Tumbe Group of International Journals

Full Text


ಭಾರತ  ರಾಷ್ಟ್ರ ಮತ್ತು ಸಾವಯವ ಕೃಷಿ

ಕೀರ್ತಿ ಕುಮಾರ್ ಸಿ

III BSc CBZ

Govt. First Grade College, Tumkur

Ph: 9620525799,  keerthi9620@gmail.com

               ಭಾರತ  ಒಂದು  ಕೃಷಿ ಪ್ರಧಾನ  ರಾಷ್ಟ್ರ  ಇಲ್ಲಿ  ಶೇಕಡ 60ರಿಂದ 70ರಷ್ಟು ಜನ  ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ, ದಿನೆ ದಿನೆ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕೃಷಿಯಲ್ಲಿ ಇಳುವರಿಯನ್ನು ಹೆಚ್ಚಿಸಲು ಭಾರತದ ರೈತರು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಅತೀ ಹೆಚ್ಚಾಗಿ  ಬಳಸುತ್ತಿದ್ದಾರೆ ,ಇದರಿಂದ ರಾಸಾಯನಿಕ ಗೊಬ್ಬರ ತಯಾರಿಕೆಯ ಕಾರ್ಖಾನೆ ಗಳು ಸ್ಥಾಪನೆ ಯಾಗುತ್ತಿವೆ ಇದರಿಂದ ಬಂಡವಾಳ ಶಾಯಿಗಳು ಹೆಚ್ಚಾಗುತ್ತಿದ್ದಾರೆ ಹೊರತು ರೈತರಿಗೆ ಯಾವುದೇ ಲಾಭ ಇಲ್ಲ,  ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಹೋಬಳಿಗಳಲ್ಲಿ ರಾಸಾಯನಿಕ ಗೊಬ್ಬರದ ಅಂಗಡಿ ಕೀಟನಾಶಕಗಳ ಅಂಗಡಿ ಸ್ಥಾಪನೆ ಯಾಗುತ್ತಿವೆ,  ಆದರೆ ಇದಕ್ಕೆ ಎದುರಾಗಿ  ಇನ್ನೊಂದೆಡೆ  ಸಾವಯವ ಕೃಷಿ ನಶಿಸಿ ಹೋಗುತ್ತಿದೆ  ಸಾವಯವ ಕೃಷಿ ಎಂದರೆ ಹಿಂದೆ ರೈತರು ಅನುಸರಿಸುತ್ತಿದ್ದ  ರೀತಿಯನ್ನು ಅನುಸರಿಸಿ  ಸ್ವಾಭಾವಿಕ ವಸ್ತುಗಳನ್ನು  ಕೃಷಿಯಲ್ಲಿ ಉಪಯೋಗಿಸುವುದು, ಉದಾಹರಣೆಗೆ ಜೈವಿಕ ಗೊಬ್ಬರ ಉಪಯೋಗಿಸುವುದು , ಎರೆಹುಳು ಗೊಬ್ಬರ ಉಪಯೋಗಿಸುವುದು ಕೀಟನಾಶಕವಾಗಿ ಬೇವಿನ ಚಕ್ಕೆ ಯನ್ನು ಉಪಯೋಗಿಸುವುದು ಇತ್ಯಾದಿ .

 ಜೈವಿಕ ಗೊಬ್ಬರ ಅಂದರೆ ಸಗಣಿ ಗೊಬ್ಬರ ಇದನ್ನು ತಯಾರಿಸುವುದು ಸುಲಭ,ಮತ್ತು  ಇದು ಅಗ್ಗದ ಬೆಲೆಯಲ್ಲಿ  ದೊರಕುವಂತದ್ದು ಹಳ್ಳಿಗಳಲ್ಲಿ ದಿನನಿತ್ಯ ಜಾನುವಾರುಗಳು ಹಾಕುವ ಸಗಣಿಯನ್ನು ಒಂದು ಕಡೆ ಶೇಖರಣೆ ಮಾಡಿ ಇದನ್ನು ಒಂದು ವರ್ಷ ಕೊಳೆಯಲು ಬಿಟ್ಟು ಸಗಣಿ ಗೊಬ್ಬರವನ್ನು ತಯಾರಿಸುತ್ತಾರೆ ,ನಂತರ ಬಿತ್ತನೆಗು ಮುಂಚಿತವಾಗಿ  ಅದನ್ನುಹೊಲದಲ್ಲಿ ಹರಡಿ ಉಳುಮೆ ಮಾಡಿ ಸ್ವಲ್ಪ ದಿನ ಹಾಗೆಯೇ ಬಿಟ್ಟು ನಂತರ ಮಳೆ ಬಂದಾಗ ಬಿತ್ತನೆ ಮಾಡುತ್ತಾರೆ , ಈ ಗೊಬ್ಬರವನ್ನು ಜೈವಿಕ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಿರುವುದರಿಂದ ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ,  ಈ ಗೊಬ್ಬರವನ್ನು ನಾವು ಬೇರೆಯವರಿಂದ ಬೇಕಾದರೂ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬದಹುದು ಆದರೆ ಇತ್ತೀಚಿನ ದಿನಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿರುವುದರಿಂದ ಈ ಗೊಬ್ಬರದ ಬೆಲೆಯು ಹೆಚ್ಚಾಗಿದೆ , ಕೃಷಿಯಲ್ಲಿ ಉಪಯೋಗಿಸಲು ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟುರುವುದರಿಂದ ರೈತರ ಮನೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ ಇದರಿಂದ ಸಗಣಿ ಗೊಬ್ಬರದ ಉತ್ಪಾದನೆ ಕಡಿಮೆಯಾಗಿದೆ,  ಇದು ಸಹ ಸಗಣಿ ಗೊಬ್ಬರದ ಬೆಲೆ  ಏರಿಕೆಗೆ ಪೂರಕವಾಗಿದೆ .

                          ರೈತರು ಜೈವಿಕ  ಗೊಬ್ಬರವನ್ನು ತ್ಯಜಿಸಿ ರಾಸಾಯನಿಕ ಗೊಬ್ಬರದ ಮೊರೆಹೋಗಿರುವುದಕ್ಕೆ ಹಲವಾರು ಕಾರಣಗಳಿವೆ ಉದಾಹರಣೆ ತೆಗೆದುಕೊಂಡಾಗ

1.         ಹೆಚ್ಚಾಗುತ್ತಿರುವ ಜೈವಿಕ  ಗೊಬ್ಬರದ ಬೆಲೆ .

2.         ಕಡಿಮೆ ಬೆಲೆಗೆ ಸಿಗುವ ರಾಸಾಯನಿಕ ಗೊಬ್ಬರ .

3.         ಅತೀ ಶ್ರಮದಾಯಕ ವಾಗಿರುವ ಜೈವಿಕಗೊಬ್ಬರದ ತಯಾರಿಕೆ .

ರೈತ ಕಷ್ಟಪಟ್ಟು ಜೈವಿಕ ಗೊಬ್ಬರವನ್ನು  ತಯಾರಿಸುವ ಬದಲು ಕೇವಲ 300 ರೂ. ನಿಂದ 600 ರೂ. ಗಳಿಗೆ ಸಿಗುವ ರಾಸಾಯನಿಕ ಗೊಬ್ಬರದ ಮೊರೆಹೋಗುತ್ತಿದ್ದಾನೆ, ಇದರ ಮುಂದಿನ ಪರಿಣಾಮದ ಬಗ್ಗೆ ಆತನಿಗೆ  ಅರಿವಿಲ್ಲ. ರಾಸಾಯನಿಕಗಳನ್ನು ಬಳಸದೆ ಕೃಷಿಯಲ್ಲಿ  ಉತ್ತಮ ಇಳುವರಿ ಪಡೆಯಬಹುದು ಎಂದು ತೋರಿಸಿಕೊಟ್ಟ ಎಲ್. ನಾರಾಯಣ ರೆಡ್ಡಿ ಯವರು ಸಾವಯವ ಯೋಗಿ ಎಂದೆ ಕರ್ನಾಟಕದಲ್ಲಿ ಹೆಸರು ಪಡೆದಿದ್ದಾರೆ

ಸಾವಯವ ಕೃಷಿ ಯಲ್ಲಿ ಬಳಸುವ ಮತ್ತೊಂದು ಗೊಬ್ಬರ ಎಂದರೆ ಎರೆಹುಳು ಗೊಬ್ಬರ, ರೈತನ ಮಿತ್ರ ಎಂದೆ ಕರೆಯಲ್ಪಡುವ ಎರೆಹುಳುವಿನ ಗೊಬ್ಬರ ಉತ್ತಮ ಗುಣಮಟ್ಟದ್ದು ಮತ್ತು ಅತ್ಯಂತ ಪರಿಣಾಮಕಾರಿ ಯಾದದ್ದು ಇತ್ತೀಚೆಗೆ ಎರೆಹುಳು ಸಾಕಾಣಿಕೆಯ ಕೇಂದ್ರಗಳು ಸ್ಥಾಪನೆ ಯಾಗುತ್ತಿವೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ಕೇಂದ್ರಗಳು ಸ್ಥಾಪನೆಯಾಗುತ್ತಿವೆ ಎರೆಹುಳು ಗೊಬ್ಬರ ತಯಾರಿಕೆಯ ಕೇಂದ್ರಗಳಲ್ಲಿ ಮೊದಲು ಒಂದು ಸಿಮೆಂಟ್ ತೊಟ್ಟಿಯನ್ನು  ನಿರ್ಮಿಸುತ್ತಾರೆ ಅದರಲ್ಲಿ ಸ್ವಲ್ಪ ಮಣ್ಣು ತುಂಬಿ ಅದರ ಮೇಲೆ ಎರೆಹುಳುವಿನ ಮರಿಗಳನ್ನು ಬಿಡುತ್ತಾರೆ ನಂತರ ಅವುಗಳನ್ನು  ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚುತ್ತಾರೆ , ಈ ತೊಟ್ಟಿಯ ಸುತ್ತಲೂ ನೀರು ನಿಂತುಕೊಳ್ಳುವಂತೆ ಮಾಡುತ್ತಾರೆ ಇನ್ನೊಂದು ಮುಖ್ಯ ಸಂಗತಿ ಎಂದರೆ ಈ ತೊಟ್ಟಿಯ ಮೇಲೆ ನೆರವಾಗಿ ಸೂರ್ಯನ ಕಿರಣಗಳು ಬೀಳದಂತೆ ನೋಡಿಕೊಳ್ಳುವುದು, ಇದಕ್ಕಾಗಿ ಮೆಲೆ ಶೀಟ್ ಗಳನ್ನು ಹಾಕುತ್ತಾರೆ  ಪ್ರತಿ ದಿನವೂ ಈ ತೊಟ್ಟಿಗೆ ನೀರನ್ನು ಹಾಕಿ ಯಾವಾಗಲು ತೇವಾಂಶ ಇರುವಂತೆ ನೋಡಿಕೊಳ್ಳುತ್ತಾರೆ ಈಗೆ ಸುಮಾರು ಒಂದರಿಂದ ಎರಡು ತಿಂಗಳು ಮಾಡಿ ಎರೆಹುಳು ಗೊಬ್ಬರ ತಯಾರಿಸುತ್ತಾರೆ, ಎರೆಹುಳು ಗೊಬ್ಬರಕ್ಕೆ ಮಾರುಕಟ್ಟೆ ಯಲ್ಲಿ ಪ್ರತಿ ಕೆ.ಜಿ ಗೆ 5ರೂ. ನಿಂದ 9ರೂ. ವರೆಗೂ ಇದೆ,  ನೀರಿನ ಮತ್ತು ಜಾಗದ ವ್ಯವಸ್ಥೆ ಇದ್ದರೆ ಮನೆಯಲ್ಲಿಯು ಸಹ ಈ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು ಎರೆಹುಳುವಿನ ಮರಿಗಳು ಪ್ರತಿ ಕೆಜಿಗೆ 300 ರೂ. ನಿಂದ  500 ರೂ.ಗೆ ಸಿಗುತ್ತವೆ ಯುಡ್ರಿಲಸ್ ಎಂಬ ತಳಿಯ ಎರೆಹುಳುಗಳು ಉತ್ತಮವಾಗಿರುತ್ತವೆ

               ಕೃಷಿಯಲ್ಲಿ  ಅತೀ ಹೆಚ್ಚು ರಾಸಾಯನಿಕ ಗೊಬ್ಬರವನ್ನು  ಬಳಸುತ್ತಿರುವುದರಿಂದ ದಿನೆ ದಿನೆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ, ಬಿತ್ತಿದ  ಬೆಳೆಯಲ್ಲಿ  ಇಳುವರಿ ಬಾರದೆ ,ಕೃಷಿ ಮಾಡಲು ಮಾಡಿದ್ದ ಸಾಲವನ್ನು ತೀರಿಸಲಾಗದೆ ,ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಭಾರತ ದಲ್ಲಿ ಸುಮಾರು 1,00,000 ಕ್ಕೆ ಸರಾಸರಿ 12.9 ರಷ್ಟು ರೈತರು ಆತ್ಮಹತ್ಯೆ ಮಾಡಿಕೂಳ್ಳುತ್ತಿದ್ದಾರೆ, ಕೃಷಿಯಲ್ಲಿ ರಾಸಾಯನಿಕ ಪದಾರ್ಥಗಳನ್ನುಬಳಕೆ ಮಾಡುತ್ತಿರುವುದರಿಂದ ಈಗಿನ ಮಕ್ಕಳು ತಾಯಿಯ ಗರ್ಭದಲ್ಲೆ ರೋಗಿಗಳಿಗೀಡಾಗುತ್ತಿದ್ದಾರೆ.

                     ರಾಸಾಯನಿಕಗಳ ಬಳಕೆಯಿಂದಾಗುವ ಅನಾಹುತಗಳಿಗೆ ಉತ್ತಮ ಉದಾಹರಣೆ ಎಂದರೆ ಹಸಿರುಕ್ರಾಂತಿ ಇಂದ ಪಂಜಾಬ್ ರಾಜ್ಯದಲ್ಲಿ ಆಗಿರುವ ಅನಾಹುತ,  ಪಂಜಾಬ್ ರಾಜ್ಯದ ಭಾತಿಂಡ ಎಂಬ ಸ್ಥಳದಿಂದ ರಾತ್ರಿ 9.25 ಕ್ಕೆ ಹೊರಟು ಮುಂಜಾನೆ 6 ಗಂಟೆಗೆ ಬಿಕನೆರ್ ಎಂಬ ರಾಜಸ್ತಾನದ ಸ್ಥಳವನ್ನು ತಲುಪುವ ಟ್ರೈನ್ ಅನ್ನು ಕ್ಯಾನ್ಸರ್ ಟ್ರೆನ್ ಎಂದು ಕರೆಯಲಾಗುತ್ತದೆ,  ಕ್ಯಾನ್ಸರ್ ಟ್ರೈನ್ ಎಂದು ಕರೆಯಲು ಮುಖ್ಯ ಕಾರಣವೆಂದರೆ ಈ ಟ್ರೈನ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಅರ್ಧದಷ್ಟು ಜನ ಕ್ಯಾನ್ಸರ್ ರೋಗಿಗಳಾಗಿರುತ್ತಾರೆ ,ಇಷ್ಟೊಂದು ಜನರಿಗೆ ಕ್ಯಾನ್ಸರ್ ಬರಲು ಮುಖ್ಯ ಕಾರಣ  ಪಂಜಾಬ್ ನಲ್ಲಿ ಹಸಿರುಕ್ರಾಂತಿ ಇಂದಾಗಿ ಕೃಷಿಯಲ್ಲಿ ಅತಿ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಿದ್ದು

                   ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಸಾವಯವ ಕೃಷಿ ಕೇಂದ್ರಗಳು ಸ್ಥಾಪನೆಯಾಗುತ್ತಿವೆ, ನಾವು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಉಳಿಸಿ ಹೋಗಬೇಕಾದರೆ ಸಾವಯವ ಕೃಷಿಯನ್ನು  ಪ್ರೋತ್ಸಾಹಿಸುವುದು ಮತ್ತು ಅದನ್ನು ನಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ, ಇಲ್ಲವಾದಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗೆ ಬೆಳೆಯನ್ನು ಬೆಳೆಯಲಿಕ್ಕೆ ಸಾದ್ಯವಾಗದ ಬಂಜರು ಭೂಮಿಯನ್ನು ಬಿಟ್ಟು ಹೋಗಬೇಕಾಗುತ್ತದೆ.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal