಗಾಗಿ ನೀನು ನಿನ್ನ ಜೀವಮಾನವೆಲ್ಲಾ ಸವೆಸಿದೆ

ಹಗಲೆನ್ನದೆ ಇರುಳೆನ್ನದೆ ದುಡಿದೆ

ಮಳೆಯೆನ್ನದೆ ಬಿಸಿಲೆನ್ನದೆ ಶ್ರಮಿಸಿದೆ

ನಿನ್ನ ಕಂಡರೆ ಬಯವಿಲ್ಲದ ನನಗೆ ಬಯವೇಕೋ ಕಾಡುವುದು

ನಿಸ್ವಾರ್ಥ ಪ್ರಕೃತಿ

ನಾ ಕಾಣದ ಸೊಬಗನ್ನು ಕಂಡೆ ನಿನ್ನಲ್ಲಿ

ಅದು ಪುಸ್ತಕವನ್ನು ಹೊರತುಪಡಿಸಿ

ನಿನ್ನ ನೈಸರ್ಗೀಕ ಪರಿಮಳ

ಈ ಪುಸ್ತಕ ಬೀರುವುದಿಲ್ಲ

ಆದರೆ ಪುಸ್ತಕದ ಬೆರುಗು

ನೀ ಬೀರುವೆ

ಹೇ ಪಕೃತಿ ನೀನೇಕೆ ಸ್ವಾರ್ಥಿಯಾಗಲಿಲ್ಲ..?

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal