Tumbe Group of International Journals

Full Text


ತಾಯಿ ಕೊಡುತ್ತಾಳೆ- ಕವಿ ಬರೆಯುತ್ತಾನೆ

 

ಚೇತನ ಟಿ

III BSc CBZ 1

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

9945387014,  chethant86@gmail.com

 

ತಾಯಿ ಕೊಡುತ್ತಾಳೆ

ತಾಯಿ ಕೊಡುತ್ತಾಳೆ ನಮಗಾಗಿ ಅವಳ ತನುಮನ

 ತಂದೆಯ ಬೆಂಬಲ ಜೀವನದಲ್ಲಿ ಸಂಪೂರ್ಣ

 ಅವರಿಗೆ ನಾವು ಕೊಡಬೇಕೆಂದ್ರೆ ಚೇತನ

 ನಮ್ಮ ಮುಖದಲ್ಲಿ ಇರಬೇಕು ಚೈತನ್ಯ

 ಅವಾಗ ಅವರು ಗರ್ವದಿಂದ ಹೇಳ್ತಾರೆ ಆಹಾ ಹೆತ್ವಿ ಎಂತಹ ಮಕ್ಕಳನ್ನ

 ಅದು ಗೊತ್ತಾದಗ ನಮಗೆ ಅನಿಸುತ್ತದೆ ನಮ್ಮ ಬಾಳು ಧನ್ಯ

 ಇದೆಲ್ಲ ಆಗಬೇಕೆಂದ್ರೆ ಚೆನ್ನಾಗಿ ಸಾಕಬೇಕು ತಂದೆ-ತಾಯಿಯರನ್ನ

 

ಮಗು ಹುಟ್ಟುತ್ತಾ ಆಗುತ್ತೆ ಅಪೌಷ್ಟಿಕ

 ಏಕೆಂದರೆ ಅದಕ್ಕೆ ಸಿಕ್ತಿಲ್ಲ ಉತ್ತಮವಾದ ಪೌಷ್ಟಿಕ

 ಇದೆಲ್ಲ ಆಗ್ತಿರೋದು ನಮ್ಮೆಲ್ಲರ ಮೂಲಕ

 ಏಕೆಂದ್ರೆ ನಾವು ತಿನ್ತಿಲ್ಲ ಶುಭ್ರವಾದ ಆಹಾರಕ

ಅದ್ರ ಬದ್ಲು ತಿನ್ತಿದ್ದೀವಿ  ಚಕ್ಲಿ ನಿಪ್ಪಟ್ಟುಗಳಂತಹ ಕುರುಕ

 ಕುಡಿತಿದ್ದೀವಿ ತಂಪುಪಾನೀಯಗಳಂತಹ ಮಾದಕ

 ಇದರಿಂದ ನಾವು ಇರೋಕಾಗ್ತಿಲ್ಲ  ಸದೃಢವಾಗಿ ದೈಹಿಕ

 ಇದರ ಪರಿಣಾಮ ಆಗೋದು  ಮುಂದಿನ ಜನಾಂಗಕ್ಕ

 ಅದಕ್ಕೆ ನಾವು ತಿನ್ನಬೇಕು ಪೌಷ್ಟಿಕ ಆಹಾರಕ

 

ಕವಿ ಬರೆಯುತ್ತಾನೆ

 

ಕವಿ ಬರೆಯುತ್ತಾನೆ ಕವನ

 ಅವರಲ್ಲಿರುತ್ತದೆ ವಿಷಯದ ಜ್ಞಾನ

 ಅವನ ಕವನದಲ್ಲಿ ಕಾಣುತ್ತಾನೆ ಎಲ್ಲರನ್ನೂ ಸಮಾನ

 ಅದಕ್ಕೆ ಎಲ್ಲರೂ ಓದ್ತಾರೆ ಅವನ ಕವನ

 ಅರ್ಥವಾದ್ರೆ ಅವನ ಕವನ ಅದೇ ದೊಡ್ಡ ಸನ್ಮಾನ

ಅವಾಗ ಗೆಲ್ತಾನೆ ಎಲ್ಲರ ಮನಸ್ಸನ್ನ

ಆಗ ಅವನ ಜೀವನ ಪಾವನ

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal