Deprecated: Required parameter $contactemail follows optional parameter $action in /home/u416200609/domains/tumbe.org/public_html/application/helpers/auth_helper.php on line 417
Tumbe Group of International Journals Tumbe Group of International Journals

Full Text


ಕನ್ನಡಿ ಮಾತನಾಡಲಿಲ್ಲ!

ಶ್ರೀವಿದ್ಯಾ

(Shreevidya A)

Student- 1st M.Sc.  Physics

Mangalore University, Mangalagangotri, Konaje, Mangalore.

Valachil padav, Farangipete, Mangalore.

ashreevidya97@gmail.com  Mobile: 9448028127


ಹೊಸದೊಂದು ಕನ್ನಡಿ

ಮನೆಯ ಗೋಡೆಯನೇರಿತು,

ಹೊಸ ಮನದ ಹಸುಳೆಯಲಿ

ತುಸು ಮಂದಹಾಸವನೆರಚಿತು

ಕನ್ನಡಿ ನಕ್ಕಿತು ಎಳಸು ಮುಗ್ಧತೆಯ  ಕಂಡು,

ಮೀಸೆ ತಿರುವಿತು ಸಾಧನೆಗಳ ವರ್ಚಸ್ಸ ಕಂಡು,

ಪ್ರತಿಫಲಿಸುವುದಂತೆ, ಅಥವಾ ಜೊತೆಗೂಡುವುದೋ?

ಏನೋ ಒಂದು ; ಜೀವನಕೇ ಅಂಟಿತ್ತು.

ಕನ್ನಡಿಯ ಬಣ್ಣಗಳು ನನ್ನ ಮುಖದ ಮೇಲಿತ್ತು!

ಕಣ್ಣೀರ ಕಂಡು ಕನ್ನಡಿ ಬೆನ್ನ ಸವರಿತ್ತು,

ನೋವುಗಳ ದಾರಿ ಕಂಡು ಕಾಲು ಹೆಜ್ಜೆ ಕಿತ್ತಾಗ,

ಕಣ್ಣೀರು ಸತ್ತಿತ್ತು, ಕನ್ನಡಿ ಸಾಯಲಿಲ್ಲ..

ಅದೇನನೋ ಗೊಣಗುತ್ತಿತ್ತು, ಕೇಳಬೇಕಲ್ಲವೇ?

ಅಸಡ್ಡೆ! , ಕನ್ನಡಿ ಮಾತಾಡುವುದೇ?!

ಬಹುದೂರಕೆ ಕಾಲು ಸವೆಸಿ,

ಮನೆಗೆ ಹಿಂತಿರುಗಿದ ನನ್ನ ಹೆಜ್ಜೆಗಳು

ಕನ್ನಡಿಯ ಕಂಡು " ಹಲೋ " ಎಂದವು.

ಕನ್ನಡಿ ಮರುಧ್ವನಿಸಲಿಲ್ಲ !

ಬೆನ್ನು ತೋರಿಸಿದೆ, ಓರೆಗಣ್ಣು ಬೆವತಿತ್ತು,

ಕನ್ನಡಿ ಹಿಂಬಾಲಿಸುತ್ತಲೇ ಇತ್ತು!!


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal