Tumbe Group of International Journals

Full Text


ಜಯಮಂಗಲಿ ನದಿ

ಭೂಮಿಕ ಆರ್

U11GT21S0212

ಬಿಎಸ್ಸಿ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

bhuoomikar@gmail.com                 Ph.no: 8088294520


ಜಯಮಂಗಆ ನದಿ ಎಂಬುದು ತುಮಕೂರು ಜಿಲ್ಲೆ, ಚನ್ನಸಾಗರ ಎಂಬ ಗ್ರಾಮದ ಹತ್ತಿರವಿದ್ದು, ಇದು ಇದುವರೆಗೂ ಎ೦ದರೆ ಮೂವತ್ತೈದು ವರ್ಷಗಳ೦ದ ಇದರಲ್ಲಿ ಯಾವುದೇ ನೀರು ತುಂಬಿರಲಲ್ಲ. ಇದನ್ನು ಮೂವತ್ತೆದು ವರ್ಷಗಳಂದ ಬರಡು ನಾದಿನ ಕಳೆದು ಹೋದ ನದಿಗಳು ಅಂತಲೇ ಇವುಗಳನ್ನು ಗುರುತಿಸಲಾಗಿತ್ತು. ಏಕೆ೦ದರೆ ಇದರಲ್ಲಿ ಒ೦ದು ತೊಟ್ಟು ನೀರು ಕೂಡ ಹರಿದಿರಲಲ್ಲ. ಆದ್ದರಿಂದ ಜನರು ಜಯಮಂಗಲಿಯನ್ನು ಮರೆತೇ ಹೋಗಿದ್ದರು. ಆದರೆ ಈ ವರ್ಷ ಬತ್ತಿ ಹೋಗಿದ್ದ ಜಯಮಂಗಲಿ ನದಿಯನ್ನು ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ. ಏಕೆಂದರೆ ಬತ್ತಿ ಹೋಗಿ ಜೀವ ಕಳೆದುಕೊ೦ಡ ನದಿಗೆ ಮರಳಿ ಜೀವ ಬಂದಿದೆ. ಈ ಜಯಮಂಗಲಿಯು ತುಂಬಿ ತುಳುಕುತ್ತಿದೆ. ಈ ಜಯಮಂಗಲಿ ನದಿ ದೇವರಾಯನದುರ್ಗದಲ್ಲಿ ಹುಟ್ಟುತ್ತದೆ. ಇದಕ್ಕೆ ಈ ವರ್ಷದಲ್ಲಿ ಜೀವವು ಬಂದಿದೆ. ಈ ವರ್ಷ ಎಂದರೆ 2022 ಈ ವರ್ಷ ಜಯಮಂಗಲಿ ನದಿ ತು೦ಬಿ ತುಳುಕುವಂತೆ ಮಾಡಿದೆ. ಜಯಮಂಗಲಿ ನದಿಯು 95 ವರ್ಷದಿಂದ ತುಂಬಿದೆ. ಇದು ಈ ವರ್ಷ ತುಂಬಿರುವುದರಿಂದ ಜನರಿಗೆ ಎಷ್ಟೋ ಆಶ್ಚರ್ಯ, ಅದ್ಭುತ, ಸ೦ತೋಷ, ದುಃಖ, ಇವೆಲ್ಲವನ್ನು ಕೂಡ ಈ ಜಯಮಂಗಲ ನದಿಯು ಈ ವರ್ಷ ತ೦ದು ಕೊಟ್ಟದೆ. ಆ ಜಯಮಂಗಲಿ ನದಿಯು ಜೀವ ಇಲ್ಲದ ಅದೆಷ್ಟೋ ಜೀವಿಗಳಗೆ ಜೀವವನ್ನು ಕೊಟ್ಟದೆ ಎ೦ದರೆ ತಪ್ಪಾಗಲಾರದು. ಏಕೆಂದರೆ ನಾವು ಹುಟ್ಟದೇ ಇರುವಾಗ ಇದು ತುಂಬುತಿತ್ತಂತೆ. ಆಗ ಆ ನೀರಿನ ರಭಸಕ್ಕೆ ಎರಡು ಪ್ರಾಣಗಳು ಬಲಿಯಾಗಿದ್ದವಂತೆ ಎ೦ದು ಹೇಳುತ್ತಿದ್ದರು. ಆದರೆ ಅದನ್ನು ನಮ್ಮ ಕಣ್ಣಾರೆ ಕ೦ಡಿರಲಿಲ್ಲ. ಆದರೆ ಈ ವರ್ಷ ನಮಗೆ ಸಂತೋಷವನ್ನು ಒತ್ತಿಯಾದ ಬತ್ತಿ ಹೋದ ನದಿಗೆ ಜೀವವನ್ನು ನೀಡಿದೆ. ಈ ವರ್ಷದ ಮಳೆ ಇನ್ನೂ ಈ ವರ್ಷದಲ್ಲಿ ನಡೆದ ಆಶ್ಚರ್ಯ, ಅದ್ದುತ ಸಂತೋಷಗಳು ಮತ್ತು ದು:ಖಗಳು ಏನೆಂದರೆ.

ಈ ವರ್ಷ ಜಯಮಂಗಲ ನದಿ ತುಂಬಿ ಪಕ್ಕದಲ್ಲಿ ಇದ್ದ ಊರು ಗ್ರಾಮಗಳಲ್ಲಿ ನೀರು ನುಗ್ಗಿದ್ದು, ಇಡೀ ಗ್ರಾಮಕ್ಕೆ ನುಗ್ಗಿದೆ. ತುಮಕೂರು ಜಲ್ಲೆಯ ಚನ್ನಸಾಗರ ಎ೦ಬ ಗ್ರಾಮಕ್ಕೆ ಇಡೀ ಗ್ರಾಮಕ್ಕೆ ನೀರಿನ ಜಲದಿಗ್ಬ೦ದನ ಎ೦ದರೆ ಸುಳ್ಳಾಗಲಾರದು. ಏಕೆಂದರೆ ಈ ವರ್ಷ ವರುಣಾರ್ಭಟ ತುಂಬ ಹೆಚ್ಚಾಗಿದ್ದು, 4೦ ಕ್ಟೂ ಹೆಚ್ಚು ಮನೆಗಳಲ್ಲ ನೀರು ನುಗ್ಗಿದ್ದು, ಅವರ ಪರಿಸ್ಥಿತಿ ತು೦ಬಾ ಘೋರವಾಗಿದ್ದು ಮತ್ತು 8೦- 1೦೦ ಎಕರೆಗಳಲ್ಲಿ ನೀರು ತು೦ಬಿ ಇಡೀ ಬೆಳೆಯು ನಾಶವಾಗಿದ್ದು, ಜಯಮಂಗಅ ನದಿಯು ಈ ವರ್ಷ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮತ್ತು ಶಾಲೆ ದೇವಸ್ಥಾನ ಹಾಲಿನ ಉತ್ಪಾದನಾ ಕೇಂದ್ರ ಇನ್ನು ಅನೇಕ ಸ್ಥಳಗಳು ಇಲ್ಲಿ ನೀರಿನಿಂದ ದಿಗ್ಬಂದನವಾಗಿದ್ದು, ಹಾಗೂ ಈ ನದಿಯು ಒಂದೇ ರಾತ್ರಿಯಲ್ಲಿ ತುಂಬಿ ಹರಿಯುತ್ತಿದ್ದು, ಹಾಗೂ ಗ್ರಾಮದಲ್ಲಿ ಅನೇಕ ನಷ್ಟಗಳು ಉಂಟಾಗಿದ್ದು, ದವಸಧಾನ್ಯಗಳು ನಾಶವಾಗಿದ್ದು ಹಾಗೂ ಮನೆಯಲ್ಲಿ ಸಿಕ್ಕಿಕೊಂಡವರನ್ನು ಅಗ್ನಿಶಾಮಕ ಸಿಬ್ಬಂದಿಯಿಂದ ಜನರ ರಕ್ಷಣೆಯನ್ನು ಮಾಡಿದ್ದರು. ಇನ್ನೂ ಮಕ್ಕಳನ್ನು ರಾತ್ರಿ ರಾತ್ರಿಯೇ ಗ್ರಾಮಸ್ಥರು ಪಕ್ಕದ ಗ್ರಾಮಕ್ಕೆ ಕಳುಹಿಸಿದ್ದರು. ಜಿಲ್ಲಾಡಳತ, ಅಗ್ನಿಶಾಮಕ, ಪೊಲೀಸ್‌ ಠಾಣೆ ಈ ಮೂರು ಕ್ಲೇತ್ರಗಳು ಜನರನ್ನು ಗ್ರಾಮದಿ೦ದ ಹೊರತರಲು ಹೆಚ್ಚಾಗಿ ಪ್ರಯತ್ನಿಸಿದ್ದರು. ಹಾಗೂ ಈ ವರ್ಷ ವರುಣಾರ್ಭಟಕ್ಕೆ ಬೆಳೆನಾಶ, ದವಸ ಧಾನ್ಯಗಳು, ಮನೆ, ಶಾಲೆ ದೇಪಸ್ಥಾನ, ಹಾಲನ ಡೈರಿ ಇವುಗಳಗೆ ನೀರು ಸುಗ್ಗಿ ಇಡೀ ಗ್ರಾಮವೇ ದುಃಖಕ್ಕೆ ಮುಳುಗಿತ್ತು. ಆದರೆ ಈ ವರ್ಷ ಯಾವುದೇ ಪ್ರಾಣಹಾನಿ ಆಗಲಿಲ್ಲ. ಹಾಗೇ ಮಳೆ ಬಂದು ತುಂಬಿ ಹರಿಯುವ ವೇಳೆ ಗ್ರಾಮಸ್ಥರಿಗೆ ತುಂಬಾ ತೊಂದರೆಗಳು ಆಗುತ್ತವೆ. ಇದಕ್ಕೆ ಯಾವುದೇ ಶಾಶ್ಚತ ಪರಿಹಾರ ಇದುವರೆಗೂ ಇಲ್ಲ.

ಜಯಮಂಗಲಿ ನದಿ ನೋಡುವವರ ಕಣ್ಣಿಗೆ ರೋಮಾ೦ಚನವನ್ನು ನೀಡಿದ್ದು, ಪ್ರವಾಸಿಗರಿಗೆ ಸಂತೋಷವನ್ನು ತು೦ಬಿದೆ. 35 ವರ್ಷಗಳಂದ ತುಂಬದೇ ಇದ್ದ ನದಿ ಈ ವರ್ಷ ತುಂಜ ಹರಿಯುತ್ತಿರುವುದನ್ನು ನೋಡಿ ಪ್ರವಾಸಿಗರು ಖುಷಿಪಡುತ್ತಿದ್ದಾರೆ.

ಜಯಮಂಗಲಿ ನದಿಯು ದೇವರಾಯನದುರ್ಗದಲ್ಲಿ ಹುಟ್ಟುತ್ತೆ. ಇದು ಜಯ ಮತ್ತು ಮಂಗಳ ಅನ್ನೋ ಎರಡು ನದಿಗಳು ಒಟ್ಣಗೇ ಸೇರುವುದರಿಂದ ಇದನ್ನು ಜಯಮಂಗಅ ಎಂದು ಕರೆಯುತ್ತಾರೆ. ಈ ನದಿಗೆ ಸುವರ್ಣಮುಖ ಹಾಗೂ ಗರುಡಾಚಲ ಅನ್ನೋ ಎರಡು ಉಪ ನದಿಗಳು ಸೇರಿಕೊಳ್ಳುತ್ತವೆ. ಈ ನದಿಗಳು ಕೊರಟಗೆರೆ, ಮಧುಗಿರಿ, ಹುಲಿಕುಂಟೆ, ಆರ್‌. ವೆ೦ಕಟಾಪುರ, ಹೊಳೆವೆಂಕಟಾಪುರ ದಲ್ಲಿ ಹರಿದು ಗೌರಿಬಿದನೂರು ಮೂಲಕ ಪೆನ್ನಾ ನದಿಯನ್ನು ಸೇರುತ್ತದೆ. ಇದು ಪೆನ್ನಾರ್‌ ನದಿಯ ಉಪನದಿಯಾಗಿದೆ. ಹಾಗೂ ಈ ಪೆನ್ನಾರ್‌ ನದಿಯ ನೀರು ಪೆರೂರು ಡ್ಯಾಂ ಗೆ. ಈ ನೀರು ಸೇರುತ್ತವೆ ಎಂದು ಹೇಳುತ್ತಾರೆ. ಪೆರೂರು ಡ್ಯಾಂ ಇದು ಆಂಧ್ರಪ್ರದೇಶ ರಾಜ್ಯದಲ್ಲಿ, ಅನ೦ತಪುರ ಜಿಲ್ಲೆ, ಹಿ೦ದೂಪುರ ತಾಲ್ಲೂಕು ಅಲ್ಲಿ ಪ್ರವೇಶಿಸುತ್ತದೆ ಎ೦ಬುದನ್ನು ತಿಳಸುತ್ತಾರೆ.

ಜಯಪಮಂಗಲಿ ನದಿಯು ಈ ವರ್ಷ ಎಷ್ಟು ಆಶ್ಚರ್ಯ, ಅದ್ಭುತ ಹಾಗೂ ಸಂತೋಷ ಮತ್ತು ದುಃಖವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಏಕೆ೦ದರೆ ಜೀವವಿಲ್ಲದ ನದಿಗೆ ಈ 95 ವರ್ಷದಿಂದ ಜೀವವಿಲ್ಲದ ನದಿಗೆ ಜೀವವನ್ನು ನೀಡಿದ್ದು, ಅದ್ಭುತವನ್ನು ತೋರುತ್ತದೆ. ಹಾಗೂ ಒಂದೇ ರಾತ್ರಿಯಲ್ಲಿ ಈ ನದಿಯು ತು೦ಬಿದ್ದು, ಆಶ್ಚರ್ಯವನ್ನು ತೋರುತ್ತದೆ. ಹಾಗೂ ಪ್ರವಾಸಿಗರಿಗೆ ಎಷ್ಟೋ ಸಂತೋಷವನ್ನು ನೀಡುತ್ತಿದೆ. ಒಣಗಿ ಬತ್ತಿ ಹೋಗಿದ್ದ ಭೂಮಿಯಲ್ಲಿ ನೀರು ತುಂಬಿದ್ದು, ಎಷ್ಟೋ ಸಂತೋಷವನ್ನು ನೀಡುತ್ತದೆ. ಹೀಗೆ ಅಲ್ಲಿಯ ಗ್ರಾಮಸ್ಥರ ಮನೆ, ಬೆಳೆ, ದವಸ, ಧಾನ್ಯಗಳನ್ನು ಸಾಶವಾಗಿ ಆ ಗ್ರಾಮಸ್ಥರಿಗೆ ದುಃಖವನ್ನು ನೀಡಿದೆ.

ಏನೇ ಆದರೂ ಬರಡು ಭೂಮಿಯಾದ ಈ ನದಿಗೆ ಜೀವವನ್ನು ತುಂಬಿದೆ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal