Tumbe Group of International Journals

Full Text


ಮೂಢ ನಂಬಿಕೆಗಳ ಹಿಂದಿನ ವೈಜ್ಞಾನಿಕ ಕಾರಣಗಳು

Shruti T R

Guest Faculty of Botany

GFGC, Tumkur(INDIA)

Mob: 8095898512,  Email: shrutisharath9@gmail.com

ನಮ್ಮ ಪೂರ್ವಜರು ಆಚರಿಸುತ್ತಿದ್ದ ಕೆಲವು ನಂಬಿಕೆಗಳನ್ನು ನಾವುಗಳು ಇಂದೂ ಮೂಢರಂತೆ ಅದರ ಅರ್ಥ ಅರಿವಿಲ್ಲದೆ ಪಾಲಿಸುತ್ತಿದ್ದೇವೆ. ನಿಜವಾಗಿಯೂ ಅವುಗಳ ಅರ್ಥ ಹುಡುಕಿಕೊಂಡು ಹೊರಟರೆ ಎಲ್ಲಾ ನಂಬಿಕೆಗಳು ಮನುಷ್ಯನ ಜೀವನ ಸುಗಮಕ್ಕೆ ಪೂರಕವಾಗಿದೆಯೆಂದು ತಿಳಿದು ಬರುತ್ತದೆ. ಹೀಗೆ ಪೂರ್ವಜರ ನಂಬಿಕೆಗಳನ್ನು ಮೂಢತನದಿಂದ ಆಚರಿಸುವುದು ಯುವ ಪೀಳಿಗೆಗೆ ಅವುಗಳ ಅರ್ಥವನ್ನು ವೈಜ್ಞಾನಿಕ ಮನೋಭಾವದಿಂದ ವಿವರಿಸುವ ಪ್ರಯತ್ನ ನನ್ನದು.

ಎಕ್ಕದ ಗಿಡ ಕಡಿಯಬಾರದು

ಏಕೆಂದರೆ ಅದರಿಂದ ಬರುವ ಹಾಲು ಅದೆಷ್ಟೋ ಖಾಯಿಲೆಗಳಿಗೆ ರಾಮಬಾಣವಾಗಿದ್ದು ಹಾಗೂ ಕಡಿಯುವ ಸಂದರ್ಭದಲ್ಲಿ ಹಾಲು ಕಣ್ಣಿಗೆ ಬೀಳುವ ಪ್ರಮಾದವಿದ್ದು ಬಿದ್ದರೆ ಕಣ್ಣನ್ನು ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಅದೇ ಅಲ್ಲದೆ ಎಕ್ಕದ ಹಾಲನ್ನು ಕಾಲಿಗೆ ಮುಳ್ಳು ಹೊಕ್ಕ ಸಂದರ್ಭದಲ್ಲಿ ನೋವು ಇಲ್ಲದೆ ಮುಳ್ಳನ್ನು ತೆಗೆಯಲು ಬಳಸಲಾಗುತ್ತದೆ.

ಯುಗಾದಿ ಹಬ್ಬಕ್ಕೆ ಮಾವು ಬೇವಿನ ತೋರಣ

ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿ ಹಬ್ಬದಿಂದ ಮಾವಿನ ಹಾಗೂ ಬೇವಿನ ಎಲೆಗಳಲ್ಲಿ ಹಲವಾರು ಜೀವರಸಾಯನಿಕಗಳಿದ್ದು ಉಸಿರಾಟದ ತೊಂದರೆ ದೂರವಾಗುತ್ತದೆ. ಅದಲ್ಲದೇ ಹಸಿರು ತೋರಣಗಳು ಹೆಚ್ಚು ಆಮ್ಲಜನಕ ಸೂಚಿಸುವುದರ ಜೊತೆಗೆ ಅನೇಕ ಸೊಳ್ಳೆ, ನೋಣಗಳನ್ನು ದೂರವಿಡುತ್ತದೆ.

ಮಂಗಳಾರತಿ ಸಮಯದಲ್ಲಿ ಗಂಟೆ ಬಾರಿಸುವುದು

ಮನುಷ್ಯನ ಮನಸ್ಸು ಬಹಳ ಚಂಚಲ, ದೇವರ ಮುಂದೆ ಏಕಾಗ್ರತೆಯಿಂದ ಪ್ರಾರ್ಥಿಸಲು ಮತ್ತು ಪೂಜಿಸಲೆಂದು ಗಂಟೆ ಬಾರಿಸುತ್ತಾರೆ.

ಹಣೆಗೆ ಕುಂಕುಮವಿಡುವುದು

ಕುಂಕುಮ ಇಡುವ ಜಾಗದಲ್ಲಿ ಎರಡು ನರಗಳಿದ್ದು ಅವುಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ವಿಶೇಷವಾಗಿ ಹೆಣ್ಣುಮಕ್ಕಳು ಹಿಂದಿನ ಕಾಲದಿಂದ ಮನೆಯ ಹೊರಗೆ ಬರದೇ ಇರದಿರುವ ಕಾರಣದಿಂದ ಅವರ ದೇಹದ ಉಷ್ಣತೆಯನ್ನು ನಿಯಂತಿಸಲು ಹಣೆಗೆ ಕುಂಕುಮ ವಿಡುತ್ತಿದ್ದರು. ಅದೇ ರೀತಿ ಕೆಂಪು ಬಣ್ಣವು ಹಲವಾರು ಸೂಕ್ಷ್ಮ ಜೀವಿಗಳನ್ನು ಆಕರ್ಷಿಸುವ ಕಾರಣದಿಂದ ಹಲವಾರು ರೋಗಾಣುಗಳು ಉಸಿರಾಟದಿಂದ ದೇಹಕ್ಕೆ ಸೇರದೆ ಹೊರಗೆ ಉಳಿದು ಹಲವಾರು ಸೋಂಕುಗಳಿಂದ ಕುಂಕುಮ ರಕ್ಷಿಸುತಿತ್ತು ಎಂದು ವೈಜ್ಷಾನಿಕವಾಗಿ ಧೃಢಪಟ್ಟಿದೆ.

ಊರಿನ ಮದ್ಯದಲ್ಲಿ ಅಶ್ವತ್ಥ ವೃಕ್ಷ

ಅಶ್ವತ್ಥ ವೃಕ್ಷವು ತಾನು ಬಳಸುವ ಆಮ್ಲಜನಕಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡಿ ಹೊರ ಬಿಡುವುದರ ಕಾರಣದಿಂದ ಹಾಗೂ ಅಶ್ವತ್ಥ ವೃಕ್ಷದ ಜೊತೆಗೆ ಬೇವಿನ ಮರ ಬೆಳೆಸುವುದರ ಜೊತೆಗೆ ನಾಗರ ವಿಗ್ರಹ ಸ್ಥಾಪಿಸುವುದರಿಂದ ಹೆಣ್ಣಮಕ್ಕಳು ಒಲೆಯ ಮುಂದೆಯೇ ಬೆಂದು ಆಮ್ಲಜನಕದ ಕೊರತೆಯಿಂದ ಖಾಯಿಲೆಗೆ ಒಳಗಾಗ ಬಾರದೆಂಬ ಕಾರಣಕ್ಕೆ ನಾಗರ ಕಟ್ಟೆಯನ್ನು ಕಟ್ಟಿ ಅಲ್ಲಿ ಅಶ್ವತ್ಥ ಮತ್ತು ಬೇವಿನ ಮರವನ್ನು ಬೆಳೆಸುತ್ತಾರೆ.

ಡಿಸೆಂಬರ್ನಲ್ಲಿ ಮಾರಮ್ಮನ ಜಾತ್ರೆ

ವಿಜ್ಞಾನಿಕವಾಗಿ ಡಿಸೆಂಬರ್‌ ತಿಂಗಳಲ್ಲಿ ಉಷ್ಣಾಂಶ ಕಡಿಮೆ ಇದ್ದು ಸೂಕ್ಷ್ಮ ಜೀವಿಗಳಿಂದ ಸೋಂಕು ತಗುಲುವ ಸಂಭವಗಳು ಹೆಚ್ಚು ಇರುತ್ತದೆ ಊರ ಸುತ್ತಲೂ ಬಲಿ ರಕ್ತವನ್ನ ಚೆಲ್ಲವುದರಿಂದ ಸೂಕ್ಷ್ಮ ಜೀವಿಗಳು ಅದರ ಮೇಲೆ ಸೂಂಕು ಹರಡುವ ಜೀವಿಗಳು ಗಾಳಿಯ ಮೂಲಕ ರಕ್ತದ ಮೇಲೆ ಬಿದ್ದು ಬೆರೆಯವರಿಗೆ ಹರಡದಂತೆ ನಿವಾರಣೆಯಾಗುತ್ತದೆ.

ಮನೆಯ ಹೊರಗೆ ಸಗಣಿ ಸಾರಿಸುವುದು

ಹಸುವಿನ ಸಗಣಿಯಲ್ಲಿ ಮೀಥೇನ್‌ ನಂತಹಾ ಹಲವಾರು ಸೂಕ್ಷ್ಮಜೀವಿ ನಾಶಕ ರಸಾಯನಿಕಗಳಿದ್ದು ಮನೆಯ ಆವರಣ ಶುಚಿಯಾಗಿದ್ದರೆ ಮನೆಯಲ್ಲಿನ ಸದಸ್ಯರು ಆರೋಗ್ಯವಾಗಿರುತ್ತಾರೆ

ಇರುವೆ ಗೂಡಿಗೆ ಸಕ್ಕರೆ ಹಾಕುವುದು

ಇರುವೆ ಗೂಡಿಗೆ ಸಕ್ಕರೆ ಹಾಕಿದರೆ ಆಹಾರ ಹುಡುಕಿಕೊಂಡರೆ ಮನೆಗೆ ಬರುವುದನ್ನು ತಡೆಗಟ್ಟಬಹುದು ಹಾಗೂ ಕೆಂಪಿರುವೆ ದಾಳಿಯಿಂದ ಪಾರಾಗಬಹುದು ಎನ್ನುವ ಯೋಚನೆ.

ಊಟದ ಮುಂದೆ ನೀರು ಕುಡಿಯುವುದು

ಊಟದ ಮುಂಚೆ ನೀರು ಕುಡಿಯುವುದರಿಂದ ಪಚನಕ್ರಿಯೆಗೆ ಅನುಕೂಲವಾಗುವ ಜೀವರಸಾಯನಿಕಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಲುಭವಾಗುತ್ತದೆ ಎನ್ನುವ ವಾದ.

ಮಕ್ಕಳಿಗೆ ತಾಯತ ಕಟ್ಟುವುದು

ಮಕ್ಕಳಿಗೆ ದೇವರ ತಾಯತ ಕಟ್ಟುವುದರಿಂದ ಮನೋಭಲ ಹೆಚ್ಚಾಗಿ ಯಾವಾಗಲೂ ಧನಾತ್ಮಕ ಭಾವನೆಯಿಂದ ಯಾವುದೆ ಸಂದರ್ಭವನ್ನು ಧೈರ್ಯವಾಗಿ ಎದುರಿಸುತ್ತಾರೆ.

ಸಾವಿನ ಮನೆಗೆ ಹೋಗಿ ಬಂದರೆ ಸ್ನಾನ ಮಾಡಬೇಕು

ದೇಹವನ್ನು ಸುಡುವಾಗ ಕೆಲವೊಮ್ಮೆ ಸೋಂಕು, ಬ್ಯಾಕ್ಟೀರಿಯಾ ಹರಡುವುದು, ಅಲ್ಲದೆ ಸ್ನಾನ ಮಾಡುವುದರಿಂದ ಮನಸ್ಸು ಫ್ರೆಶ್ ಆಗುವುದರಿಂದ ಸಾವು ಮನೆಗೆ ಹೋಗಿ ಬಂದರೆ ಸ್ನಾನ ಮಾಡಬೇಕೆಂದು ಹಿರಿಯರು ಹೇಳುತ್ತಾರೆ.

ಮುಟ್ಟಿನ ಸಮಯದಲ್ಲಿ ದೇವಾಲಯಕ್ಕೆ ಹೋಗಬಾರದು

ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬಹುದೂರ ನಡೆದುಕೊಂಡು ಹೋಗುತ್ತಿದ್ದರು, ಅಲ್ಲದೆ ಪೂಜೆ ಕಾರ್ಯಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಆ ಸಮಯದಲ್ಲಿ ಅಷ್ಟೊಂದು ಚೈತನ್ಯವಿರುವುದಿಲ್ಲ. ಆದ್ದರಿಂದ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಉದ್ದೇಶದಿಂದ ಆಕೆ ಪೂಜೆಯಲ್ಲಿ ಭಾಗವಹಿಸಬಾರದು, ಅಡುಗೆ ಮನೆಗೆ ಬರಬಾರದು ಮುಂತಾದ ನಿಯಮಗಳನ್ನು ತಂದರು. ಆದರೆ ಕ್ರಮೇಣ ಮುಟ್ಟಿಗೆ ಮೈಲಿಗೆಯ ರೂಪ ನೀಡಿ ಆಕೆಯನ್ನು ದೂರ ಇಡಲಾರಂಭಿಸಿದರು.

 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal