Tumbe Group of International Journals

Full Text


ರೈತರ ಆತ್ಮಹತ್ಯೆಗೆ ಕಾರಣ ಹಾಗೂ ಪರಿಹಾರಗಳು

ಭವ್ಯ ಡಿ ಪಿ

U11GT21C0938

ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

rakiyadav267@gmail.com               Ph.no: 6362713244


ಪೀಠಿಕೆ

ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಶೇ.55 ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಹಲವಾರು ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ನಷ್ಟವನ್ನು ಸಹಿಸಿಕೊಳ್ಳಲಾಗದೆ ಸಾಲದ ಅವರಿಂದ ಹೊರಬರಲಾಗದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ರೈತರ ಜೀವನ

ರೈತ ಕೃಷಿಯನ್ನು ಬಳಸಿಕೊಂಡು ಬೆಳೆಸಿಕೊಂಡು ಬೆಳೆಗಳನ್ನು ಬೆಳೆಯುತ್ತಾನೆ. ರೈತನ ಮೂಲವೃತ್ತಿಯಾದ ಕೃಷಿ ಬೇಸಾಯವನ್ನು ಮಾಡಿ ನಾಡಿನ ಸಮಸ್ತ ಕನ್ನಡಿಗರಿಗೆ ಆಹಾರವನ್ನು ನೀಡುತ್ತಾರೆ. ರೈತರು ಅವರ ಇಡೀ ಜೀವನ ಹೊಲ, ಗದ್ದೆ, ಬೇಸಾಯದಲ್ಲಿ ಅವರ ಜೀವನ ಸಾಗಿಸುತ್ತಾರೆ.

ಭಾರತದ ರೈತರು ಪ್ರಪಂಚದಾದ್ಯಂತದ ಕಠಿಣ ಶ್ರಮಿಕ ರೈತ. ಹಗಲಿರುಳು ದುಡಿದು ಬೆಳೆಗಾಗಿ ಕೃಷಿಯಲ್ಲಿ ಸದಾ ನಿರಂತರಾಗಿರುತ್ತಾರೆ. ಅವರು ಸೂರ್ಯನ ಶಾಖದ ಅಡಿಯಲ್ಲಿ ಮತ್ತು ಮಳೆಯಲ್ಲೂ ಕೆಲಸ ಮಾಡುತ್ತಾರೆ.

ಭೂಮಿಯನ್ನು ಉಳುಮೆ ಮಾಡಿ ಬೀಜ ಬಿತ್ತಿ ಬೆಳೆಗಳನ್ನು ಬೆಳೆಯುತ್ತಾರೆ. ಉತ್ತಮವಾದ ಬೆಲೆಯು ಸಿಗುವುದನ್ನು ಕಾಯುತ್ತಾರೆ, ಅವರ ಜೀವನಕ್ಕೆ ಆಧಾರವೇ ಕೃಷಿಯಾಗಿರುತ್ತದೆ.

ರೈತರು ಗೋವುಗಳನ್ನು ಸಾಕುತ್ತಾರೆ ಹಾಗೆ ಅವುಗಳು ಬೇಸಾಯಕ್ಕೆ ಸಹಾಯವಾಗುತ್ತದೆ. ರೈತನು ಗೋವುಗಳನ್ನು ಸಾಕುವುದರಿಂದ ಸಾವಯವ ಗೊಬ್ಬರವಾಗುತ್ತದೆ ಇದರಿಂದ ಬೆಳೆಗಳಿಗೆ ಅನುಕೂಲವಾಗುತ್ತದೆ.

ರೈತನು ಬೆಳಗ್ಗೆ ಬೇಗನೆ ಎದ್ದು ಅವನ ಕೆಲಸವನ್ನು ಮಾಡುತ್ತಾನೆ. ಹಗಲಿನಲ್ಲಿ ಬೇಸಾಯವನ್ನು ಮಾಡಿ ರಾತ್ರಿ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾನೆ. ರೈತರ ಜೀವನ ಶ್ರಮದಾಯಕವಾದ ಜೀವನವಾಗಿದೆ.

ರೈತರ ಆರ್ಥಿಕ ಸ್ಥಿತಿ

ರೈತರು ಬಡವರಾಗಿದ್ದಾರೆ. ನಮ್ಮ ದೇಶದ ಬೆನ್ನೆಲುಬು ನಮ್ಮ ರೈತ, ಇಡೀ ದೇಶಕ್ಕೆ ಅನ್ನ ಹಾಕುತ್ತಾನೆ ಆದರೆ ವಿಧಿ ಕೆಲವೊಂದು ಸಾರಿ ರೈತ ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುತ್ತದೆ.

ರೈತರು ಆರ್ಥಿಕವಾಗಿ ಹಿಂದುಳಿದುದರಿಂದ ಅವರ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಮಕ್ಕಳ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ರೈತರು ಹಗಲಿರುಳು ದುಡಿದರು ಅವರು ಎರಡು ಹೊತ್ತು ಊಟ ಮಾಡಿ ಒಂದು ಹೊತ್ತು ಹಾಗೆ ಮಲಗುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ.

ರೈತರ ಸಾಮಾಜಿಕ ಜೀವನ

ಭಾರತೀಯ ರೈತರು ಎಲ್ಲ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರು ಸರಳವಾಗಿ ಆಚರಿಸುತ್ತಾರೆ. ಹಳ್ಳಿ ಹಬ್ಬಗಳು ನೋಡಲು ಚಂದ, ಹಳ್ಳಿ ಜನರು ಅವರ ಕುಟುಂಬದ ಜೊತೆ ಕೂಡಿ ಆಚರಿಸುವುದು ಬಹಳ ಸುಂದರವಾಗಿರುತ್ತದೆ.

ರೈತನು ಮಗ ಅಥವಾ ಮಗಳ ಮದುವೆ ಮಾಡುವುದೇ ಒಂದು ಹಬ್ಬದ ಹಾಗೆ ರೈತನ ಸಂಭ್ರಮ ಹೆಚ್ಚುವುದು. ಅವರು ದೇವರ ಪೂಜೆಗಳನ್ನು ಹೆಚ್ಚು ಗೌರವ ನೀಡಿ ಆಚರಿಸುತ್ತಾರೆ.

 

 

ರೈತರ ಪ್ರಾಮುಖ್ಯತೆ ಮತ್ತು ಪಾತ್ರ

ಪ್ರತಿಯೊಬ್ಬರಿಗೂ ದೊರೆಯುವ ಬೇಳೆಕಾಳು, ದವಸಧಾನ್ಯ, ತರಕಾರಿಗಳನ್ನು ರೈತನು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡುತ್ತಾನೆ ಹಾಗೂ ಎಲ್ಲರಿಗೂ ಪೂರೈಸುತ್ತಾನೆ.

ರೈತನು ದುಡಿಯುವುದರ ಜೊತೆಗೆ ಅವನ ಹೆಂಡತಿಯೂ ಕೂಡ ಹೊಲದಲ್ಲಿ ದುಡಿಯುತ್ತಾಳೆ. ಅವಳು ಮನೆಯ ಎಲ್ಲಾ ಕೆಲಸವನ್ನು ಮಾಡಿಕೊಂಡು ಗಂಡನಿಗೆ ಸಹಾಯ ಮಾಡುತ್ತಾಳೆ. ಇಲ್ಲಿ ರೈತ ಮತ್ತು ಅವನ ಹೆಂಡತಿಯ ಪಾತ್ರ ಬಹಳ ಮುಖ್ಯವಾಗಿದೆ.

ರೈತರು ಬೆಳೆಯುವ ಬೆಳೆಗಳಿಂದಾಗಿ ದೇಶದಲ್ಲಿ ಆಹಾರವು ಎಲ್ಲರಿಗೂ ದೊರೆಯುತ್ತದೆ. ನಮ್ಮ ದೇಶದ ಜನರಿಗೆ ಅನ್ನ ನೀಡುವ ಮಹತ್ವದ ಕಾರ್ಯದಲ್ಲಿ ಪಾತ್ರರಾಗಿದ್ದಾರೆ.

ಜೀವಸಂಕುಲವನ್ನು ರೈತ ಕಾಪಾಡುತ್ತಿದ್ದಾನೆ. ರೈತರು ಆರ್ಥಿಕವಾಗಿ ಕಷ್ಟದಲ್ಲಿ ಇದ್ದರೂ ಅವರು ದುಡಿಯುವುದು ಬಿಡುವುದಿಲ್ಲ.

ರೈತನು ಜಾನುವಾರುಗಳನ್ನು ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾನೆ.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಪ್ರಕೃತಿಯ ವಿಕೋಪಗಳು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಒಂದು ಕಡೆ ಬೆಳೆದಿರುವ ಬೆಳೆಗಳಿಗೆ ಸರಿಯಾದ ಮಳೆಯು ಸಿಗದೇ ಇರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಇನ್ನೊಂದು ಕಡೆ ಬಿರುಗಾಳಿ, ಚಂಡಮಾರುತ, ಪ್ರವಾಹಗಳಿಂದ ರೈತನ ಬೆಳೆಗಳು ನೀರಿನ ಪಾಲಾಗುತ್ತಿದೆ. ಇದರಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದಾರೆ.

ಕೃಷಿಗೆ ಬೇಕಾದ ರಸಗೊಬ್ಬರ, ಕೀಟನಾಶಕ, ಕೃಷಿ ಸಂರಕ್ಷಣೆ, ವಿದ್ಯುತ್, ನೀರು ಇವುಗಳು ದುಬಾರಿ ಪರಕರಗಳಾಗಿವೆ.

ರೈತನು ಅಜ್ಞಾನದಿಂದ ಮದುವೆಗೆ ಅಧಿಕವಾಗಿ ಖರ್ಚು ಮಾಡಿ ಅದನ್ನು ತೀರಿಸಲಾಗದೆ ಸಾವಿಗೆ ಶರಣಾಗುತ್ತಿದ್ದಾನೆ. ಹಾಗೆ ಬೇರೆ ಬೇರೆ ಅನೇಕ ಕಾರಣದಿಂದಾಗಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ರೈತರ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳು

  • ರೈತರ ಭೂಮಿಯಲ್ಲಿ ಯಾವುದಾದರೂ ದೋಷಗಳಿದ್ದರೆ ನುರಿತ ತಜ್ಞರಿಂದ ಪರೀಕ್ಷೆಗಳ ಪಡಿಸಿ ಸೂಕ್ತ ಸಲಹೆಗಳನ್ನು ಕೊಡುವಂತೆ ಮಾಡಬೇಕು.
  • ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡುವುದು. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು, ಸಾಲದ ಬಡ್ಡಿದರವನ್ನು ಕಡಿಮೆ ಮಾಡುವುದು.
  • ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ರೈತರನ್ನು ಪ್ರೇರೆಪಿಸಬೇಕು.
  • ಮಾದಕ ದ್ರವ್ಯವನ್ನು ಕಡಿಮೆ ಮಾಡುವುದರಿಂದ ರೈತರನ್ನು ಸಾವಿನಿಂದ ಉಳಿಸಲು ಸಾಧ್ಯವಾಗುತ್ತದೆ.
  • ನೀರಾವರಿ, ವಿದ್ಯುತ್, ಬೀಜಗಳು, ರಸಗೊಬ್ಬರ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದು.

ರೈತರ ಆತ್ಮಹತ್ಯೆಗಳು

ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆಗಳು ಬಹಳ ಹೆಚ್ಚಾಗುತ್ತಿದೆ. ಸಾಲದ ಹೊರೆ ಹೆಚ್ಚಾದಂತೆ ರೈತರ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಕೃಷಿ ಆಮದಿನ ಮೇಲೆ ನಿರ್ಬಂಧ ರದ್ದಾಗಿದ್ದು ದೇಶಿಯ ರೈತರು ಸಬ್ಸಿಡಿ ಬೆಂಬಲಿತ ಅಂತರಾಷ್ಟ್ರೀಯ ಕೃಷಿಯ ಉತ್ಪನ್ನಗಳೊಂದಿಗೆ ಸ್ಪರ್ಧಿಸಲಾಗದಿರುವುದು ಬೆಲೆಯು ಕುಸಿತವಾಗಿದೆ.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರೈತರು ಕಂಗಲಾಗಿದ್ದಾರೆ. ಪ್ರಕೃತಿಯ ವಿಕೋಪಗಳು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಒಂದು ಕಡೆ ಬೆಳದಿರುವ ಬೆಳೆಗಳಿಗೆ ಸರಿಯಾದ ಮಳೆಯೂ ಸಿಗದೇ ಇರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಇನ್ನೊಂದು ಕಡೆ ಬಿರುಗಾಳಿ, ಚಂಡಮಾರುತ, ಪ್ರವಾಹಗಳಿಂದ ರೈತನ ಬೆಳೆಗಳು ನೀರಿನ ಪಾಲಾಗುತ್ತಿದೆ. ಇದರಿಂದ ರೈತರು ಸಾವಿಗೆ ಶರಣಾಗುತ್ತಿದ್ದಾರೆ.

ಉಪಸಂಹಾರ

ಗ್ರಾಮೀಣ ಭಾಗದಲ್ಲಿ ಬದಲಾವಣೆಗಳು ಆಗುತ್ತಿದೆ. ಆದರೂ ಇನ್ನೂ ಬದಲಾವಣೆಗಳು ಆಗಬೇಕು. ಅನ್ನದಾತರಾದ ರೈತರು ಆರ್ಥಿಕರಾಗಿ ಸದೃಢರಾಗಬೇಕು ಹಾಗೂ ನೈಸರ್ಗಿಕ, ಸಾವಯವ ಕೃಷಿಗೆ ಒತ್ತು ನೀಡಬೇಕು. ನಮ್ಮ ಸರಕಾರವು ರೈತರಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸಿ ವ್ಯವಸಾಯವನ್ನು ಅಭಿವೃದ್ಧಿಗೊಳಿಸಬೇಕು.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal