Tumbe Group of International Journals

Full Text


ಗುರುವೇ ನಿಮ್ಮಲ್ಲಿ ಇಲ್ಲಾ ಎಳ್ಳಷ್ಟೂ ಅಹಂ ನಂದನ್ ಬಿ ಎನ್ (Nandan B N) Student-II BSc PCM Government First Grade College, Tumkur, India Mob: 8088875697   email : nandanbdpura@gmail.com ಗುರುವೇ ನಿಮ್ಮಲ್ಲಿ ಇಲ್ಲಾ ಎಳ್ಳಷ್ಟೂ ಅಹಂ ಸರಳತೆಯಲ್ಲಿ ನೀವು ಅಬ್ದುಲ್ ಕಲಾಂ ನಿಮಗಿದೆ ನನ್ನ ಸಾವಿರ ಸಲಾಂ ನಿಮ್ಮ ಒಡಲು ತಾಯಿಯ ಮಡಿಲು ನಿಮ್ಮಲ್ಲಿಹುದು ಕರುಣೆಯ ಕಡಲು ನಾವೆಲ್ಲಾ ಆದೇವು ನಿಜಕ್ಕೂ ದಿಗಿಲು   ನಿಮ್ಮ ಮುಖದ ಕಾಂತಿಯನ್ನು ನೋಡಿ ನಾಚಿದ ಬಾನಿನ ಸೂರ್ಯ ನಿಮ್ಮಲ್ಲಿ ಅಡಗಿಹುದು ಸಿಂಹ ಹೃದಯದ ಧೈರ್ಯ ನಿಮ್ಮಲ್ಲಿದೆ ಆಳವನ್ನು ಅರಿಯದ ಮನೋಸ್ಟೈರ್ಯ ನೀವು ಮಾಡುವಿರಿ ಸದಾ ಸತ್ಕಾರ್ಯ   ನೀವು ಬಲ್ಲಿರಿ ಸಕಲ ಜ್ಞಾನ ತೊಡೆದು ಹಾಕಿದಿರಿ ನಮ್ಮ ಅಜ್ಞಾನ ನಿಮ್ಮಿಂದ ಹೆಚ್ಚಿತು ನಮ್ಮ ಸುಜ್ಞಾನ ಇದಕ್ಕೆಲ್ಲಾ ಕಾರಣ ನಿಮ್ಮ ಜ್ಞಾನ   ನಾವೆಂದು ಕಾಣಲಿಲ್ಲ ನಿಮ್ಮ ಮುಗದಲ್ಲಿ ಮುನಿಸು ನಿಮ್ಮ ಕೈಯಲ್ಲಿ ಕಲಿತಿದ್ದು ನಿಜವಾಗಲೂ ಒಂದು ಕನಸು ಸದಾ ನಿಮ್ಮೊಡನೆ ಇರಬೇಕೆಂದು ಬಯಸುತ್ತಿದೆ ಮನಸ್ಸು ಎಲ್ಲ ಬಲ್ಲ ಬುದ್ದಿವಂತ ಸರಳ ಸಜ್ಜನಿಕೆಯ ಶ್ರೀಮಂತ ಸರ್ವಕಾಲಕ್ಕೂ ಸತ್ಯವಂತ ನಾನು ಕಂಡ ಹೃದಯವಂತ   ನಮಗೆಲ್ಲ ಆದರ್ಶ ನಿಮ್ಮಯ ತತ್ವ ನಮಗೀಗ ತಿಳಿಯುತ್ತಿದೆ ನಿಮ್ಮ ಮಹತ್ವ ನೀವಿರದ ದಿನಗಳು ಬರೀ ಕಾಲ ಹರಣ ಕಣ್ಣಿದ್ದೂ ನಾನು ಕುರುಡ ವಿದ್ಯಾರ್ಥಿ ನಮಗೆಲ್ಲ ಬೇಕು ನಿಮ್ಮಂತ ಸಾರಥಿ ನಿಜಕ್ಕೂ ನೀವು ಪ್ರೇಮ ಮೂರ್ತಿ ನೀವೇ ನಮಗೆಲ್ಲ ನಿಜವಾದ ಸ್ಫೂರ್ತಿ ಏಕಲವ್ಯನ ಯಶಸ್ಸಿಗೆ ಆ ಗುರುಮೂರ್ತಿ ನಮ್ಮೆಲ್ಲರ ಯಶಸ್ಸಿಗೆ ಈ ಗುರುಮೂರ್ತಿ ಎಲ್ಲೆಡೆ ಹಬ್ಬಲಿ ನಿಮ್ಮ ಕೀರುತಿ ಕವನದ ರೂಪದಲ್ಲಿ ನಾ ಬೆಳಗುವೆ ನಿಮಗೆ ಆರತಿ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal