ಗೊರವನಹಳ್ಳಿ ಶ್ರೀ ಮಹಾಲಕ್ಷಿ ಮಹಾತ್ಮೆ
ಅಂಜನ ಆರ್ ಜಿ
U11GT21C0481
ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104
renukargrenu@gmail.com Ph.no: 9663614905
ಪರಿಚಯ
ತುಮಕೂರು ಜಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಲಕ್ಷ್ಮಿದೇವಸ್ಥಾನವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಈ ಗ್ರಾಮವು ತನ್ನಲ್ಲಿ ಇರುವ ಲಕ್ಷ್ಮಿದೇವಸ್ಥಾನದಿಂದಾಗಿ ಚಿರಪರಿಚಿತವಾಗಿದೆ. ಲಕ್ಷ್ಮಿ ಎ೦ದ ಕೂಡಲೇ ನೆನಪಿಗೆ ಬರುವುದು ಕೊಲ್ಹಾಪುರ ಲಕ್ಷ್ಮಿ. ಆದರೆ, ಗೊರವನಹಳ್ಳಿ ಕರ್ನಾಟಕದ ಕೊಲ್ಹಾಪುರವಾಗಿ ಬೆಳೆಯುತ್ತಿದೆ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಲೇತ್ರವನ್ನುವ ಹಿರಿಮೆಗೆ ಗೂರವನಹಳ್ಳಿ ಪಾತ್ರವಾಗಿದೆ.
ಮಹಾಲಕ್ಜ್ಮಿ. ಅನಾದಿ ಕಾಲದಿ೦ದಲೂ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಬ೦ದಿರೋ, ಭಾಗ್ಯಲಕ್ಷ್ಮಿ ಗೊರವನ ಹಳ್ಳಿಯಲ್ಲಿ ನೆಲೆಸುವ ಮೂಲಕ, ಗೊರವನಹಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಮಾಡಿದ ಮಹಾತಾಯಿ. ಗೊರವನ ಹಳ್ಳಿ ಮಹಾಲಕ್ಷ್ಮಿ ಅ೦ದ್ರೆ ಸಾಕು. ಭಕ್ತಿ ಭಾವ ಉಕ್ಕಿ ಹರಿಯುತ್ತೆ. ಅಮ್ಮಾ ತಾಯಿ ನನ್ನ ಸ೦ಕಷ್ಟ ದೂರ ಮಾಡಮ್ಮ ಅಂತ ಬೇಡಿಕೊ೦ಡರೆ ಸಾಕು. ಈ ಮಹಾತಾಯಿ ಅವರನ್ನು ಉದ್ದರಿಸ್ತಾಳೆ. “ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಾಳೆ. ಕಲಿಯುಗದಲ್ಲೂ ಕಾಣಿಸಿಕೊಳ್ಳೋ ಈ ಕರುಣಾಮಯಿ, ಕಂಗಾಲದವರಿಗೆ ಕರುಣೆ ತೋರಿ ಕೃಪೆ ನೀಡುತ್ತಾಳೆ. ಇದೇ ಕಾರಣಕ್ಕೆ ಲಕ್ಮಾಂತರ ಮ೦ದಿ ಈ ಗೊರವನಹಳ್ಳಿಗೆ ಬ೦ದು ಮಹಾಲಕ್ಷ್ಮಿಯ ಪಾದಕ್ಕೆ ಬಿದ್ದು ಧನ್ಯರಾಗ್ತಾರೆ.
ಈ ದೇವಸ್ಥಾನದಲ್ಲಿ ಪ್ರತಿ ಮ೦ಗಳವಾರ, ಶುಕ್ರವಾರ ಹಾಗು ಭಾನುವಾರಗಳ೦ದು ವಿಶೇಷ ಪೂಜಿ ಇರುತ್ತದೆ. ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದವರು ಇಲ್ಲಿ ಒಂದು ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ. ಸಾರ್ವಜನಿಕರು ಅಗತ್ಯ ಹಣವನ್ನು ನೀಡಿ ಇದರ ಉಪಯೋಗ ಪಡೆದುಕೊಳ್ಳಬಹುದು.
ದೇವಾಲಯ ಮತ್ತು ಅದರ ಇತಿಹಾಸ
ಮಹಾಲಕ್ಷ್ಮಿ ಈ ಗೊರವನಹಳ್ಳಿಯಲ್ಲಿ ಬ೦ದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ದೇಶದ ಎಲ್ಲ ದೇಗುಲಗಳ೦ತೆ ಈ ದೇಗುಲಕ್ಕೂ ತನ್ನದೇ ಆದ೦ತಹ ಒಂದು ಸುಂದರ ಇತಿಹಾಸವಿದೆ. ಈ ದೇಗುಲದಲ್ಲಿ ಪೂಜಿಸಲ್ಪಡುತ್ತಿರುವ ಮಹಾಲಕ್ಷ್ಮಿ ದೇವಿಯ ಮುಖ್ಯ ವಿಗ್ರಹವು ಸ್ವಯಂ ಆವಿರ್ಭವಿಸಿದೆ ಎಂದು ನಂಬಲಾಗಿದೆ. ಸ್ಮಳೀಯ ಇತಿಹಾಸಕಾರರ ಪ್ರಕಾರ, ಈ ದೇಗುಲ ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿದೆ. 1900 ರ ದಶಕದ ಆರಂಭದಲ್ಲಿ, ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ್ಯ ಎಂಬ ರೈತನು ವಾಸಿಸುತ್ತಿದ್ದನು. ಇವರಿಗೆ ಒಂದು ಹೆಣ್ಣಿನ ಇವರಿಗೆ ಶರೀರವಾಣಿಯೊಂದು ಕೇಳಿಸಿತ್ತು. ನಾನು ನಿಮ್ಮ ಮನೆಗೆ ಬರುತ್ತೀನಿ, ಕರ್ಕೊಂಡು ಹೋಗು ಅ೦ತ, ಆಶರೀರವಾಣಿ ಹೇಳಿತ್ತು. ಆಶರೀರವಾಣಿ ಪದೇ ಪದೇ ಕೇಳಿಸ್ತಾ ಇತ್ತು. ಇದರಿಂದ ವಿಚಲಿತನಾದ ಅಬ್ಬಯ್ಯ, ತನಗಾದ ಅನುಭವವನ್ನು ತನ್ನ ತಾಯಿಗೆ ಹೇಳಿದರು. ಇನ್ನೊಮ್ಮ ಆಶರೀರವಾಣಿ ಕೇಳಿಸಿದರೆ, ನೀನು ದೆವ್ವವಾದ್ರೆ, ಅಲ್ಲೇ ಇರು. ದೇವರಾದ್ರೆ ಬಾ ಅ೦ತ ಹೇಳು ಅ೦ತ, ಅಬ್ಬಯ್ಯನ ತಾಯಿ ಹೇಳಿದರು. ತಾಯಿಯ ಮಾತಿಗೆ ಒಪ್ಪಿಕೊ೦ಡ ಅಬ್ಬಯ್ಯ ತನ್ನ ಕೆಲಸವನ್ನು ಮುಂದುವರೆಸಿದ. ಮತ್ತೆ ಅದೇ ಆಶರೀರವಾಣಿ ಕೇಳಿಸ್ತು ಅಬ್ಬಯ್ಯವಿಗೆ. ತಾಯಿ ಹೇಳಿದಂತೆ, ದೆವ್ವವಾದ್ರೆ ಬರಬೇಡ. ದೇವರಾದ್ರೆ ಬಾ ಅ೦ತ ಹೇಳಿದ. ಮಹಾಲಕ್ಷ್ಮಿ ಕೊಳದಿ೦ದ ಎದ್ದು ಬಂದು 'ಅಬ್ಬಯ್ಯನ ಮನೆ ಸೇರಿದಳು. ಆತ ತನ್ನ ಮನೆಯಲ್ಲಿ ಈ ವಿಗ್ರಹವನ್ನು ಪೂಜಿಸಲು ಆರಂಭಿಸಿದನು.
ಆ ಸಂದರ್ಭದಲ್ಲಿ ದೇವಿ ಆತನಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವದಿಸಿದರು. ತನಗೆ ಅನಾಯಾಸವಾಗಿ ದೊರೆತ ಸಂಪತ್ತನ್ನು ಆತ ದಾನಕ್ಕೆ ವಿನಿಯೋಗಿಸಿದನು. ಈತನ ಸಮಾಜ ಸೇವಯ ಗೌರವಾರ್ಥವಾಗಿ ಆತನ ಮನೆಗೆ ಲಕ್ಷ್ಮಿ ನಿವಾಸ ಎ೦ದು ಜನ ಹೆಸರಿಟ್ಟಿರು. ಅಬ್ಬಯ್ಯ ಸಹೋದರ ತೋಟದಪ್ಪ ಕೂಡ ಅಬ್ಬಯ್ಯನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು. ಆತ ಕೂಡ ಮಹಾಲಕ್ಷ್ಮಿ ದೇವಿಯನ್ನು ಪೂಜಿಸಲಾರಂಭಿಸಿದನು. ಒ೦ದು ರಾತ್ರಿ ದೇವಿಯು ಅವನ ಕನಸಿನಲ್ಲಿ ಪ್ರತ್ಯಕ್ಷಳಾಗಿ ತನಗೆ ದೇವಾಲಯವನ್ನು ನಿರ್ಮಿಸುವಂತೆ ಆದೇಶ ನೀಡಿದಳು. ಈ ಆದೇಶದ ಪ್ರಕಾರ ಆತ ದೇವಿಗೆ ದೇವಾಲಯವನ್ನು ನಿರ್ಮಿಸಿದನು ಮತ್ತು ಈ ಗುಡಿಯಲ್ಲಿ ವಿಗ್ರಹವನ್ನು ಪೂಜಿಸಲು ಪ್ರಾರಂಭಿಸಿದನು. ತೋಟದಪ್ಪನ ಮರಣದ ನಂತರ, ಚೌಡಯ್ಯ ಎನ್ನುವಾತ ಮಹಾಲಕ್ಷ್ಮಿ ದೇವಿಗೆ ಪೂಜಿಗಳನ್ನು ಮಾಡಲು ಪ್ರಾರಂಭಿಸಿದನು. ಅಂದಿನಿ೦ದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು.
ಆದರೆ 1910 ಮತ್ತು 1925 ರ ನಡುವಣ ಹದಿನೈದು ವರ್ಷಗಳ ಕಾಲ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ. 1925 ರಲ್ಲಿ, ದೇವಿಯ ಪರಮ ಭಕ್ತೆ ಕಮಲಮ್ಮ ಗೊರವನಹಳ್ಳಿಗೆ ಆಗಮಿಸಿದರು. ಈ ಸ೦ದರ್ಭದಲ್ಲಿ ದೇಗುಲ ಸುಸ್ಥಿತಿಯಲ್ಲಿ ಇಲ್ಲದಿರುವುದನ್ನು ಕ೦ಡು ಮಮ್ಮಲ ಮರುಗಿದರು. ಬಳಿಕ, ಅವರು, ದೇವಾಲಯವನ್ನು ಪುನರುಜ್ನೀವನಗೊಳಿಸಿದರು. ಆ ಬಳಿಕ ದೇವಿಗೆ ಪೂಜೆ ಮರು ಆರಂಭವಾಯಿತು. ಆದರೆ ಕಲವು ಕಾರಣಗಳಿ೦ದ ಒಂದು ವರ್ಷದ ನಂತರ ಅವರು ಗೊರವನಹಳ್ಳಿ ಬಿಟ್ಟು ತೆರಳಿದರು. ಬಳಿಕ ಸುಮಾರು ೨6 ವರ್ಷಗಳ ನಂತರ ಅವರು ದೇವಾಲಯಕ್ಕೆ ಮರಳಿ ಬ೦ದು 1952 ರಲ್ಲಿ ಪುನರ್ ಪೂಜೆ ಆರಂಭಿಸದರು. ಇದರಿ೦ದಾಗಿ ಮಹಾಲಕ್ಷ್ಮಿ ಸಂತುಷ್ಠಳಾದಳು. ಬೇಡಿ ಬ೦ದ ಲಕ್ಮಾಂತರ ಮಂದಿ ಭಕ್ತರನ್ನು ಅನುಗ್ರಹಿಸುವ ಮೂಲಕ, ಎಲ್ಲೆಡೆ ಮನೆ ಮಾತಾದಳು. ಇದೇ ಕಾರಣಕ್ಕೆ, ಲಕ್ಮಾಂತರ ಮಂದಿ ಈ ಮಹಾಮಾತೆಯನ್ನು ನೋಡೋಕೆ, ಗೊರವನಹಳ್ಳಿಗೆ ಬರ್ತಾ ಇದ್ದಾರೆ. ಬ೦ದ ಭಕ್ತರು ಮಹಾಲಕ್ಷ್ಮಿಗೆ ತಮ್ಮ ಕೈಲಾದ ಕಾಣಿಕೆಯನ್ನು ನೀಡಿ ಹೋಗ್ತಾರೆ. ಚಿನ್ನಾಭರಣಗಳನ್ನು ದೇವಿಗೆ ಅರ್ಪಿಸಿ ಹೋಗ್ತಾರೆ.
ಅಂದಿನಿಂದ ಈ ದೇವಾಲಯವು ಮಹಾಲಕ್ಜ್ಮಿ ದೇವಿಯ ಭಕ್ತರಿಗೆ ತೀರ್ಥಕ್ಷೇತ್ರವಾಯಿತು. ದೇಶದ ಎಲ್ಲ ಕಡೆಗಳಿ೦ದ, ಅದರಲ್ಲೂ ದಕ್ಷಿಣ ಭಾರತದ ಎಲ್ಲೆಡೆಯಿಂದ ಇಲ್ಲಿಗೆ ದೇವಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕಮಲಮ್ಮ ಅವರ ಮರಣಾ ನ೦ತರ ಅವರ ಪುತ್ರರಾದ ಪ್ರಸನ್ನರವರು ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರ೦ತೆ!
ಮಹಾಲಕ್ಷೀ, ಹೆಸರೇ ಸೂಚಿಸುವ೦ತೆ ಐಶ್ವರ್ಯದ ದೇವತೆ. ಮಹಾಲಕ್ಷ್ಮೀಯನ್ನು ಪೂಜಿಸಿದರೆ ಮನೆಯು ಸದಾ ಧನ, ಸ೦ಪತ್ತಿವಿ೦ದ ಕೂಡಿರುತ್ತದೆ ಎನ್ನುತ್ತಾರೆ. ಅಂತಹದ್ದೇ ಒ೦ದು ಮಹಾಲಕ್ಕಿಃ ದೇವಾಲಯದ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ ಮಹಾಲಕ್ಜ್ಮೀಯನ್ನು ಪೂಜಿಸಿದಲ್ಲಿ ಶ್ರೀಮ೦ತರಾಗುತ್ತಾರ೦ತೆ.
ಲಕ್ಷದಿಪೋತ್ಸವ
ಈ ದೇವಾಲಯದಲ್ಲಿ ಲಕ್ಷದೀಪೋತ್ಸವವು ಪ್ರಮುಖ ಹಬ್ಬವಾಗಿದೆ. ಕಾರ್ತಿಕ ಮಾಸದಂದು (ನವಂಬರ್ ಕೊನೆ - ಡಿಸೆ೦ಬರ್ ತಿಂಗಳ ಮೊದಲ ವಾರ) ಲಕ್ಷ್ಮದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ದೇಗುಲದ ವಾಸ್ತುಶಿಲ್ಪ
ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು :900 ರ ದಶಕದ ವಿಶಿಷ್ಟವಾದ ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಒ೦ದು ಸು೦ದರ ಉದಾಹರಣೆಯಾಗಿದೆ. ದೇವಾಲಯವು ದೊಡ್ಡದಾದ, ಬಹುವರ್ಣದ ಗೋಪುರವನ್ನು ಹೊಂದಿದೆ ಮತ್ತು ಎರಡೂ ಬದಿಗಳಲ್ಲಿ ಸಣ್ಣ ಕಮಾನುಗಳನ್ನು ಹೊಂದಿದೆ. ದೇವಾಲಯದ ಎರಡೂ ಬದಿಯಲ್ಲಿ ದೊಡ್ಡ ವರಾಂಡ ಇದೆ. ದೇಗುಲದ ಅಧಿದೇವತೆ ಶ್ರೀ ಮಹಾಲಕ್ಕಿ, ವಿಗ್ರಹವು ಗರ್ಭಗೃಹದಲ್ಲಿ ಪ್ರತಿಷ್ಠಾಪಿತವಾಗಿದೆ. ಶ್ರೀ ನಾಗದೇವತೆ, ಶ್ರೀ ಮಾರಿಕಾ೦ಬಾ ದೇವತೆ ದೇಗುಲ ಕೂಡ ಇಲ್ಲಿದೆ.
ದೇಗುಲ ಭೇಟಿ
ಈ ಡೇವಸ್ಥಾಸವು ವರ್ಷದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಆದರೆ ಸೂರ್ಯ ಗ್ರಹಣ- ಚಂದ್ರ ಗ್ರಹಣ ಸಂದರ್ಭದಲ್ಲಿ ಮಾತ್ರ ಇಲ್ಲಿ ಬಾಗಿಲು ಹಾಕಲಾಗುತ್ತದೆ. ಉಳಿದಂತೆ, ಎಲ್ಲ ದಿನಗಲ್ಲು ಸಾರ್ವಜನಿಕರಿಗೆ ದೇಗುಲದ ಬಾಗಿಲು ತೆರೆದಿರುತ್ತದೆ. ಮ೦ಗಳವಾರ ಮತ್ತು ಶುಕ್ರವಾರ ಶ್ರೀ ಮಹಾಲಕ್ಷ್ಮಿಗೆ ವಿಶೇಷ ದಿನ ಎಂದು ಪರಿಗಣಿಸಲಾಗಿದೆ. ದೇಗುಲದಲ್ಲಿ ಅಭಿಷೇಕ ಮತ್ತು ಕು೦ಕುಮಾರ್ಚನೆಯನ್ನು ಬೆಳಿಗ್ಗೆ 8 ರಿ೦ದ 9.80 ರವರೆಗೆ ಮತ್ತು ಮಹಾ ಮಂಗಳಾರತಿಯನ್ನು ಬೆಳಿಗ್ಗೆ 9:30, ಮಧ್ಯಾಹ್ನ 12:30 ಮತ್ತು ಸ೦ಜಿ 7:30 ಕ್ಕೆ ಮಾಡಲಾಗುತ್ತದೆ. ದೇವಸ್ಥಾನವನ್ನು ಮಧ್ಯಾಹ್ನ 1೨.30 ರಿ೦ದ ಸ೦ಜೆ 5.30 ರವರೆಗೆ ಸಾರ್ವಜನಿಕರ ಭೇಟಿಗೆ ಮುಚ್ಚಲಾಗುತ್ತದೆ.
ಗೊರವನಹಳ್ಳಿ ಸುತ್ತಲಿನ ಇತರ ಪುವಾಸಿತಾಣಗಳು
* ತೀತ ಜಲಾಶಯ: ಈ ಜಲಾಶಯ ಸುವರ್ಣಮುಖಿ ನದಿಗೆ ನಿರ್ಮಿಸಲಾಗಿದೆ. ಇದು ದೇಗುಲದ ಸಮೀಪದಲ್ಲಿದೆ. ಈ ಜಲಾಶಯ ಸುತ್ತ ಕಣ್ಮನ ತಣಿಸುವ ಪಕೃತಿ ಸೌಂದರ್ಯವಿದೆ.
* ದೇವಾಲಯಗಳು: ಓಣಿ ನಾಗಪ್ಪ ದೇವಾಲಯ ಮತ್ತು ರೇಣುಕಾಂಬ ದೇವಾಲಯದಂತಹ ಹಲವಾರು ದೇವಾಲಯಗಳು ಶ್ರೀ ಮಹಾಲಕ್ಷ್ಮಿ ದೇವಾಲಯದ ಸುತ್ತ ನಿರ್ಮಾಣಗೊ೦ಡಿವೆ.
* ಬಂಕಾಪುರ ಸವಿಲು ಅಭಯಾರಣ್ಯ: ಗೊರವನಹಳ್ಳಿ ಯಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿ ಸುಂದರವಾದ ಬಂಕಾಪುರ ನವಿಲು ಅಭಯಾರಣ್ಯವಿದೆ. ಈ ಅಭಯಾರಣ್ಯವು 139 ಇಕರೆಗಳಲ್ಲಿ ಹರಡಿ ನಿಂತಿದೆ. ಬಂಕಾಪುರ ಕೋಟಿಯ ಅವಶೇಷಗಳು, ಸಾವಿರಾರು ನವಿಲುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಗೊರವನಹಳ್ಳಿಗೆ ಹೋಗುವ ಮಾರ್ಗ
ಗೊರವನಹಳ್ಳಿ, ಈಗ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಜೊತೆಗೆ, ರೈಲು ಅಥವಾ ವಿಮಾನದ ಮೂಲಕ ಕೂಡ ಈ ಕ್ಷೇತ್ರವನ್ನು ಸುಲಭವಾಗಿ ತಲುಪಬಹುದು. ಕರ್ನಾಟಕದ ರಾಜಧಾನಿ ಬೆ೦ಗಳೂರು ಗೊರವನಹಳ್ಳಿಗೆ ಹತ್ತಿರದ ದೊಡ್ಡ ನಗರವಾಗಿದೆ.