Tumbe Group of International Journals

Full Text


ತಾಳ್ಮೆಗೆ ಇನ್ನೊಂದು ಹೆಸರು ಅಮ್ಮ

ಲಿಖಿತ್ ವಿ

U11GT21A0294

ಬಿಎ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

likthithliki123@gmail.com              Ph.no: 9019818576


ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ, ನಾಸ್ತಿ ಮಾತೃ ಸಮಾ ಛಾಯಾ ನಾಸ್ತಿ ಮಾತೃ ಸಮಾಗತಿಃ! ನಾಸ್ತಿ ಮಾತೃ ಸಮಾ ತ್ರಾಣಂ ನಾಸ್ತಿ ಮಾತೃಸಮಾ ಪ್ರಪಾ! ಅಂದ್ರೆ, ತಾಯಿಯಂತೆ ನೆರಳಿಲ್ಲ, ಆಶ್ರಯವಿಲ್ಲ, ರಕ್ಷಕನಿಲ್ಲ, ತಾಯಿಯಂತೆ ಜೀವ ನೀಡುವವರು ಈ ಜಗತ್ತಿನಲ್ಲಿ ಯಾರು ಇಲ್ಲ.

ನಿಜ ಅಲ್ವಾ ಪ್ರಪಂಚದಲ್ಲಿ ಯಾರಿಂದ ಏನು ಬೇಕಾದರೂ ಪಡಿಬಹುದು ಆದ್ರೆ, ಈ ಜೀವ ಅನ್ನೋದನ್ನ ಅವ್ವ ಮಾತ್ರ ಕೊಡೋಕೆ ಸಾಧ್ಯ. ಅವಳೇ ಅಮ್ಮ ಸಹನಾಮೂರ್ತಿ, ತ್ಯಾಗಮಯಿ, ಕರುಣಾಮಯಿ ಎಷ್ಟೆಲ್ಲ ಹೆಸರಿಂದ ಕರುದ್ರು ಯಾರಿಂದಲೂ ತೀರಿಸೋಕೆ ಆಗದೆ ಇರೋ ಋಣ ಅಂದ್ರೆ ಅದು ಅಮ್ಮನ ಋಣ ಮಾತ್ರ........ ಯತ್ರ ನಾರ್ಯೇಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾಃ ಎಲ್ಲರಿಗೂ ಗೊತ್ತಿರೋ ಹಾಗೆ ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೈವತ್ವ ಅರಳುತ್ತೆ ಅನ್ನೋದು. ಇದು ಶುರುವಾಗಿರೋದು ಕೂಡ ಈ ತಾಯಿ ಅನ್ನೋಳಿಂದಾನೇ ಅನ್ನೋದು ಸ್ಮರಿಸೋ ಅಂತದ್ದು. ಕೋಟ್ಯಂತರ ಪದಗಳಲ್ಲಿ ಹೇಳಿದರೂ, ಸಾವಿರಾರು ಸಾಲನ್ನು ಬರೆದರೂ, ಶೃತಿ ಸೇರಿಸಿ ಕಂಠಪೂರ್ತಿ ಹಾಡಿ ಹೊಗಳಿದರೂ ಅವ್ಳ ಋಣ ತೀರಿಸೋಕಾಗುತ್ತಾ?

ಜಗತ್ನಲ್ಲಿ ಹುಟ್ಟಿದಾಗಿಂದ ಕೊನೆತಂಕ ಬೇರೊಬ್ಬರು ಶ್ರೇಯಸ್ಸಿಗೆ, ಸಂತೋಷಕ್ಕೆ ತನ್ನ ಇಡೀ ಜೀವ್ನನ್ನ ಮುಡಿಪಿರಿಸೋ ಏಕೈಕ ಜೀವ ಅಂದ್ರೆ ಅದು ಅಮ್ಮ ಮಾತ್ರ.....

ಕೇವಲ ಮಗು ಹೊಟ್ಟೆಗಿದ್ದಾಗಿನಿಂದಷ್ಟೇ ಅವ್ಳು ಪ್ರೀತಿ ಮಾಡೋಕೆ ಶುರು ಮಾಡಲ್ಲ, ಅವ್ಳಲ್ಲಿ ಹೆಣ್ತನ ಅನ್ನೋ ಭಾವ ಬಂದಾಗಲೇ ಅವ್ಳು ತಾಯಿ ರೂಪನ ಪಡ್ಕೊಂಡಿರ್ತಾಳೆ. ಅದು ಆ ದೇವರು ಅವ್ಳಿಗೆ ಮಾತ್ರ ಕೊಟ್ಟಿರುವ ಒಂದ್ ವರ....

ಅಮ್ಮ ಎಂದರೆ ದೇವರ ಒಂದು ರೂಪ ಎಂದು ಅರ್ಥ. ಅವ್ವ ಮದುವೆಯಾಗಿ ನಮ್ಮನೆಗೆ ಬಂದಾಗ ತುಸು ಕಷ್ಟದ ಜೀವನವನ್ನೇ ಕಂಡಿದ್ದಾರೆ. ನಂತರ ನಾನು, ನನ್ನ ತಮ್ಮ ತಂಗಿಯರು ಹುಟ್ಟಿದ ಮೇಲೆ ಅಮ್ಮನ ಖುಷಿಯ ಖಜಾನೆ ಇಮ್ಮಡಿಯಾಯಿತಂತೆ. ಅಮ್ಮ ಮಾತ್ರ ತನ್ನ ಮಕಳ್ಳಿಗೆ ಯಾವುದೇ ತೊಂದರೆ ಕಷ್ಟ ಬರದೆ ಇರಲಿ ಎಂದು ದೇವರನ್ನು ಹರಕೆ ಮಾಡುತ್ತಾರೆ.

ನಮಗೆ ಜ್ವರ ಬಂದರೆ ಅಮ್ಮಅದು ಎಷ್ಟು ಕಷ್ಟ, ದುಖಃ, ಸಂಕಟ ಪಟ್ಟಿರುತ್ತಾಳೆ. ಅಮ್ಮ I love you ಅಮ್ಮ ಅಂತಾ ಒಂದು ಸಾಲಿನಲ್ಲಿ ಹೇಳಕ್ಕಾಗಲ್ಲ. ನಮ್ಮಮ್ಮನ ಪ್ರೀತಿನ ಅವ್ವ ಅನ್ನೋ ಆ ಎರಟಕ್ಷರದಲ್ಲಿ ನನ್ನ ಈಡೀ ಜೀವನಾನೇ ಇದೆರಿ.. ಅಮ್ಮಂದಿರ ದಿನಕ್ಕೆ ಒಂದು ದಿನವನ್ನು ಮೀಸಲಿಡಲಾಗಿಡದೆ ವರ್ಷದ 365 ದಿನವೂ ಅವಳ ದಿನವನ್ನಾಗಿ ಆಚರಿಸೋದರಲ್ಲಿ ಯಾವ ತಪ್ಪು ಸಹ ಇಲ್ಲ ಎಂದು  ಹೇಳಬಹುದು.

ಮಗಳಾಗಿ, ಹೆಂಡತಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ತಂಗಿಯಾಗಿ, ಅಕ್ಕನಾಗಿ ಇರುತ್ತಾಳೆ. ಆಗಲೂ ಸಹ ಅವಳಲ್ಲಿ ಮಮತೆ, ಪ್ರೀತಿ, ವಾತ್ಸಲ್ಯ ತುಂಬಿರುತ್ತದೆ.

ಮೊದಲು ಆಕೆ ಅಂದರೆ (ಅಮ್ಮ) ತನ್ನ ಕುಟುಂಬವೆಂದರೆ ತನ್ನ ಅಪ್ಪ, ಅಮ್ಮ, ಅಣ್ಣ, ತಮ್ಮ, ಗಂಡ, ಅತ್ತೆ, ಮಾವ ಹೀಗೆ ಇವರೆಲ್ಲರೊಂದಿಗೆ ಸಂತೋಷದಿಂದ ಇದ್ದವಳು. ತನ್ನ ಮಡಿಲಲ್ಲಿ ಒಂದು ಪುಟ್ಟ ಕಂದ ಬಂದ ಕ್ಷಣದಿಂದ ಅವಳ ಖುಷಿಯ ಪ್ರಪಂಚದಲ್ಲಿ ಸಂತೋಷಕ್ಕೆ ಕೊನೆಯಿಲ್ಲದ ಜೀವನ ಪ್ರಾರಂಭವಾಗುತ್ತದೆ. ಕಣ್ಣ ರೆಪ್ಪೆಯು ಕಣ್ಣನ್ನು ಕಾವಲು ಮಾಡುವ ರೀತಿಯಲ್ಲಿ ತನ್ನ ಕಂದಮ್ಮನನ್ನು ನೋಡಿಕೊಳ್ಳುವಳು.

ಮಕ್ಕಳ ಕಣ್ಣಲ್ಲಿ ಧೂಳು ಬಿದ್ದರೆ ಅಮ್ಮನ ಕಣ್ಣಲ್ಲಿ ಮೊದಲು ನೀರು ಬರುತ್ತದೆ. ಅದೆ ತಾಯಿ ಹೃದಯ. ಅಲ್ಲಾ ಮಕ್ಕಳ ಕಾಲಿಗೆ ಮುಳ್ಳು ಚುಚ್ಚಿದರೆ ಮೊದಲು ನೋವಾಗುವುದು ಅಮ್ಮನಿಗೆಯೆ ಹೀಗೆ ಅಮ್ಮ ಎಂಬುದು ಕೇವಲ ಶಬ್ದವಲ್ಲ ಬೆಲೆ ಕಟ್ಟಕ್ಕೂ ಆಗಲ್ಲ ಎನ್ನಬಹುದು.

ಅಮ್ಮ ಎಂದರೆ ನಮ್ಮ ಹಡೆದವ್ವ. ಒಂಬತ್ತು ತಿಂಗಳು ಹೊತ್ತು ನಮ್ಮನ್ನು ಬೆಳಿಸಿದ್ದಾಳೆ. ಅಮ್ಮನ ಪ್ರೀತಿ ವಿಶ್ವದಲ್ಲೇ ದೊಡ್ಡ ಪ್ರೀತಿ. ನಮ್ಮನ್ನು ಕಷ್ಟಪಟ್ಟು ಬೆಳೆಸಿದವರು. ಅಮ್ಮ ಎಂದರೆ ಎಷ್ಟೆಲ್ಲಾ ಹೇಳಬಹುದು. ಕೆಲ ಪದಗಳಲ್ಲಿ ಹೇಳುವುದು ಬಲು ಕಷ್ಟ. ಪ್ರೀತಿಯ ಅಮ್ಮನನ್ನು ನಾನೂ ಅಷ್ಟೇ ಪ್ರೀತಿಸುತ್ತಾರೆ.

ಒಬ್ಬ ತಾಯಿ ಮಾತ್ರ ಅಕ್ಕ ತಂಗಿ ಮಗಳು ಸೊಸೆ ಹೆಂಡ್ತಿ ಹೀಗೆ ಅದೆಷ್ಟೋ ಬಂಧಗಳನ್ನು ನಿರ್ವಹಿಸೋಕೆ ಸಾಧ್ಯ. ಯಾಕೆಂದರೆ ಅವಳಲ್ಲಷ್ಟೇ ಆ ಪ್ರೀತಿ ವಾತ್ಸಲ್ಯ ಸಹನೆ ಮಮತೆ ಗಾಂಭೀರ್ಯತನವನ್ನು ತೂಗಿಸೋ ಶಕ್ತಿ ಇರೋದು.

ಈ ಲೇಖನ ಬರಿತೋ ಇರೋ ಕಾರಣ ಏನಂದ್ರೆ ಅಮ್ಮನ ಮುಂದೆ ಹೇಳೋಕೆ ಆಗ್ದೇ ಇರೋ ಎಷ್ಟೋ ವಿಷಯಗಳು ಇದ್ದರೆ ಸಹ ಈ ಮೂಲಕ ಅಮ್ಮಂಗೆ ಹೇಳ್ತಾ ಇದ್ದೀನಿ.

ತಾಳ್ಮೆಗೆ ಇನ್ನೊಂದ್ ಹೆಸರೇ ನಮ್ಮಮ್ಮ. ವಿದ್ಯಾವಂತೆ ಅಲ್ದೆ ಇದ್ರೂ ಅವಳು ಹೇಳ್ಕೊಟ್ಟಿರೋ ಸಂಸ್ಕಾರ, ನನ್ನಲ್ಲಿ ತುಂಬಿರೋ ಧೈರ್ಯ, ದೊಡ್ಡೋರಲ್ಲಿ ಗೌರವ, ಚಿಕ್ಕೋರಲ್ಲಿ ಪ್ರೀತಿ ಇದ್ಯಾವುದನ್ನು ನನಗೆ ಹೇಳಿದೆ ಇರೋ ದಿನಾನೇ ಇಲ್ಲ.

ನಾವು ಮಾಡುವ ಚೇಷ್ಟೆ ತುಂಟತನವನ್ನು ಸಹಿಸಿಕೊಂಡು ನಮ್ಮನ್ನು ಬೆಳೆಸಿದ್ದಾಳೆ. ಬೆಳೆಸಿದರೂ ಅವಳ ಕಾಳಜಿ ಇನ್ನೂ ಹೋಗಿಲ್ಲ. ನಮ್ಮ ಜನನ ಹಾಗೂ ಮರಣ ಅದರ ಅಂತರದಲ್ಲಿ ಅಮ್ಮನ ಕಾಳಜಿ ತುಂಬಾ ದೊಡ್ಡದು. ನಾವು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದುಕೊಮಡು ಅವಳ ಆಸೆ ಅಮ್ಮನ ನೆನೆಯುವ ನಮಗೆ ಏನೇ ಕಷ್ಟಗಳು ಬರಲಿ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ನಿನ್ನ ರಾಣಿ ತರ ನೋಡ್ಕೋತೀನೋ ಇಲ್ವೋ ಗೊತ್ತಿಲ್ಲ ಅಮ್ಮ, ಆದ್ರೆ ನೀನ್ ಹೇಳಿಕೊಟ್ಟಿರೋ ಸಂಸ್ಕಾರಕ್ಕೆ ಯಾವತ್ತೂ ಧಕ್ಕೆ ತರೋ ಕೆಲ್ಸ ಮಾಡಲ್ಲ.

ನೀನಿಲ್ದೆ ಇದ್ದ ದಿನಗಳು ನನ್ನ ಜೀವನದ ಕರಾಳ ದಿನಗಳು, ನೀನಿಲ್ದೆ ನಾನಿಲ್ಲಮ್ಮ....

ನನ್ನನ್ನ ತುಂಬಾ ಸಹಿಸ್ಕೋತಿಯ, ತುಂಬಾ ಥ್ಯಾಂಕ್ಸ್ ಕಣಮ್ಮ ನಮ್ಮಮ್ಮ. ಈ ಜೀವ ಜೀವನ ಸದ್ಯಕ್ಕೆ ನಂದೇ ಆಗಿದ್ರೂ, ನಿನ್ ಕೊಟ್ಟಿರೋ ಭಿಕ್ಷೆ. ಹೇಳೋಕೆ ತುಂಬಾ ಇದೆ, ಹೇಳ್ತಾ ಇದ್ರೆ ಪುಟ ಸಾಕಾಗಲ್ಲ. ಹಾಗೆ ಕೇವಲ ಅಮ್ಮಂದಿರ ದಿನಾಚರಣೆದಂದೆ ನಿನ್ನನ್ನು ನೆನಪಿಸಿಕೊಳ್ಳದೆ, ನಂಗೆ ಪ್ರತಿದಿನ ಅಮ್ಮಂದ್ರು ದಿನಾನೇ. ಯಾಕೆಂದ್ರೆ ನೀನಿಲ್ದೆ ಇರೋ ದಿನಾನೇ ಇಲ್ಲ. ಆದ್ರೂ ತಾಯಿ ಪ್ರೀತಿ ತೋರ್ಸಿರೋ ಪ್ರತಿಯೊಬ್ಬ ತಾಯಂದ್ರಿಗೂ, ಅಕ್ಕ ತಂಗಿ ಗೆಳೆಯ ಗೆಳತಿಯರಿಗೂ ತಾಯಿಯ ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಈ ಒಂದು ಸಣ್ಣ ಲೇಖನವನ್ನು ಅಮ್ಮಂದಿರಿಗೋಸ್ಕರ ಬರೆದಿದ್ದೇನೆ.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal