ಮೈಲ್ ಸ್ಟೋನ್ ಮ್ಯಾನ್
ಸಚಿನ್ ಎನ್ ಡಿ
U11GT21A0005
ಬಿಎ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104
sachinsachin1146@gmail.com Ph.no: 7618717839
ಬಾಲ್ಯ
ಕ್ರಿಕೆಟ್ ಇತಿಹಾಸದಲ್ಲೇ ಮೈಲ್ ಸ್ಟೋನ್ ಮ್ಯಾನ್, ರನ್ ಮಿಷಿನ್, ಕಿಂಗ್ ಕೊಹ್ಲಿ, ದಾಖಲೆಗಳ ದಮನಕಾರ ಎಂದೇ ಪ್ರಸಿದ್ಧಿ ಹೊಂದಿರುವ ವಿರಾಟ್ ಕೊಹ್ಲಿ ಅವರು 1988ರ ನವೆಂಬರ್ 5ರಂದು ಪಂಜಾಬ್ ನಲ್ಲಿ ಜನಿಸಿದರು. ಇವರ ತಂದೆ ಪ್ರೇಮ್ ಕೊಹ್ಲಿ ಇವರು ವಕೀಲರಾಗಿದ್ದರು. ಇವರ ತಾಯಿ ಸರೋಜ್ ಕೊಹ್ಲಿ ಇವರು ಗೃಹಿಣಿ ಇವರಿಗೆ ಹಿರಿಯ ಸಹೋದರ ವಿಕಾಸ್ ಮತ್ತು ಭಾವನ ಎಂಬ ಅಕ್ಕ ಇದ್ದಾರೆ.
ವಿರಾಟ್ ಕೊಹ್ಲಿ ಅವರು ಬಾಲ್ಯದಲ್ಲಿ ಉತ್ತಮ ನಗರದಲ್ಲಿ ಬೆಳೆದರು. ಭಾರತಿ ಪಬ್ಲಿಕ್ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದರು. 1988ರಲ್ಲಿ ವಿರಾಟ್ ಕೊಹ್ಲಿ ಅವರು ರಾಜಕುಮಾರ್ ಶರ್ಮಾ ಅವರ ಅಡಿಯಲ್ಲಿ ಕ್ರಿಕೆಟ್ ತರಬೇತಿಯನ್ನು ಪಡೆದರು.
ಕ್ರಿಕೆಟ್ ವೃತ್ತಿ ಜೀವನ
ವಿರಾಟ್ ಕೊಹ್ಲಿ ಅವರು ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗ ಮತ್ತು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ. ಅವರು ದೇಶಿಯ ಕ್ರಿಕೆಟ್ ನಲ್ಲಿ ದೆಹಲಿ ಮತ್ತು ಐಪಿಎಲ್ ನಲ್ಲಿ ಬೆಂಗಳೂರು ತಂಡದ ಪರವಾಗಿ ಆಡುತ್ತಾರೆ ಇವರು ಬಲಗೈ ಬ್ಯಾಟ್ಸ್ಮನ್.
ಇವರು ಈ ಯುಗದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ ಹಾಗೂ ಸರ್ವಕಾಲಿಕ ಶ್ರೇಷ್ಠ ಆಲ್ ಫಾರ್ಮೆಟ್ ಮ್ಯಾನ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 2013-2022ರ ನಡುವೆ 213 ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. 68 ಪಂದ್ಯಗಳಲ್ಲಿ 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ಭಾರತೀಯ ಟೆಸ್ಟ್ ನಾಯಕರಾಗಿದ್ದಾರೆ.
ಕೊಹ್ಲಿ 2011ರಲ್ಲಿ ತಮ್ಮ ಟೆಸ್ಟ್ ಗೆ ಪಾದರ್ಪಣೆ ಮಾಡಿದರು. ಅವರು 2013ರಲ್ಲಿ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದರು. ಇವರು ಐಸಿಸಿ ವಿಶ್ವ ಟ್ವೆಂಟಿ-ಟ್ವೆಂಟಿ ಅಲ್ಲಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಇವರು 13000 ರನ್ನಿನಿಂದ 23000 ರನ್ನಗಳನ್ನು ವೇಗವಾಗಿ ಪೂರೈಸಿದ ಬ್ಯಾಟ್ಸ್ಮನ್ ಆಗಿದ್ದಾರೆ.
ಪ್ರಶಸ್ತಿಗಳು
ನಾಯಕನಾಗಿ ವಿರಾಟ್ ದಾಖಲೆ
ಮಾದರಿ |
ಪಂದ್ಯ |
ಗೆಲುವು |
ಸೋಲು |
ಫಲಿತಾಂಶವಿಲ್ಲ |
ಗೆಲುವು % |
ಟೆಸ್ಟ್ |
68 |
40 |
17 |
- |
58.82 |
ಏಕದಿನ |
95 |
65 |
27 |
2 |
70.43 |
T20 I |
50 |
30 |
16 |
2 |
64.58 |
ವಿರಾಟ್ ಬ್ಯಾಟಿಂಗ್
ಮಾದರಿ |
ಪಂದ್ಯಗಳು |
ರನ್ ಗಳು |
ಸರಾಸರಿ |
ಸ್ಟ್ರೈಕ್ ರೇಟ್ |
ಟೆಸ್ಟ್ |
102 |
8074 |
49.5 |
55.7 |
ಏಕದಿನ |
262 |
12344 |
57.7 |
92.8 |
T201 |
108 |
3663 |
50.2 |
137.7 |
IPL |
223 |
6624 |
36.2 |
129.1 |
1st Class |
134 |
10323 |
50.6 |
56.1 |
List A |
296 |
13786 |
56.5 |
93.0 |
T20 |
353 |
10981 |
40.1 |
132.8 |