Tumbe Group of International Journals

Full Text


ಕರ್ನಾಟಕದಲ್ಲಿ ಕನ್ನಡದ ಅರಿವು

ಅನುಷಾ ಹೆಚ್ ಎಂ

U11GT21C0502

ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

anushaanushahm174@gmail.com             Ph.no: 8431967362


ಪೀಠಿಕೆ

ಭಾಷೆ ಎಂಬುವುದು ದೇವರು ಮಾನವನಿಗೆ ಕಲ್ಪಿಸಿಕೊಟ್ಟಿರುವ ಅಮೂಲ್ಯ ವರ ನಮ್ಮ ಕನ್ನಡ ಭಾಷೆ.ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಮಾರ್ಗವೆಂದರೆ ಅದು ಭಾಷೆ.ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತ ದೇಶದಲ್ಲಿ ಬೆಳೆಯುತ್ತಿರುವ ಅನೇಕ ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆಯೂ ಕೂಡ ಒಂದು.ಜಗತ್ತಿನ ಪ್ರಸಿದ್ಧ ಭಾಷೆಯಲ್ಲಿ ಕನ್ನಡವು ಒಂದಾಗಿದೆ.ಕನ್ನಡ ಭಾಷೆಗೆ ತನ್ನದೆ ಆದ ಪ್ರಾಮುಖ್ಯತೆ ಇದೆ.

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ, ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆಯಾದ ಕನ್ನಡಕ್ಕೆ, ತನ್ನದೇ ಆದ ಪ್ರಾಮುಖ್ಯತೆ ಇದೆ, ಐತಿಹಾಸಿಕ ಹಿನ್ನೆಲೆ ಇದೆ. ಕನ್ನಡದ ಲಿಪಿಗೆ ವಿಶ್ವದ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆ ಇದೆ. ಅಮೋಘವರ್ಷ ಕವಿರಾಜಮಾರ್ಗ ರಚಿಸುವಾಗ ಇಂಗ್ಲಿಷ್ ಭಾಷೆ ಆಗಿನ್ನೂ ಅಂಬೆಗಾಲಿಡುತ್ತಿತ್ತು, ಹಿಂದಿ ಭಾಷೆ ಹುಟ್ಟಿರಲೇ ಇಲ್ಲ ಎನ್ನುವ ಮಾಹಿತಿ ಇದೆ. ಇದೆಲ್ಲವನ್ನು ಬಲ್ಲ ರಾಷ್ಟ್ರಕವಿ ಕುವೆಂಪು, ಕನ್ನಡ ಭಾಷೆಯ ಸರಳ ಸಹಜ ಶುದ್ಧತೆಗೆ ಮಾರುಹೋಗಿ, “ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು” ಎಂದದ್ದು ಕನ್ನಡಿಗರ ಹೃದಯದಲ್ಲಿ ನೆಲೆಯಾಗಿದೆ.

ಇಂತಹ ಕನ್ನಡ ಭಾಷೆ ಇವತ್ತು ಜಾಗತೀಕರಣದ ಪ್ರಭಾವದಿಂದ, ಇಂಗ್ಲಿಷ್ ಅವಲಂಬನೆಯಿಂದ, ಕೇಂದ್ರ ಸರಕಾರದ ಹಿಂದಿ ಹೇರಿಕೆಯಿಂದ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಹಿನ್ನಡೆ ಅನುಭವಿಸುವಂತಾಗಿದೆ. ಜೊತೆಗೆ ಕನ್ನಡಿಗರೇ ಕನ್ನಡವನ್ನು ಕೀಳರಿಮೆ ಮಟ್ಟಕ್ಕೆ ಇಳಿಸಿರುವುದರಿಂದ ಕನ್ನಡಕ್ಕೆ ಕಂಟಕ ಎದುರಾಗಿದೆ. ಇಂತಹ ಹೊತ್ತಲ್ಲಿ ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಕನ್ನಡದ ಮೆರವಣಿಗೆ, ಜಾತ್ರೆ, ಹಬ್ಬಕ್ಕೆ ಕನ್ನಡಿಗರು ಸಿದ್ಧರಾಗುತ್ತಿದ್ದಾರೆ. ಕನ್ನಡದ ಅಸ್ಮಿತೆ ಮತ್ತು ಕನ್ನಡದ ಕಡೆಗಣನೆ- ಈ ವೈರುಧ್ಯಗಳ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ್ದಾರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕವಿ, ಚಿಂತಕರೂ ಆದ ಪ್ರೊ.ಎಸ್.ಜಿ. ಸಿದ್ದರಾಮಯ್ಯನವರು.

ಕನ್ನಡ ಭಾಷೆಯ ಮಹತ್ವ:

ಕನ್ನಡಿಗರ ಹಮ್ಮೆ ಕನ್ನಡ ಭಾಷೆ ಕನ್ನಡವು ಒಂದು ಅದ್ಭುತ ಭಾಷೆ “ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು”ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ.ಕನ್ನಡ ಭಾಷೆಯ ಎಳೆಗಾಗಿ ಸರ್ಕಾರ,ಹತ್ತು ಹಲವಾರು ಸಂಘಟನೆಗಳು.ರಾಜಕೀಯ ಪಕ್ಷಗಳು,ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ.ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು,ಕನ್ನಡ ರಜ್ಯೋತ್ಸವ, ಸಾಹಿತ್ಯಗಳಲ್ಲಿ ಕನ್ನಡದ ಮಹತ್ವ ಹೆಚ್ಚಿದೆ. ಕನ್ನಡಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸೇರಿದಂತೆ,ಈ ದಿನ ಕನ್ನಡಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಎರ್ಪಡಿಸಲಾಗುತ್ತದೆ. ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ, ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ' ಎಂದು ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಬರೆದಿದ್ದಾರೆ.

ಕನ್ನಡ ಭಾಷೆಯ ಚರಿತ್ರೆ:

ಪ್ರಾಕೃತ, ಸಂಸ್ಕೃತ ಮತ್ತು ತಮಿಳು ಜೊತೆಗೆ ಕನ್ನಡವು ಅತ್ಯಂತ ಹಳೆಯ ಭಾಷೆಯಾಗಿದೆ. ಕನ್ನಡ ಭಾಷೆಯು ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ.ಕನ್ನಡವು ಭಾರತದ ೨೨ ಅಧಿಕೃತ/ಆಡಳಿತ ಭಾಷೆ, ದಕ್ಷಿಣ ಭಾರತಗಳ ಮೂಲವೆಂದು ಗುರುತುಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ.ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೫೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.

ಕನ್ನಡ ಕಳೆದುಹೋಗುವ ಸ್ಥಿತಿಗೆ ಕಾರಣರು?

ಮೊದಲನೆದಾಗಿ ನಾನು ಹೊಣೆಗಾರರನ್ನಾಗಿ ಮಾಡೋದು ಕನ್ನಡಿಗರನ್ನೇ. ಕನ್ನಡ ಭಾಷೆಯ ಬಗೆಗಿರುವ ಕೀಳರಿಮೆ ಇದೆಯಲ್ಲ, ಅದನ್ನು ಕಳೆದುಕೊಳ್ಳದ ಹೊರತು ಕನ್ನಡಕ್ಕೆ ಉದ್ಧಾರವಿಲ್ಲ. 2,500 ವರ್ಷಗಳ ಇತಿಹಾಸವಿರುವ ಭಾಷೆ ಕನ್ನಡ. ಜಗತ್ತಿನಲ್ಲಿ ಇವತ್ತು ಮೆರೆಯುತ್ತಿರುವ ಹಲವು ಭಾಷೆಗಳು ಕಣ್ಣು ಬಿಡುವುದಕ್ಕೂ ಮುನ್ನವೇ ಕನ್ನಡ ಭಾಷೆಯಲ್ಲಿ ನಮ್ಮ ಪಂಪ, ರನ್ನ ಬರೆದಿದ್ದರು. ಗಜಶಾಸ್ತ್ರ, ಅಶ್ವಶಾಸ್ತ್ರ, ದರ್ಶನಶಾಸ್ತ್ರ, ತತ್ವಮೀಮಾಂಸೆ, ಕಾವ್ಯ ಮೀಮಾಂಸೆ ಇಂಥ ಜ್ಞಾನಶಾಖೆಗಳು, ದೊಡ್ಡ ದೊಡ್ಡ ಗ್ರಂಥಗಳಿರುವ ಜೀವಂತ ಭಾಷೆ ಕನ್ನಡ. ಇಷ್ಟೆಲ್ಲ ಕನ್ನಡ ಭಾಷೆಯ ಬಗ್ಗೆ ಹಿರಿಮೆ ಗರಿಮೆ ಗಳಿದ್ದರೂ, ಕನ್ನಡದ ನಂತರ ಹುಟ್ಟಿದ ಇಂಗ್ಲಿಷ್ ಹೇಗೆ ವಿಶ್ವವ್ಯಾಪಿ ಭಾಷೆಯಾಯಿತು ಅಂದರೆ, ಅವರಿಗಿರುವ ಭಾಷಾಭಿಮಾನ, ಭಾಷೆಯನ್ನು ಬಳಸುವ ಬೆಳೆಸುವ ಬಗೆಗಿರುವ ಪ್ರೀತಿ. ಇವತ್ತು ನಿಜವಾಗಿಯೂ ಕನ್ನಡವನ್ನು ಬೆಳೆಸುತ್ತಿರುವವರು ಸಾಮಾನ್ಯರು. ಆದರೆ ವಿದ್ಯಾವಂತರು, ಅಕ್ಷರ ಬಲ್ಲಂತ ಕನ್ನಡಿಗರೇ ಕನ್ನಡ ಭಾಷೆಗೆ ತೊಡಕಾಗಿರುವುದು. ಭಾಷೆಯ ಕೊರತೆಯೋ ಅಥವಾ ಯೋಚಿಸಬೇಕಾಗಿದೆ. 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal