Tumbe Group of International Journals

Full Text


ಏಕಶಿಲಾ ಬೆಟ್ಟ

ಭೂಮಿಕ ಆರ್

U11GT21S0212

ಬಿಎಸ್ಸಿ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

bhuoomikar@gmail.com                 Ph.no: 8088294520


ಈ ಬೆಟ್ಟದ ಹೆಸರು ಏಕಶಿಲ ಬೆಟ್ಟ ಅಥವಾ ಮಧುಗಿರಿ ಬೆಟ್ಟವೆಂದು ಕರೆಯಲಾಗುತ್ತದೆ. ಇದು ನೋಡಲು ತುಂಖಾ ನೋಟಕ್ಕೆ ರಮ್ಯವಾಗಿ ಇದೆ. ಇದು ಮಳೆಗಾಲದ ಸಮಯದಲ್ಲಿ ತುಂಬಾ ರಮಣೀಯವಾದ್ದದ್ದಾಗಿ ಇರುವಂತದ್ದು ಆಗಿದೆ. ಇದು. ಅಪಾಯಕಾರಿ ಸ್ಥಳವು ಕೂಡ ಅಗಿದೆ. ಇದು ತುಂಬಾ ಪುರಾತನದ್ದು ಅಂಥ ಹೇಳಬಹುದು. ಏಕೆಂದರೆ ಇದರಲ್ಲಿ ಆಂದರೆ ಮಧುಗಿರಿ ಬೆಟ್ಟವನ್ನು ಹತ್ತುವಾಗ ಅಲ್ಲಿ ಇರುವ ಕೆಲವು ಜೈಲುಗಳು ದೇವಸ್ಥಾನ. ಇನ್ನು ನೀರಿನ ಕುಣಿಗಳು ಹಾಗೂ ಪ್ರವೇಶ ದ್ವಾರಗಳಲ್ಲಿ ಬರೆದಿರುವ ಕೆಲವು ಬರಹಗಳಿಂದ ಹೇಳಬಹುದಾಗಿದೆ.ಇದು ಪುರಾತನ ಎಂದು ಹಾಗೂ ಇದು ತುಂಬಾ ವಿಶೇಷವಾಗಿ ಇದೆ. ಇದು ಒಂದೇ ಕಲ್ಲಿನಿಂದ ನಿರ್ಮಾಣವಾದ ಬೆಟ್ಟವಾಗಿದೆ. ಇದನ್ನು ನೋಡುವಾಗ ಆಶ್ಚರ್ಯವನ್ನು ಉಂಟುಮಾಡುವುದಾಗಿದೆ.

ಹಾಗೆ ನನಗೆ ತಿಳದಿರುವ ಪ್ರಕಾರ ಇದು ತುಮಕೂರು ಜಲ್ಲೆಯ ಮಧುಗಿರಿ ಎಂಬ ಸಗರದಲ್ಲಿ ಈ ಬೆಟ್ಟವು ಇದೆ. ಇದು ತುಮಕೂರಿನಿಂದ 4೦ ಕಿ.ಮೀ ನಷ್ಟು ದೂರವಿದೆ. ಹಾಗೂ ಇದು ನಮ್ಮ ಊರಿಸಿ೦ದ ಎ೦ದರೆ ಭ್ಯೈರೇನಹಳ್ಳಯಿ೦ದ ಕೇವಲ 15 ಕಿ.ಮೀ ದೂರದಲ್ಲಿ ಇದೆ. ಇದನ್ನು ನಾವು ಸಹ ಹತ್ತಿದ್ದು ಇದರ ಮೇಲೆ ಹೋಗುವಾಗ ತುಂಬಾ ಆಯಾಸ ಆಗುವ೦ತಹದಾಗಿದೆ. ಹಾಗೂ ಅಲ್ಲಿ ಯಾವುದೇ ರೀತಿಯಾದ ದಿನಸಿ ಅ೦ಗಡಿಗಳು ನೀರು ಇವುಗಳು ಸಿಗುವುದಿಲ್ಲ. ಆ ಬೆಟ್ಟ ಹತ್ತುವಾಗಲೇ ನೀರು ಹಾಗೂ ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿ ಆಗಲೇ ಹೇಳದ ಪ್ರಕಾರ ಯಾವುದೇ ರೀತಿಯಾದ ವಸ್ತುಗಳು ಸಿಗುವುದಿಲ್ಲ.

ಈ ಏಕಶಿಲಾ ಬೆಟ್ಟ ಅಥವಾ ಮಧುಗಿರಿ ಬೆಟ್ಟವು. ನಮ್ಮ ಮಧುಗಿರಿಯಲ್ಲಿ ಇದೆ ಎಂದು ಹೇಳಕೊಳ್ಳಲು ನಮಗೆ ಹೆಮ್ಮೆ ಆಗುತ್ತದೆ. ಏಕೆ೦ದರೆ ಈ ಮಧುಗಿರಿ ಬೆಟ್ಟವು ನಮ್ಮ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಬೆಟ್ಟವಾಗಿದೆ. ಇದು ಅತ್ಯ೦ತ ಸುಂದರವಾಗಿ ರೂಪುಗೊಂಡಿದೆ. ಇದು ಅಷ್ಟೇ ಅಪಾಯಕಾರಿಯಾದ ಬೆಟ್ಟವು ಕೂಡ ಆಗಿದೆ. ಈ ಬೆಟ್ಟವು ನಮ್ಮ ತುಮಕೂರು ಜಿಲ್ಲೆಯಿಂದ ಬಳ್ಳಾರಿವರೆಗೂ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ ಎಂದು ಹೇಟುವುದುಂಟು. ಈ ಬೆಟ್ಟವು ಸುಮಾರು 3986 ಅಡಿ ಎತ್ತರವಿದೆ. ಹಾಗೇ ಇದು ಎಷ್ಟೋ ಅಪಾಯಕಾರಿಯಾಗಿದೆ. ಏಕೆಂದರೆ ಇಲ್ಲ ಯಾವುದೇ ರೀತಿಯಾದ ಮೆಟ್ಟಲುಗಳು ಇಲ್ಲ. ಆ ಬೆಟ್ಟದಲ್ಲಿ ಸಣ್ಣದಾಗಿ ಕೊರೆದಿರುವ ಸ್ವಲ್ಪ ಮಟ್ಟದ ಮೆಟ್ಟಲುಗಳು ಇದೆ. ಸ್ವಲ್ಪ ದೂಸರ ಮಾತ್ರ ಮೆಟ್ಟಿಲುಗಳನ್ನು ಮಾಡಿದ್ದಾರೆ. ಆದರೆ ಅಷ್ಟು ಇಲ್ಲ ಹಾಗೂಸ ಈ ಬೆಟ್ಟ ಸುಮಾರು 17ನೇ ಶತಮಾನದಲ್ಲಿ ಕಟ್ಟಿರುವ ಕೋಟೆಯುದೆ. ಈ ಕೋಟಿಯನ್ನು ರಾಜ ‘ಹಿರೇಗೌಡ' ಎ೦ಬ ಪಾಳೇಗಾರ ನಿರ್ಮಿಸಿದ್ದಾನೆ.

ಈ ಬೆಟ್ಟವನ್ನು ಬಹಳ ವರ್ಷಗಳ ಹಿಂದೆ ಇದನ್ನು ಮದ್ದನ್‌ಗಿರಿ ಎನ್ನಲಾಗುತ್ತಿದ್ದು. ಹಾಗೆ ಕೆಲವು ವರ್ಷಗಳು ಅದನ್ನು ಹೇಳಲಾಗುತ್ತಿದ್ದು, ಅನಂತರ 1926 ರಲ್ಲಿ ಈ ಮಧುಗಿರಿ ಬೆಟ್ಟದ ತುಂಬೆಲ್ಲಾ ಜೇನುಗೂಡುಗಳು ಹಾಗೂ ಜೇನುನೊಣಗಳು ತುಂಬಿಕೊಳ್ಳುವುದನ್ನು ಗಮನಿಸಿ “ಜ್ಞಾನನಪೀಠ ಪ್ರಶಸ್ತಿ ಪಡೆದುಕೊಂಡ” ಮಾಸ್ತಿ ವೆ೦ಕಟೇಶ್‌ ಅಯ್ಯಂಗಾರ್‌ ರವರು ಮದ್ದನ್‌ಗಿರಿಯನ್ನು ಮಧುಗಿರಿಯಾಗಿ ಬದಲಾಯಿಸಿದ್ದರಂತೆ. ಈ ಮಧುಗಿರಿಯ ಅರ್ಥವನ್ನು ತಿಳದುಕೊಳ್ಳುವುದಾದರೆ ಮಧು ಎ೦ದರೆ ಜೇನು ಮತ್ತು ಗಿರಿ ಎಂದರೆ ಬೆಟ್ಟ ಎ೦ದು ಈ ಮಧುಗಿರಿಯ ಅರ್ಥವಾಗಿದೆ ಹಾಗೂ ಆಡು ಭಾಷೆಯಲ್ಲಿ ಏಕಶೀಲ ಬೆಟ್ಟವನ್ನು ಮಧುಗಿರಿ ಬೆಟ್ಟವೆ೦ದೆ ಹೇಳಲಾಗುತ್ತದೆ.

ಈ ಮಧುಗಿರಿ ಬೆಟ್ಟವನ್ನು ಹತ್ತಲು ಸುಮಾರು 2-3 ಗಂಟೆ ಪ್ರಯಾಣ ಬೇಕಾಗುತ್ತದೆ. ಈ ಬೆಟ್ಟವನ್ನು ಹಿರೇಗೌಡ ಕಟ್ಟಸಿದ್ದು. ಇದನ್ನು ಅಭೇದ್ಯ ಕೋಟೆ ಎ೦ದು ಕರೆದರೂ ತಪ್ಪಗಲಾರದು. ಏಕೆ೦ದರೆ ಆ ಬೆಟ್ಟವು ತುಂಬಾ ಅಪಾಯಕಾರಿಯಾಗಿದೆ. ಕಳ್ಳರು ಆ ಬೆಟ್ಟವನ್ನು ಹತ್ತಲು ಪ್ರಯತ್ನಿಸಿದ್ದರೆ ಆ ಬೆಟ್ಟವನ್ನು ಹತ್ತುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿದ್ದರು. ಆ ಬೆಟ್ಟದಲ್ಲಿ ಪ್ರವೇಶಿಸುವ ಒಂದು ಒಂದು ದ್ವಾರಗಳಗೆ ಹೋಗುವಾಗ ಒಂದು ಒಂದು ಕಡೆಯ ಶತ್ರುಗಳನ್ನು ಹೊಂಚುಹಾಕೊಳ್ಳುತ್ತಿದ್ದಾರು. ಹಾಗೂ ಆ ಬೆಟ್ಟದ ಮೇಲೆ ನಿ೦ತರೆ ಅಲ್ಲಿ ಬರುವುದು ಯಾರು ಎಂದು ತಿಳಯುತ್ತಿದ್ದರು. ಪ್ರವೇಶ ದ್ಹಾರಗಳು ಸುತ್ತ-ಮುತ್ತಲ ಶತ್ರುಗಳು ಬರುವುದನ್ನು ನೋಡಲು ಕಿಟಕಿಯ ತರ ಮಾಡಲಾಗಿದೆ. ಆದ್ದರಿ೦ದ ಇದನ್ನು ಅಭೇದ್ಯ ಕೋಟೆ ಎನ್ಜಬಹುದು.

ಅಲ್ಲ ಇರುವ ವಾಸ್ತುಶಿಲ್ಪಗಳು ಅರಬ್ಬಿಯದು ಆಗಿದೆ ಹಾಗೂ ಅಲ್ಲಿ ಕಟ್ಟಿರುವ ಕೋಟೆಗಳು ಕಲ್ಲಿನಿ೦ದ ನಿರ್ಮಿಸಲಾಗಿದೆ. ಮತ್ತು ಐಹಳ ಸುರಂಗ ಮಾಧ್ಕಗಳನ್ನು ನೋಡಬಹುದು.

ಹಾಗೂ ಮಧುಗಿರಿಯ ಬೆಟ್ಟವನ್ನು ಹೈದರಾಲಿಯು ಆ ಕೋಟೆಯನ್ನು ವಶಪಡಿಸಿಕೊಂಡು ಕೋಟೆಗಳನ್ನು ಕಟ್ಟಸಿದ್ದ ಎನ್ನಲಾಗುತ್ತದೆ. ಹಾಗೂ ಆರನೇ ಪ್ರವೇಶ ದ್ವಾರವನ್ನು ಹೈದರಾಲಿ ಕಟ್ಟಿಸಿದನು ಎನ್ನಲಾಗುತ್ತದೆ.

ಆ ಮಧುಗಿರಿ ಬೆಟ್ಟಗಳಲ್ಲಿ ಎ೦ಟು ಸೈನಿಕರ ತಂಗುದಾಣಗಳು ಇದ್ದು ಅಲ್ಲಿ ಎಷ್ಟೇ ಬೇಸಿಗೆಯ ಸಮಯದಲ್ಲಿಯೂ ತ೦ಗಾಳಯು ಏರುತ್ತದೆ. ಆ ಅನುಭವವನ್ನು ನಾವು ಅನುಭವಿಸಿದ್ದು ಉ೦ಟು.

ವಿಶೇಷ:

ಮಧುಗಿರಿ ಬೆಟ್ಟದಲ್ಲಿ ಈಗಲೂ ಸಹ 5-6 ಸಾವಿರ ಜನರು ಆ ಅಪಾಯಕಾರಿ ಬೆಟ್ಟವನ್ನು ಹತ್ತಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಮ್ಮ ರಾಷ್ಟ್ರಧ್ವಜವನ್ನು ಆರಿಸುತ್ತಾರೆ.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal