Tumbe Group of International Journals

Full Text


ಅರಣ್ಯ

ಚಂದನ ಆರ್‌

U11GT2150213

ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

chanduchandana2023@gmail.com                   Ph.no: 9743294407


ಅರಣ್ಯವು ಸಮ್ಮ ಪರಿಸರ ವ್ಯವಸ್ಥೆಯ. ಪ್ರಮುಖ ಭಾಗವಾಗಿದ್ದು ಅದನ್ನು ರಕ್ಷಿಸಬೇಕಾಗಿದೆ. ಮರಗಳು ದೃತಿಸಂಶ್ಲೇಷಣೆಯ ಮೂಲಕ ವಾತಾವರಣದಿಂದ ಇಂಗಾಲದ ಡೈಲಕ್ಸೈಡ್‌ ಅನ್ನು ತೆಗೆದುಕೊಂಡು ಆಮ್ಲಜನಕವನ್ನು ಗಾಳಿಗೆ ಬಿಡುಗಡೆ ಮಾಡುತ್ತವೆ. ಅರಣ್ಯಗಳನ್ನು ಭೂಮಿಯ ಶ್ವಾಹಕೋಶಗಳೆಂದು ಕರೆಯಲಾಗುತ್ತದೆ. ಅವು ನಮ್ಮ ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ ಮತ್ತು ಆಹಾರ ಚಕ್ರದಲ್ಲಿ ಸಮತೋಲದ ಮತ್ತು ಗ್ರಹದ ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖವಾಗಿವೆ.

 

 

ಅರಣ್ಯಗಳು ಭೂಮಿಯ ಮೇಲಿನ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಅದರಲ್ಲಿ ವಿವಿಧ ಗಿಡಮರಗಳು, ಪ್ರಾಣಿ, ಪಕ್ಷಿ, ಹಣ್ಣುಕಾಯಿಗಳು ಮತ್ತು ಪೊದೆಗಳನ್ನು ಒಳಗೊಂಡ ಸಮೂಹವನ್ನು ನಾವು ಅರಣ್ಯವೆಂದು ಕರೆಯುತ್ತೇವೆ. ಭಾರತದಲ್ಲಿ ಅರಣ್ಯ ಸಂಶೋಧನ ಕೇಂದ್ರವು ಉತ್ತರಾಂಚಲ್‌ ರಾಜ್ಯದ ಡೆಹರಡೂನ್‌ನಲ್ಲಿದೆ. 1952 ರಲ್ಲಿ ನಮ್ಮ ದೇಶದಲ್ಲಿ ರಾಷ್ಟ್ರೀಯ ಅರಣ್ಯ ನೀತಿ ಎಂಬ ಕಾಯ್ದೆಯನ್ನು ಜಾರಿಗೆ ತಂದರು. ಭಾರತೀಯ ಅರಣ್ಯ ಸಂರಕ್ಚಣಾ ಕಾಯ್ದೆಯನ್ನು 1980 ರಲ್ಲಿ ಜಾರಿಗೆ ತರಲಾಯಿತು. ಭಾರತೀಯ ಸಂರಕ್ಷಣಾ ತರಬೇತಿ ತರಬೇಕಿ ಸಂಸ್ಥೆಯನ್ನು ಆಂಧ್ರಪ್ರದೇಶ ರಾಜ್ಯದ ಹೈದರಾಬಾದ್‌ನಲ್ಲಿ ಸ್ಥಾಪಿಸಲಾಯಿತು. ನಮ್ಮ ದೇಶದಲ್ಲಿ ಅತಿ ಹೆಚ್ಚು. ಆರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಮಧ್ಯ ಪ್ರದೇಶವಾಗಿದ್ದು, ಅತಿ ಕಡಿಮೆ ಅರಣ್ಯವನ್ನು ಪ್ರದೇಶವೆಂದು ರಾಜ್ಯ ಹರಿಯಾಣವಾಗಿದೆ. ಅಸ್ಸಾಂ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಕ ಪ್ರಮಾಣದಲ್ಲಿ ಕಾಡು ಹೊಂದಿರುವ ರಾಜ್ಯವಾಗಿದೆ. ಅರಣ್ಯವನ್ನು ಬೆಳೆಸುವ ಕಲೆ. ಮತ್ತು ವಿಜ್ಞಾನವನ್ನು ಸಿಲ್ಟಿಕಲ್ಪರ್‌ ಎಂದು ಕರೆಯುವರು. ಅರಣ್ಯಗಳ ಬೆಳವಣಿಗೆ ಸಂರಕ್ಷಣೆ, ವೈಜ್ಞಾನಿಕ ನಿರ್ವಹಣೆ ಮತ್ತು ಉತ್ಪನ್ನಗಳನ್ನು ಸತತವಾಗಿ ದೊರೆಪುವಂತೆ ಯೋಜಿಸಿ ಬಳಕೆ ಮಾಡುವುದನ್ನು ಅರಣ್ಯಗಾರಿಕೆ ಎನ್ನುವರು. ಮಾರ್ಚ್‌ 2ನೇ ದಿನವನ್ನು "ವಿಶ್ವವನ”' ದಿನವನ್ನಾಗಿ ಆಚರಿಸುವರು. 20%. ನೇ ವರ್ಷವನ್ನು ಅಂತರಾಷ್ಟ್ರೀಯ ಅರಣ್ಯ ವರ್ಷವೆಂದು ಘೋಷಿಸಲಾಗಿದೆ.

ಭಾರತದ ಆರಣ್ಯದ ವಿಧಗಳು:

ಭಾರತದ ಅರಣ್ಯಗಳನ್ನು ಏಳು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

  1. ಉಷ್ಣವಲಯದ ತೇವಯುತ ಸದಾ ಹಸಿರಾಗಿರುವ ಆರಣ್ಯಗಳು:

ಈ ಅರಣ್ಯಗಳು ಭಾರತದಲ್ಲಿ 200 ಸೆಂ.ಮೀ ವಾರ್ಷಿಕ ಸರಾಸರಿ ಮಳೆ ಮತ್ತು 25-27 ಸೆಂಟಿಗ್ರೇಡ್‌ ಉಷ್ಣಾಂಶ ಹಾಗೂ ಶೇ.77ರಷ್ಟು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ಪ್ರಕಾರದ ಅರಣ್ಯಗಳಲ್ಲಿನ ಗಿಡಗಳು ಸುಮಾರು 45 ಮೀ ಗಿಂತಲೂ ಹೆಚ್ಚು ಎತ್ತರವಾದ ಹಾಗೂ ಇವು. ಬಹಳ ದಟ್ಟವಾಗಿ ಬೆಳೆದಿರುತ್ತವೆ. ಈ ಅರಣ್ಯಗಳು ಭಾರತದಲ್ಲಿ ಪೂರ್ವ ಘಟ್ಟಗಳಲ್ಲಿ, ಪಶ್ಚಿಮಘಟ್ಟಗಳಲ್ಲಿ, ಹಿಮಾಲಯದ ಪಾದಬೆಟ್ಟಗಳಲ್ಲಿ ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಹಾಗೂ ಪೂರ್ವೋತ್ತರ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರ ರಾಜ್ಯಗಳಲ್ಲಿ ಕಾಣಬಹುದು. ಈ ಅರಣ್ಯಗಳಲ್ಲಿ ಎಬೋನಿ, ರೊಸ್‌ವುಡ್‌, ರಬ್ಬರ್‌, ಸಿಂಕೋನ, ಗುರ್ಜಾನ, ಸೀಡಾರ, ಭತ್ತ, ಜಾಮೂನ, ಕುಸುಮ, ಬಿದಿರು ಚಂಪಾ, ಮಹೀಗನಿ ಮುಂಶಾದ ಮರಗಳನ್ನು ನಾವು ನೋಡಬಹುದಾಗಿದೆ.

2. ಎಲೆ ಉದುರಿಸುವ ಮಾನ್ಸೂನ್‌ ಅರಣ್ಯಗಳು:

ಈ ಪ್ರಕಾರದ ಅರಣ್ಯಗಳು 100-200 ಸೆಂ.ಮೀ ಸರಾಸರಿ ಮಳೆ ಮತ್ತು 26-27 ಸೆಂ. ಗ್ರೇಡ್‌ ಉಷ್ಣಾಂಶ ಮತ್ತು ಶೇ. 60-70 ರಷ್ಟು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತವೆ ಈ ಅರಣ್ಯಗಳಲ್ಲಿನ ಸಸ್ಯಗಳು ಮಳೆಗಾಲದಲ್ಲಿ ಮಾತ್ರ ಹಸಿರಾಗಿರುತ್ತವೆ ಆದರೆ ಬೇಸಿಗೆಯಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ. ದೇಶದ ಆರ್ಥಿಕತೆಯ ದೃಷ್ಠಿಯಿಂದ ಹೆಚ್ಚು ಬೆಲೆಬಾಳುವ ಸಸ್ಯಗಳನ್ನು ಒದಗಿಸುವ ಅರಣ್ಯಗಳೆಂದರೆ ಎಲೆ ಉದುರಿಸುವ ಮಾನ್ಸೂನ್‌ ಅರಣ್ಯಗಳು. ಇವುಗಳು ಕರ್ನಾಟಕ್ಕೆ ಮಹಾರಾಷ್ಟ್ರ, ಕೇರಳ ಗುಜರಾತ್‌, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಾಣಸಿಗುತ್ತವೆ. ಈ ಅರಣ್ಯದಲ್ಲಿ ಜಾಲಿಮರ, ತೇಗ, ಬೀಟೆ, ನಂದಿ, ಮತ್ತಿ, ಹೊನ್ನೆ, ಮಲಬರಿ, ನಾಗಸಂಪಿಗೆ ಮತ್ತು ಅರ್ಜುನ ಮರಗಳನ್ನು ಕಾಣಬಹುದು. ಕರ್ನಾಟಕ ರಾಜ್ಯ ಭಾರತದಲ್ಲಿ ಅತಿ ಹೆಚ್ಚು ಗಂಧದ ಮರಗಳನ್ನು ಉತ್ಪಾದಿಸುತ್ತದೆ. ಪ್ರಪಂಚ ಮಂಸಿನ್ಮಾರ್‌ ದೇಶ ತೇಗದ ಮರಗಳನ್ನು ಹೆಚ್ಚು ಉತ್ಪಾದಿಸುವುದು.

3. ಮರುಭೂಮಿ ಸಸ್ಯವರ್ಗ:

ಗರಿಷ್ಠ ಉಷ್ಣಾಂಶ ಮತ್ತು ಕನಿಷ್ಟ ಮಳೆಯನ್ನು ಹೊಂದಿದಂತಹ ಪ್ರದೇಶಗಳಿಗೆ ಮರುಭೂಮಿ ಎನ್ನುವರು. ಮರುಭೂಮಿಗಳಲ್ಲಿ ಸರಾಸರಿ ಉಷ್ಣಾಂಶ 35 ಡಿಗ್ರಿ ಸೆಂಟಿಗ್ರೇಡ್‌ ಇದು. ಇಲ್ಲಿನ ವಾರ್ಷಿಕ ಸರಾಸರಿ ಮಳೆ ಕೇವಲ 25 ಸೆಂ.ಮೀ ಆಗುತ್ತದೆ. ಮರುಭೂಮಿಗಳಲ್ಲಿ ಕೆಲವೇ ಕೆಲವು ಸೆಸ್ಯಗಳು ಕಂಡುಬರುತ್ತವೆ. ಮರುಭೂಮಿಗಳಲ್ಲಿ ಕಂಡುಬರುವ ಉಷ್ಣಪೋಷಿತ ಸಸ್ಯವರ್ಗಕ್ಕೆ ಗ್ಸೀರೋಫ್ಯೆಟ್ಸ್‌ ಎನ್ನುವರು. ಭಾರತದ ಥಾರ್‌ ಮರುಭೂಮಿಯಯು ರಾಜಸ್ಥಾನ, ದಕ್ಷಿಣ ಪಂಜಾಬ್‌, ಮಧ್ಯಪ್ರದೇಶ, ಉತ್ತರ ಗುಜರಾತ್‌ ರಾಜ್ಯಗಳಲ್ಲಿ ಕಾಣಬಹುದು. ಮರುಭೂಮಿ ಪ್ರದೇಶದಲ್ಲಿ ಕಳ್ಳಿ, ಕತ್ತಾಳೆ, ಕರಿಗೊಬ್ಬರ ಪಾಪಾಸ್‌ಕಳ್ಳಿ ಕುಬ್ಬಹುಲ್ಲು, ಜಾಲಿಮರಗಳು ಈಚಲಮರಗಳು ಮುಂತಾದ ಗಿಡಗಳನ್ನು ಕಾಣಬಹುದು. ಈ ಅರಣ್ಯದಲ್ಲಿ ಬೆಳೆಯುವ ಗಿಡಗಳು ಕಾಂಡದಲ್ಲಿ ಎಲೆಗಳನ್ನು ಹೊಂದಿರುವುದಿಲ್ಲ.

4. ಹುಲ್ಲುಗಾವಲು ಪ್ರದೇಶ:

ಭಾರತದಲ್ಲಿ ಹುಲ್ಲುಗಾವಲು ಪ್ರದೇಶವು 80-100 ಸೆಂ.ಮೀ ವಾರ್ಷಿಕ ಸರಾಸರಿ ಮಳೆಯಾಗುವ ಪ್ರದೇಶಗಳಲ್ಲಿ ಕಾಣಬಹುದು. ಭಾರತದಲ್ಲಿ ಹುಲ್ಲುಗಾವಲು ಪ್ರದೇಶವು ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ತಮಿಳುನಾಡು. ಕರ್ನಾಟಕ್ಕೆ ಗುಜರಾತ್‌ ಪೂರ್ವ ಮತ್ತು ಪಶ್ಚಿಮಘಟ್ಟಗಳಲ್ಲಿ ಕಾಣಬಹುದು. ಇಲ್ಲಿ ಸಬಾಯ ಜಾತಿಯ ಹುಲ್ಲು, ಬಬೂಲ್‌, ಶಿಷಂ, ಅಲ್ಪಾ ಜಾತಿಯ ಹುಲ್ಲುಗಳನ್ನು ನಾವು ಕಾಣಬಹುದಾಗಿದೆ. ಹಾಗು ಸಬಾಯ ಜಾತಿಯ ಹುಲ್ಲನ್ನು ಕಾಗದ ಕೈಗಾರಿಕೆಯಲ್ಲಿ ಕಚ್ಚಾವಸ್ತುವಾಗಿ ಉಪಯೋಗಿಸುತ್ತಾರೆ. 

5. ಮ್ಯಾಂಗ್ರೋವ್‌ ಅರಣ್ಯಗಳು:

ನದಿ ಮುಖಜ ಭೂಮಿಗಳಲ್ಲಿ ತೀರವಲಯದ ತಗ್ಗು ಪ್ರದೇಶಗಳಲ್ಲಿ ಮ್ಯಾಂಗ್ರೋವ್ ಅರಣ್ಯಗಳು ಹಂಚಿಕೆಯಾಗಿವೆ. ಭಾರತದಲ್ಲಿ ಸುಮಾರು 16 ಮ್ಯಾಂಗ್ರೊವ್ ವಲಯಗಳಿವೆ. ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ, ಅಂಡಮಾನ್‌ ನಿಕೋಬಾರ್‌ ದ್ವೀಪಗಳು ಗುಜರಾತ್‌ ಮುಂತಾದ ಪ್ರದೇಶಗಳಲ್ಲಿ ಮ್ಯಾಂಗ್ರೋವ್‌ ಅರಣ್ಯಗಳನ್ನು ನೋಡಬಹುದು. ಈ ಅರಣ್ಯಗಳಲ್ಲಿ "ಸುಂದರಿ” ಎಂಬ ಪ್ರಕಾರದ ಸಸ್ಯಗಳು ಬೆಳೆಯುತ್ತವೆ.

6. ಎಲೆ ಮೊನಚಾದ ಕಾಡು:

ಈ ಪ್ರಕಾರದ ಅರಣ್ಯಗಳು ಜಮ್ಮು ಕಾಶ್ಮೀರ, ಹಿಮಾಚಲಪ್ರದೇಶ ಮತ್ತು ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಕಾಣಬಹುದು. ಈ ಅರಣ್ಯಗಳಲಿ ವೈನ್‌ಸ್ಟ್ರೋಕ್‌, ಓಕೆ, ದೇವದಾರ, ಫಿರ್‌, ಲಾರ್ಕ್‌, ಹೆಮ್ಲಾಕ್‌, ಸಿಡಾರ ಆ್ಯಪಲ್‌ ಮುಂತಾದ ಮರಗಳು ಬೆಳೆಯುತ್ತವೆ. ಈ ಅರಣ್ಯಗಳು ನ್ಯೂಸ್‌ ಪ್ರಿಂಟ್‌ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತವೆ.

7. ಅಲ್ಪಾಯಿನ್‌ ಅರಣ್ಯಗಳು:

ಹಿಮಾಲಯದ ಪರ್ವತಗಳಲ್ಲಿ ಬೇರೆ ಬೇರೆ ಎತ್ತರದಲ್ಲಿ ವಿವಿಧ ಪ್ರಕಾರದ ಅರಣ್ಯಗಳು ಕಂಡುಬರುತ್ತವೆ. ಹಿಮಾಲಯದ ಪಾದ ಬೆಟ್ಟಗಳಲ್ಲಿ ಸುಮಾರು 1500 ಮೀಟರ್‌ ಎತ್ತರದಲ್ಲಿ ನಿತ್ಯ ಹರಿದ್ವರ್ಣದ ಅರಣ್ಯಗಳು ಕಂಡು ಬರುತ್ತವೆ. 3500 ಮೀ ನಿಂದ 4870 ಮೀ ಎತ್ತರದವರೆಗೆ ಅಲ್ಟಾಯಿನ್‌ ಕುರುಚಲು ಸಸ್ಯವರ್ಗ ಕಂಡು ಬರುತ್ತವೆ. ಹಾವಸೆ ಸಸ್ಯಗಳಾದ ಜುನಿಪರ್‌, ಹನಿಕಲ್‌ ಪ್ರಿಮರೋಸ್‌ ಮುಂತಾದ ಹೂವಿನ ಸಸ್ಯಗಳು ಕಂಡು ಬರುತ್ತವೆ. ಇಲ್ಲಿ ತಂಪಾದ ವಾಯು ಗುಣವಿರುವುದರಿಂದ ಕೇವಲ ಹೂವಿನ. ಸಸ್ಯಗಳು ಮಾತ್ರ ಕಾಣಬಹುದು.

ಇಂತಹ ಉಪಕಾರಿಯಾಗಿದ್ದ ಅರಣ್ಯವನ್ನು ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಅರಣ್ಯವನ್ನು ನಾಶಮಾಡುತ್ತಾ ಬರುತ್ತಿದ್ದಾನೆ. ಅರಣ್ಯ ನಾಶವು ಕೃಷಿ ಮತ್ತು ಕಟ್ಟಡಗಳ ನಿರ್ಮಾಣದಂತಹ ಉದ್ದೇಶಗಳಿಗಾಗಿ ಕಾಡಿನ ಹೆಚ್ಚಿನ ಭಾಗದಿಂದ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಾಗಿದೆ. ಅಂತಹ ಭೂಮಿಯಲ್ಲಿ ಮರಗಳನ್ನು ನೆಡಲಾಗುವುದಿಲ್ಲ. ಕೈಗಾರಿಕಾ ಯುಗದ ವಿಕಸನದ ನಂತರ ಪ್ರಪಂಚದಾದ್ಯಂತ ಸುಮಾರು ಅರ್ಧದಷ್ಟು ಕಾಡುಗಳು ನಾಶವಾಗಿವೆ. ಇದರಿಂದ ಪರಿಸರದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಇದು ಉಂಟುಮಾಡುವ ಕೆಲವು ಸಮಸ್ಯೆಗಳೆಂದರೆ ಮಣ್ಣಿನ ಸವೆತ, ಜಲಚಕ್ರದ ಅಡ್ಡಿ, ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯ ನಷ್ಟ.

ಮುಖ್ಯವಾಗಿ ಅರಣ್ಯಗಳಿಂದ ಮಾನವರು ಬದುಕಲು ಮತ್ತು ಏಳಿಗೆಗಾಗಿ ಬಳಸಬಹುದಾದ ಅನೇಕ ಸಂಪನ್ಮೂಲಗಳನ್ನು ಒದಗಿಸುತ್ತವೆ. ಕಾಡುಗಳು ಪಕ್ಷಿಗಳು, ಸಸ್ತನಿಗಳು ಮತ್ತು ಕೀಟಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತವೆ. ಇವುಗಳು ಹೆಚ್ಚುವರಿಯಾಗಿ ಮಳೆಯ ನೀರನ್ನು ಹೀರಿಕೊಳ್ಳುವುದರಿಂದ ಪ್ರವಾಹವನ್ನು ತಡೆಗಟ್ಟಬಹುದು.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal