Tumbe Group of International Journals

Full Text


ಜಂಗಮವಾಣಿ

ಚಿರಂಜೀವಿ ಕೆ

U11GT21A0004

ಬಿಎ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

chiranjeevik17082003@gmail.com                       Ph.no: 9206635888


ನಮ್ಮ ದೈನಂದಿನ ಜೀವನದಲ್ಲಿ ಮೊಬೈಲ್ ಫೋನ್ ತುಂಬಾ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ. ಮೊಬೈಲ್ ಇಲ್ಲದೆ ಜೀವನ ನಡೆಸುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಹಾಗೆಯೇ ಮೊಬೈಲ್ ನಿಂದ ಉಪಯೋಗ ಹಾಗೂ ದುರುಪಯೋಗಗಳು ಇವೆ. ಅವುಗಳ ಬಗ್ಗೆ ನಾವು ಗಮನವಿಟ್ಟು ತಿಳಿದುಕೊಂಡಾಗ ನಮಗೆ ಮೊಬೈಲ್ ಫೋನನ್ನು ಹೇಗೆ ಬಳಸಬೇಕೆಂದು ತಿಳಿಯುತ್ತದೆ.

ಮೊಬೈಲ್ ಎಂದರೇನು?

ಧ್ವನಿ, ವಿಡಿಯೋ ಅಥವಾ ಇತರ ಡೇಟಾವನ್ನು ರವಾನಿಸಲು ಮತ್ತು ಸ್ವೀಕರಿಸಲು ಬೇಕಾಗುವ ದೂರ ಸಂಪರ್ಕ ಜಾಲಕ್ಕೆ ಸಂಪರ್ಕವನ್ನು ಕಲ್ಪಿಸಿರುವ ಸಾಧನಕ್ಕೆ ಮೊಬೈಲ್ ಎನ್ನುವರು.

ಮೊಬೈಲ್ ಗೆ ಆಂಗ್ಲ ಭಾಷೆಯಲ್ಲಿ Cell phone, hand phone ಎಂದು ಕರೆಯಲಾಗುತ್ತದೆ. ಮೊಬೈಲ್ ಅನ್ನು ಕನ್ನಡದಲ್ಲಿ ಜಂಗಮವಾಣಿ ಎಂದು ಕರೆಯುತ್ತಾರೆ.

ಮೊಬೈಲ್ ಫೋನ್ ಒಂದು ವಿಧದ ಕಂಪ್ಯೂಟರ್ ಆಗಿದ್ದು ಗಣಕಯಂತ್ರದಲ್ಲಿರುವ ಬಹುತೇಕ ಎಲ್ಲಾ ಫೀಚರ್ಗಳನ್ನು ಹೊಂದಿದೆ. ಇದು ಕಾಲ ಕಾಲಕ್ಕೆ ನವೀಕರಣಗೊಳ್ಳುತ್ತಿರುವುದರಿಂದ ಮೊಬೈಲ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ.

ಮೊಬೈಲ್ ಕಂಡು ಹಿಡಿದವರು

ವಿಶ್ವದ ಮೊದಲ ಮೊಬೈಲ್ ಫೋನನ್ನು 1973ರಲ್ಲಿ Motorola ಕಂಪನಿಯ ಇಂಜಿನಿಯರ್ ಮಾಂಟ್ರಿನ್ ಕೂಪರ್ ಅವರು ಕಂಡುಹಿಡಿದರು. ಇದು 2 ಕೆ.ಜಿ ಭಾರ ಮತ್ತು ಎರಡು ಲಕ್ಷ ರೂಪಾಯಿ ಬೆಲೆಯುಳ್ಳದಾಗಿತ್ತು.

ಇವರ ಈ ಆವಿಷ್ಕಾರದಿಂದಾಗಿ ಸಂಹವನ ಕ್ಷೇತ್ರದಲ್ಲಿ ಒಂದು ಕ್ರಾಂತಿಯೇ ಉಂಟಾಯಿತು. ಇವತ್ತಿನ ಕಾಲದಲ್ಲಿ ಜನರಿಗೆ ಇದು ಒಂದು ವರದಾನವಾಗಿದೆ.

ಮೊಬೈಲ್ ನ ವಿಸ್ತೃತ ರೂಪ

M - Modified  ಮೊಬೈಲ್‌ನ ರೂಪ ಹಾಗೂ ಗುಣಮಟ್ಟದಲ್ಲಾಗುವ ಬದಲಾವಣೆ.

O - Operation ಮೊಬೈಲ್ ಸುಧಾರಣೆ ಮಾಡುವ ಪ್ರಕ್ರಿಯೆ

B - Byte ಬೈಟ್ ಅಂದರೆ ಸ್ಟೋರೇಜ್ ಎಂದರ್ಥ

I - Integration ಮೊಬೈಲ್ ಅಭಿವೃದ್ಧಿಪಡಿಸುವ ಕ್ರಿಯೆ

L - Limited ಲಿಮಿಟೆಡ್ ಎಂದರೆ ಗಾತ್ರದಲ್ಲಿ ಚಿಕ್ಕದು ಎಂದರ್ಥ

E - Energy ಮೊಬೈಲ್ ಎಲೆಕ್ಟ್ರಾನಿಕ್ ಸಹಾಯದಿಂದ ಕಾರ್ಯನಿರ್ವಹಿಸುವ ಸಾಧನ

ಮೊಬೈಲ್ ನ ವಿಧಗಳು

  • ಸ್ಮಾರ್ಟ್ ಫೋನ್
  • ಕ್ಯಾಮೆರಾ ಫೋನ್
  • ಮ್ಯೂಸಿಕ್ ಫೋನ್
  • 4G ಫೋನ್

ಭಾರತದಲ್ಲಿ ಮೊದಲ ಬಾರಿಗೆ Airtel ಕಂಪನಿಯು 2012 ಏಪ್ರಿಲ್ ಅತ್ತರಂದು 4G ಸೇವೆಗಳನ್ನು ಪ್ರಾರಂಭಿಸಿತು.

ಮೊಬೈಲ್ ಹೇಗೆ ಕೆಲಸ ಮಾಡುತ್ತದೆ?

  • ರೇಡಿಯೋ ತರಂಗಗಳು
  • ಕನೆಕ್ಟಿವಿಟಿ
  • ಆಂಟಿನಾ

ಈ ರೀತಿಯಾದ ಹಂತದಿಂದ ಮೊಬೈಲ್ ಕಾರ್ಯವನ್ನು ನಿರ್ವಹಿಸುತ್ತದೆ. ಮೊಬೈಲ್ ನಿಂದ ಹೊರಬಂದ ತರಂಗಗಳು ಎಲ್ಲಾ ದಿಕ್ಕಿನಲ್ಲಿ ಚಲಿಸುತ್ತದೆ. ಈ ತರಂಗಗಳನ್ನು ಬೇರೆ ಮೊಬೈಲ್ ಟವರ್ ಗಳ ಮೂಲಕ ರಿಸಿವ್ ಮಾಡಿಕೊಳ್ಳುತ್ತೆ. ಆಂಟಿನಾ ಎಲೆಕ್ಟ್ರಾನಿಕ್ ಸಿಗ್ನಲ್ ಅನ್ನು ರೇಡಿಯೋ ಸಿಗ್ನಲ್ ಆಗಿ ರೇಡಿಯೋ ಸಿಗ್ನಲ್ ಅನ್ನು ಎಲೆಕ್ಟ್ರಾನಿಕ್ ಸಿಗ್ನಲ್ ಆಗಿ ಬದಲಾಯಿಸುತ್ತದೆ.

 

ಮೊಬೈಲ್ ನ ಉಪಯೋಗ

  • ಮೊಬೈಲ್ ಫೋನಿಂದ ಎಲ್ಲರೂ ಸಂಪರ್ಕದಲ್ಲಿರಬಹುದು.
  • ಶಾಲಾ ಆನ್ಲೈನ್ ತರಗತಿಯನ್ನು ಮನೆಯಲ್ಲಿ ಕೇಳಬಹುದು.
  • ಮೊಬೈಲ್ ಫೋನ್ ಜಿಪಿಎಸ್ ಮ್ಯಾಪ್ ಅನ್ನು ತೋರಿಸುತ್ತದೆ.
  • ಮೊಬೈಲನ್ನು ಮನರಂಜನೆಗೆ ಬಳಸಬಹುದು.
  • ಹಣದ ವರ್ಗಾವಣೆಯನ್ನು ಸುಲಭವಾಗಿ ಮಾಡಬಹುದು.
  • ಇಂಟರ್ನೆಟ್ ಸಹಾಯದಿಂದ ವಿಶ್ವದ ಎಲ್ಲಾ ಮಾಹಿತಿ ಸಿಗುತ್ತದೆ.
  • ಕುಳಿತಲ್ಲಿಯೇ ಬೇಕಾದ ವಸ್ತುಗಳನ್ನು ಖರೀದಿಸಬಹುದು.
  • ಸಾಮಾಜಿಕ ಜಾಲತಾಣ ಬಳಕೆ ಮಾಡಬಹುದು.
  • 24 ಗಂಟೆಯೂ ಮಾಹಿತಿ ಲಭ್ಯವಿರುತ್ತದೆ.
  • ವಾತಾವರಣದ ಸ್ಥಿತಿಗತಿ ತಿಳಿದುಕೊಳ್ಳಬಹುದು.
  • ಚಲನಚಿತ್ರಗಳನ್ನು ನೋಡಬಹುದು.

ಮೊಬೈಲ್ ನ ಅನಾನುಕೂಲ

  • ಅತಿಯಾದ ಬಳಕೆಯಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.
  • ಮೆದುಳಿನ ಸಾಮರ್ಥ್ಯ ಕುಸಿಯುತ್ತದೆ.
  • ಮೊಬೈಲ್ ನ ರೇಡಿಯೇಷನ್ ಇಂದ ಮಾನವನ ದೇಹಕ್ಕೆ ಹಾನಿ.
  • ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಹಾನಿ ಉಂಟುಮಾಡುತ್ತದೆ.
  • ಆನ್ಲೈನ್ನಲ್ಲಿ ಕಿರುಕುಳ ಬೆದರಿಕೆ ಸಮಸ್ಯೆಗಳಿರುತ್ತವೆ.
  • ಮಕ್ಕಳಿಗೆ ತಪ್ಪು ಮಾಹಿತಿ ಇಂಟರ್ನೆಟ್ ಇಂದ ದೊರೆಯುತ್ತದೆ.
  • ಕಣ್ಣಿಗೆ ತೊಂದರೆ ಉಂಟಾಗುತ್ತದೆ.
  • ಕ್ಯಾನ್ಸರ್ ಬರುವ ಅವಕಾಶಗಳು ಇರುತ್ತವೆ.

ಮೊಬೈಲ್ ವರವೋ ಶಾಪವೋ

ಎಲೆಕ್ಟ್ರಾನಿಕ್ ಯುಗದಲ್ಲಿ ಮೊಬೈಲ್ ಕ್ರಾಂತಿಯನ್ನೇ ತಂದಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊಬೈಲ್ ಫೋನ್ ಸಂವಹನದ ಮೂಲಭೂತ ಅಂಶವಾಗಿ ಬಿಟ್ಟಿದೆ. ಮೊಬೈಲ್ ಫೋನ್ ಬಳಕೆಯು ಯಾವ ಉದ್ದೇಶಕ್ಕಾಗಿ ಎಂಬುದರ ಮೇಲೆ ವರ ಅಥವಾ ಶಾಪಗಳು ಆಧಾರಿತವಾಗಿವೆ.

ಒಟ್ಟಾರೆಯಾಗಿ ಮೊಬೈಲ್ ಫೋನ್ ಗಳು ತುಂಬಾ ಸಹಾಯಕವಾದ ಆವಿಷ್ಕಾರಗಳಲ್ಲಿ ಒಂದಾಗಿದೆ. ಮೊಬೈಲ್ನ ಅನಾನುಕೂಲಗಳಿಗೆ ಹೋಲಿಸಿದರೆ ಅನುಕೂಲಗಳು ಹೆಚ್ಚಾಗಿ ಕಾಣುತ್ತವೆ. ವಾಸ್ತವದಲ್ಲಿ ಅದು ಸತ್ಯ ಕೂಡ.

ಹೆಚ್ಚಾದರೆ ಅಮೃತವು ವಿಷ ಎಂಬಂತೆ ಮೊಬೈಲ್ ಬಳಕೆಯು ಎಲ್ಲಿ ಹೇಗೆ ಮತ್ತು ಏಕೆ ಎಂಬುದರ ಮೇಲೆ ನಮ್ಮ ಒಳಿತು ಕೆಡಕುಗಳ ನಿರ್ಧಾರವಾಗುತ್ತದೆ. ಅದರಂತೆ ವಿದ್ಯಾರ್ಥಿಗಳು ಮೊಬೈಲನ್ನು ಒಳತಿಗಾಗಿ ಬಳಸಿಕೊಂಡರೆ ಅದು ತುಂಬಾ ಪರಿವರ್ತನೆಗೆ ಕಾರಣವಾಗುತ್ತದೆ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal