Tumbe Group of International Journals

Full Text


ಮಾವತ್ತೂರು ಕೆರೆ: ಒ೦ದು ಐತಿಹಾಸಿಕ ವಿಶಿಷ್ಟ

ಅಂಜನ ಆರ್ ಜಿ

U11GT21C0481

ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

renukargrenu@gmail.com              Ph.no: 9663614905


ಮಾವತ್ತೂರು ಇದು ತುಮಕೂರು ಜಿಲ್ಲೆ ಕೊರಟಗೆರೆ.ತಾಲೂಕಿನಲ್ಲಿ ಇರುವ ಒ೦ದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒ೦ದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿ೦ದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ.

ಮಾವತ್ತೂರು ತನ್ನಲ್ಲಿ ಇರುವ ದೊಡ್ಡ ಕರೆಗೂ ಕೂಡ ಪ್ರಸಿದ್ಧಿಯಾಗಿದೆ. ೨೨೦0 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೫೦೦ ಎಕರೆಗೂ ಕ್ಕೂ ಹೆಚ್ಚು ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕರೆಯ ಮೇಲಿನಿ೦ದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ.

ಮಾವತೂರು ಕೆರೆ:

ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯ೦ತ ಹಳೆಯದಾದ, ವಿಸ್ತಾರವಾದ ಕೆರೆ. ಕ್ರಿಶ ೧೮೮೨ ರಲ್ಲೇ ಮೈಸೂರು ಮಹಾರಾಜರರಾದ ಚಾಮರಾಜ ಒಡೆಯರ್‌ (೧೮೮೦ - ೧೯೦೨) ಕಾಲದಲ್ಲಿ ಈ ಬೃಹತ್‌ ಕರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಥ ಕಾಮಗಾರಿಯಲ್ಲಿ, ೧೮೯೮ ಕೆರೆ ಉದ್ವಾಟನೆಯಾಯಿತು. ಸುಮಾರು ೧೧೦೦ ಮೀಟರ್‌ ಉದ್ದ, ೬೦ ಅಡಿ ಎತ್ತರದ, ೧೫ ಅಡಿ ಎತ್ತರದ ಮೊದಲ ಹ೦ತದ ಅದರ ಮೇಲೆ ೪೫ ಅಡಿ ಎತ್ತರದ ಎರಡನೇ ಹಂತದ ಇದರ ಏರಿ, ಹಾಗೂ ಮೂರನೇ ಹಂತದಲ್ಲಿ ೧೫ ಅಡಿ ಎತ್ತರದ ಕೆರೆಯ ಏರಿಯು ಇ೦ದಿಗೂ ಬೃಹತ್‌ ಅಣೆಕಟ್ಟೆಗಳ ಗುಣಮಟ್ಟಕ್ಕೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಆಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕರೆಯ ಕಾಮಗಾರಿಗೆ, ಸಿಮ೦ಟ್‌ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು, ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್‌ ಕರೆ ಕಟ್ಟಲು ಅ೦ದಿನ ಕಾಲಕ್ಕೆ ಖರ್ಚಾಗಿದ್ದ ಹಣ ₨೩,೬ ೨,೮೪೩/-

ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ವಿಸ್ತಾರವಾದುದು. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರಯ ಮುಂದಿನ ತುದಿಯು ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಠ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕರೆ ಸಂಪೂರ್ಣವಾಗಿ ಎ೦ದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ. ೨೮ ಅಡಿ ಆಳದ ಗರಿಷ್ಠ ೧.೫ ಟಿ.ಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿ೦ತ ಹಿ೦ದೆ ಪ್ರತಿ ವರ್ಷವೂ ಕರೆ ಸಂಪೂರ್ಣ ಭರ್ತಿಯಾಗುತ್ತಿತ್ತು.

ಕೆರೆಯ ಮದ್ಯ ಭಾಗದಲ್ಲಿ ಇರುವ ಒ೦ದು ಸಣ್ಣ ಹಾಳು ಬಿದ್ದ ಕಲ್ಲಿನ ಮಂಟಪವನ್ನು "ವೀರುಲ (ವೀರನ) ಗುಡಿ” ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಮಳೀಯರ ಅಭಿಪ್ರಾಯ. ಹಾಗೆಯೇ ಕರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ಆ ಅಡಿ ಎತ್ತರದ ಪುರಾತನ ಕಾಲದ ಮಾವಿನ ಮರದ ಅವಶೇಷವು ಇಂದಿಗೂ ಕೂಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕರೆ ತುಂಬಿದಾಗ "ಗರುಡಾಚಲ” ನದಿಯು ಮುಂದೆ ಅಕ್ಕಿ ರಾ೦ಪುರ ಬಳಿ ತೀತಾ ಕೆರೆಯಿ೦ದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಪೆನ್ನಾರ್‌ ನದಿಯಾಗಿ, ಆಂಧ್ರಪ್ರದೇಶದ ಬ೦ಗಾಳಕೂಲ್ಲಿ ನದಿಯನ್ನು ಸೇರುತ್ತದೆ.

ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತ ಮಾವತ್ತೂರಮ್ಮ, ಹಾಗೂ ಆ೦ಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊ೦ಡಿದ್ದರೆ೦ದು ಹಿರಿಯರು ಹೇಳುತ್ತಾರೆ. ಇದುವರೆಗೂ ಕರೆಯ ತಳವನ್ನೇ ಕಾಣಲಾಗಿಲ್ಲ, ಅ೦ದರೆ ನೂರಾರು ವರ್ಷದಿ೦ದ ಕರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ.

ಸರ್ಕಾರದ, ಅಧಿಕಾರಿಗಳ ನಿರ್ಲಕ್ಷ್ಯ & ಭ್ರಷ್ಟತನದಿ೦ದ ಸಾವಿರಾರು ಮೆಟ್ರಿಕ್‌ ಟನ್‌ ಮರಳು ಕಳ್ಳರ ಪಾಲಾಗಿದೆ. ಕೆರೆಯ೦ಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ಧಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪ್ರಾಣಿ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ. ಪ್ರತಿ ಋತುಮಾನದಲ್ಲೂ ದೇಶ ವಿದೇಶಗಳಿಂದ ಹಕ್ಕಿಪಕ್ಷಿಗಳು ಇಲ್ಲಿಗೆ ಬ೦ದು ಹೋಗುತ್ತವೆ.

25 ವರ್ಷಗಳ ಬಳಿಕ ಕೋಡಿ ಬಿದ್ದ ಮಾವತ್ತೂರು ಕೆರೆ

ನದಿಪಾತ್ರದ ಸೇತುವೆಗಳು ಜಲಾವೃತವಾಗಿದ್ದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮಣ್ಣಿನ ಮನೆಗಳು ಕುಸಿದಿವೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಸಾವಿರಾರು ಎಕರೆ ಕೃಷಿ, ರೇಷ್ಮೆ ಮತ್ತು ತೋಟಗಾರಿಕ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾ೦ತರ ರೂ ನಷ್ಟವಾಗಿದೆ.

ಕೊರಟಗೆರೆ ಕ್ಷೇತ್ರದ ಜಯಮಂಗಲಿ, ಸುವರ್ಣಮುಖಿ ಮತ್ತು ಗರುಡಾಚಲ ನದಿಗಳು 25 ವರ್ಷಗಳ ನಂತರೆ ಮತ್ತೆ ಸಂಗಮವಾಳ?ಿವೆ. ವೀರಸಾಗರ ಮತು, ಚೀಲಗಾನಹಳ್ಳಿ ಗ್ರಾಮವೇ ಜಲಾವೃತವಾಗಿ ಮನೆಯಲ್ಲಿದ್ದ ದವಸಧಾನ್ಯಗಳು ನೀರಿನಲ್ಲಿ ಮುಳುಗಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್‌ ಇಲಾಖೆಯ ಸಹಾಯದಿ೦ದ ತೋಟದಲ್ಲಿನ ರೈತರನ್ನು ರಕ್ಷಣೆ ಮಾಡಲಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ರೈತರು ಬಿತ್ತನೆ ಮಾಡಿದ್ದ ಕೃಷಿ ಬಳಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ನೂರಾರು ಮನೆಗಳು ನೆಲಸಮ ಆಗಿವೆ. ಮನೆಯಲ್ಲಿದ್ದ ಧಾನ್ಯಗಳು ನಾಶವಾಗಿವೆ. ಹೂವಿನ ಬೆಳಗಳು ವೀರಿನಲ್ಲಿ ಮುಳುಗಿವೆ. ತೋಟಿಗಳಲ್ಲಿ ೫ ಅಡಿಗೂ ಅಧಿಕ ನೀರು ನಿಂತಿದೆ. ಮಳೆರಾಯನ ಆರ್ಭಟಓದಿ೦ದ ಕೊರಟಗೆರೆ ಕ್ಷೇತ್ರದಲ್ಲಿ ಊಹಿಸಲು ಆಗದಷ್ಟು ನಷ್ಟವಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿವರ್ಗ ಜ೦ಟಿ ಸಮೀಕ್ಷೆ ಮಾಡಬೇಕಿದೆ.

ತ್ರಿಮೂರ್ತಿ ಸಂಗಮ

ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಗಳು ಕೊರಟಗೆರೆ ಕ್ಷೇತ್ರದ ಮೂಲಕ ಹರಿಯುತ್ತವೆ. 3 ನದಿಗಳು ವೀರಸಾಗರ ಬಳಿ. ಸ೦ಗಮವಾಗಿ ಜಯಮಂಗಲಿ ನದಿಯಾಗಿ ಹರಿದು ಆಂಧ್ರಪ್ರದೇಶದ ಪರಿಗಿ ಕೆರೆಗೆ ಸೇರಲಿದೆ. ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಯು 25ವರ್ಷದ ಸಂತರ ಭರ್ತಿಯಾಗಿದೆ. ತೀತಾ ಜಲಾಶಯ, ಜಿಟ್ಟಿಅಗ್ರಹಾರ ಮತ್ತು ತು೦ಬಾಡಿ ಜಲಾಶಯ ಸೇರಿದ೦ತೆ ಕೊರಟಗೆರೆಯ 125 ಕ್ಕೂ ಅಧಿಕ ಕೆರೆಕಟ್ಟಗಳು ತುಂಬಿ ಕೋಡಿಬಿದ್ದಿವೆ.

ನೀರಿನಲ್ಲೇ ರೈತರ ಬಳಿ ಬ೦ದ ತಹಶೀಲ್ದಾರ್‌

ನದಿಯಲ್ಲಿ ಹರಿಯುವ ನೀರನ್ನು ಲೆಕ್ಕಿಸದೇ ಸೇತುವೆಯನ್ನು ದಾಟಿ ಮುಂಜಾನೆಯೇ ರೈತರ ಮನೆ ಮತ್ತು ಜಮೀನುಗಳಿಗೆ ತಹಶೀಲ್ದಾರ್‌ ನಾಹೀದಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ-ಕಟ್ಟೆಗಳ ಮೇಲೆ ವಿಗಾ ವಹಿಸುವ೦ತೆ ಸಣ್ಣ ನೀರಾವರಿ ಇಲಾಖೆ ಸೂಚಿಸಿದ್ದಾರೆ. ಕಂದಾಯ ಇಲಾಖೆ, ತಾಪ೦ ಇಓ, ಪಪ೦ ಮುಖ್ಯಾಧಿಕಾರಿ ಮತ್ತು ಪೊಲೀಸ್‌ ಇಲಾಖೆ 24 ಗಂಟಿಯು ಕಾರ್ಯನಿರ್ವಹಣೆ ಮಾಡಲಿದೆ. ಗ್ರಾಪಂ ಪಿಡಿಓ ಮತ್ತು ನಾಡಕಚೇರಿ ಸಿಬ್ಬ೦ದಿಗಳು ಸಳದಲ್ಲೇ ಮೊಕ್ಕಾ೦ ಹೊಡುವಂತೆ ತಹಶೀಲ್ದಾರ್‌ ಖಡಕ್‌ ಆದೇಶ ಮಾಡಿದ್ದಾರೆ.

ಸೇತುವೆ ಜಲಾವೃತ-ಸಂಪರ್ಕ ಕಡಿತ

ಸುವರ್ಣಮುಖಿ ಮತ್ತು ಜಯಮಂಗಳಿ ನದಿಪಾತ್ರದ ಬಿ.ಡಿ.ಪುರ ಸಂಪರ್ಕದ ಸೇತುವೆ, ದೊಡ್ಮಸಾಗೆರೆ ಸಂಪರ್ಕದ ಸೇತುವೆ, ಕೋಡ್ಲಹಳ್ಳಿ ಸೇತುವೆ, ಚೀಲಗಾನಹಳ್ಳಿ ಸೇತುವೆ, ಚನ್ಮ್ನಸಾಗರ ಸೇತುವೆ, ಚೀಲಗಾನಹಳ್ಳಿ ಸೇತುವೆ, ಲಂಕೇನಹಳ್ಳಿ ಸೇತುವೆ ಜಲಾವೃತವಾಗಿ ಸಾರಿಗೆ ಸಂಪರ್ಕ ಸ೦ಪೂರ್ಣ ಕಡಿತವಾಗಿದೆ. ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನೂರಾರು ಮನೆಗಳಿಗೆ ನೀರು ಹರಿದು ಲಕ್ಷಾ೦ತರ ರೂ ನಷ್ಟವಾಗಿದೆ.

ಮಳೆರಾಯನ ಕೃಪೆಯಿ೦ದ ಕೊರಣಿಗೆರೆ ಕ್ಷೇತ್ರದ ಕೆರೆಕಟ್ಟೆ ತು೦ಬಿ ದಶಕಗಳ ನ೦ತರ ೩ನದಿಗಳ ಸಂಗಮವಾಗಿದೆ. ಕೊರಟಗೆರೆ ಪಟ್ಟಿಣ ಮತ್ತು ಗ್ರಾಮೀಣದಲ್ಲಿ ಮನೆಗಳು ಕುಸಿದು ಬೆಳೆಗಳಿಗೆ ಹಾನಿಯಾಗಿವೆ. ನದಿಪಾತ್ರದ ರೈತರು ಎಚ್ಚರಿಕೆಯಿಂದ ಇರಬೇಕಿದೆ. ಕೆರೆ-ಕಟ್ಟೆಗಳ ರಕ್ಷಣೆಗೆ ಅಧಿಕಾರಿವರ್ಗ ಮುಂದಾಗಿ ರಾಜ್ಯ ಸರಕಾರ ತಕ್ಷಣ ರೈತರಿಗೆ ತುರ್ತು ಪರಿಹಾರ ನೀಡಬೇಕಿದೆ.

ಪಿ.ಆರ್‌.ಸುಧಾಕರಲಾಲ್‌. ಮಾಜಿ ಶಾಸಕ. ಕೊರಟಗೆರೆ

ಕೊರಟಗೆರೆಯ ವೀರಸಾಗರ ಮತ್ತು ಚೀಲಗಾನಹಳ್ಳಿ ಗ್ರಾಮ ಜಲಾವೃತ ಆಗಿದೆ. ಅಧಿಕಾರಿವರ್ಗ ಜ೦ಟಿಯಾಗಿ ತುರ್ತು ಕಾರ್ಯಚರಣೆ ' ನಡೆಸುತ್ತಿದ್ದಾರೆ. ಅವಶ್ಯಕತೆ ಇರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಸರಕಾರದ ಆದೇಶದಂತೆ ಜ೦ಟಿ ಸಮೀಕ್ಷೆ ನಡೆಸಿ ಬೆಳೆಪರಿಹಾರ ಮತ್ತು ಪುರ್ನವಸತಿಗೆ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.

ವೈ.ಎಸ್‌.ಪಾಟೀಲ್‌. ಜಿಲ್ಲಾಧಿಕಾರಿ. ತುಮಕೂರು

ಈ ಕೆರೆಯ ಅಭಿವೃದ್ಧಿಗೆ ಸರ್ಕಾರದಿ೦ದ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊ೦ಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಈ ಬೃಹತ್‌ ಕೆರೆ ಸಳೆಯದೇ ಇರುವುದಿಲ್ಲ. ಪ್ರತಿ ಭಾನುವಾರ ಇಲ್ಲಿ ನಡೆಯುವ ಸಂತೆಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ.ಪುಸಿಧ್ದ ಪುಣ್ಯ ಕ್ವೇತ್ರ ಗೊರವನಹಳ್ಳಿ (ಲಕ್ಷ್ಮಿ ದೇವಸ್ಥಾನ) ಇಲ್ಲಿ೦ದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal