Tumbe Group of International Journals

Full Text


ಸ್ವಾಮಿ ವಿವೇಕಾನಂದ

ವಿನಯ್ ಯೋಗೇಶ್ವರ್ ಆರ್

U11GT21A0042

ಬಿಎ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

vinayyogeshwar2003@gmail.com             Ph.no: 9731007902


ಪೀಠಿಕೆ:

“ಏಳಿರಿ! ಏಳಿರಿ! ಎಚ್ಚರಾಗಿರಿ! ಗುರಿ ಮುಟ್ಟುವವರೆಗೂ ನಿಲ್ಲಬೇಡಿರಿ!”ತಾಯ್ಯಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರು ಭಾರತೀಯರಿಗೆ ನೀಡಿದ ಕರೆ ಇದು. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ” ವೆಂದು ಆಚರಿಸಲಾಗುತ್ತದೆ. ಭಾರತದ ಅತ್ಯಂತ ಪ್ರಸಿದ್ಧಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.

ಜೀವನ:

ಸ್ವಾಮಿ ವಿವೇಕಾನಂದ ಅವರ ಜನ್ಮ ನಾಮ ನರೇಂದ್ರನಾಥ ದತ್ತ, (ಜನವರಿ ೧೨,೧೮೬೩-ಜುಲೈ೪,೧೯೦೨) ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವಾನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ʼವಿವೇಕಾನಂದʼ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದರು.

ಮೊದಲಿನಿಂದಲೂ ನರೇಂದ್ರನಿಗೆ ಧೈರ್ಯ, ಪ್ರತಿಯೊಂದನ್ನೂ ಮಾಡಿನೋಡುವ, ವಿಚಾರಮಾಡುವ ಪ್ರವೃತ್ತಿ ಆತನದು. ಬುದ್ದಿವಂತ ನರೇಂದ್ರ ಚರಿತ್ರೆ, ಸಾಹಿತ್ಯ, ತತ್ವಶಾಸ್ತ್ರ, ವಿಜ್ಞಾನ ಮುಂತಾದ ಅನೇಕ ಗ್ರಂಥಗಳನ್ನು ಕಾಲೇಜು ವಿದ್ಯಾಭ್ಯಾಸದಲ್ಲೇ ಓದಿದ, ನರೇಂದ್ರನಿಗೆ ದೇವರು ಇದ್ದಾನೆಯೇ ಎಂದು ತಿಳಿದುಕೊಳ್ಳವ ಬಯಕೆ. ದಕ್ಷಣೇಶ್ವರಕ್ಕೆ ಹೋಗಿ ಪರಮಹಂಸರೊಡನೆ ಮಾತನಾಡಿದ ಮೇಲೆ ದೇವರಿದ್ದಾನೆ ಎಂಬ ನಂಬಿಕೆ ಆತನಿಗೆ ಉಂಟಾಯಿತು. ಅವನು ರಾಮಕೃಷ್ಣರ ಶಿಷ್ಯನಾದ. ರಾಮಕೃಷ್ಣರು ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ನರೇಂದ್ರನಿಗೆ ಧಾರೆಯೆರೆದರು. ತಮ್ಮ ಶಿಷ್ಯರೂ, ಭಕ್ತರನ್ನೂ ಅವರಿಗೆ ಒಪ್ಪಿಸಿದರು. ಕಾಲಾನಂತರ ನರೇಂದ್ರ ಸನ್ಯಾಸ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದರಾದರು. ಧ್ಯಾನ, ಅಧ್ಯಯನ, ಸಾಧನೆಯಲ್ಲಿ ತೊಡಗಿದರು, ಭಾರತದಲ್ಲೆಲ್ಲಾ ಸಂಚರಿಸಿದರು.

ವಿಷಯ ವಿವರಣೆ:

ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಸಂದೇಶವನ್ನು ಪ್ರಪಂಚಕ್ಕೆ ಸಾರಿದರು. ಈ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಪಶ್ಚಿಮ ದೇಶದವರ ಕಣ್ಣು ತೆರೆಸಿತು. ಅದುವರೆಗೆ ಅವರು ಭಾರತವೆಂದರೆ ಮೂಢನಂಬಿಕೆಗಳ ಮತ್ತು ಅನಾಗರಿಕರ ದೇಶ ಎಂದು ತಿಳಿದಿದ್ದರು. ವಿವೇಕಾನಂದರ ಭಾಷಣ ಹಿಂದೂಧರ್ಮದ ಹಿರಿಮೆಯನ್ನು ಭಾರತದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಿತು. ಅಮೇರಿಕ, ಇಂಗ್ಲೆಂಡ್‌ ದೇಶಗಳಲ್ಲಿ ಸಂಚರಿಸಿ ಅವರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಕುರಿತು ಅನೇಕ ಉಪನ್ಯಾಸಗಳನ್ನು ಮಾಡಿದರು. ಪಾಶ್ಚಾತ್ಯರಲ್ಲಿ ಅನೇಕರು ಇವರು ಶಿಷ್ಯರಾದರು.

1897 ಜನವರಿ 15 ರಂದು ಭಾರತಕ್ಕೆ ಹಿಂದಿರುಗಿದ ಅವರು ತಮ್ಮ ಸಂದೇಶವನ್ನು ಭಾರತದಲ್ಲಿ ಹರಡಲು ರಾಮಕೃಷ್ಣ ಸನ್ಯಾಸಿ ಸಂಘವನ್ನು ಆರಂಭಿಸಿ ಅದರ ಕೇಂದ್ರಗಳನ್ನು ಅನೇಕ ಕಡೆ ಸ್ಥಾಪಿಸಿದರು. ಬಂಗಾಳಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿನ ಅವರ ವಾಣಿ ಅನೇಕರನ್ನು ಎಚ್ಚರಿಸಿತು.

ನಮ್ಮ ಕಾಲಮೇಲೆ ನಿಂತು ಮನುಷ್ಯರಾಗೋಣ. ನಮಗಿಂದು ಪುರುಷ ಸಿಂಹರನ್ನು ನಿರ್ಮಿಸುವ ಧೈರ್ಯಬೇಕು; ಪುರುಷಸಿಂಹರನ್ನು ನಿರ್ಮಿಸುವ ಸಿದ್ದಾಂತಬೇಕು. ಪುರುಷಸಿಂಹರನ್ನಾಗಿ ಸರ್ವತೋಮುಖಿಗಳನ್ನಾಗಿ ಮಾಡುವ ವಿದ್ಯಾಭ್ಯಾಸಬೇಕು. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಯಾವುದು ದುರ್ಬಲರನ್ನಾಗಿ ಮಾಡವುದೋ ಅದನ್ನು ವಿಷದಂತೆ ತ್ಯಜಿಸಿ, ಅದರಲ್ಲಿ ಚೇತನವಿಲ್ಲ. ಸತ್ಯ-ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ದೇವರ ಮಕ್ಕಳು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು ಹೀಗೆ ವಿವೇಕಾನಂದರು ಭಾರತೀಯರನ್ನು ಎಚ್ಚರಿಸಿ ಅವರಲ್ಲಿ ಹೊಸ ಹುರುಪನ್ನು ತುಂಬಿದರು.

ಕನ್ಯಾಕುಮಾರಿಯ ಬಳಿಯಿರುವ ಬಂಡೆಯೊಂದರ ಮೇಲೆ ಕುಳಿತು ಮೂರು ದಿನ ಧ್ಯಾನ ಮಾಡಿದಾಗ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಯಿತು ಎಂದಿದ್ದಾರೆ. ಈ ಬಂಡ ʼವಿವೇಕಾನಂದ ಬಂಡೆʼ ಎಂದು ಹೆಸರು ಪಡೆದಿದೆ.

ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳು ದೈವಭಕ್ತರು, ಕರ್ಮಯೋಗಿಗಳು, ಸಮಾಜ ಸುಧಾರಕರು, ದೇಶಭಕ್ತರು,ಭಾರತೀಯರಲ್ಲಿರುವ ಲೋಪದೋಷಗಳನ್ನು ತೋರಿಸಿ ಪರಿಹಾರವೇನು ಎಂದು ವಿವರಿಸಿದರು. ಸಹಕಾರ ಮನೋಭಾವದ ಅಭಾವ, ಅಸೂಯೆ, ಅಧಿಕಾರಲಾಲಸ, ಸೋಮಾರಿತನ, ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಗಮನ ಹರಿಸದಿರುವುದು. ಜಾತಿ ಭಾವನೆ, ಪ್ರಾದೇಶಿಕತೆ, ಅಂಧಾಭಿಮಾನ, ಆತ್ಮಶ್ರೀಯ ಕೊರತ ಇವುಗಳನ್ನು ಖಂಡಿಸಿದರು.

ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯಲ್ಲೇ ವಿವೇಕಾನಂದರು ಭಾರತವನ್ನು ಜಗತ್ತಿಗೆ ಪರೆಚಯ ಮಾಡಿಕೊಡುವುದರಲ್ಲಿ ಮತ್ತು ಭಾರತೀಯರಿಗೆ ತಮ್ಮ ಸಂಸ್ಕೃತಿಯ ಪರಂಪರೆಯನ್ನು ಕರ್ತವ್ಯವನ್ನು ತಿಳಿಸಿಕೊಡುವಲ್ಲಿ ಯಶಸ್ಸು ಗಳಿಸಿದರು. ಧ್ಯಾನಸಿದ್ದ ಕರ್ಮಯೋಗಿ ವಿವೇಕಾನಂದರ 1920 ಜುಲೈ 4 ರಂದು ಧ್ಯಾನ ಮಗ್ನರಾಗಿದ್ದಾಗಲೇ ಮರಣಿಸಿದರು. ಆಗ ಅವರಿಗೆ ಕೇವಲ 39 ವರ್ಷ ವಯಸ್ಸು.

ಅದ್ವೈತ ಸಿದ್ಧಾಂತ:

ವಿವೇಕಾನಂದರು ಕಾಣಿಕೆಯೆಂದರೆ ಕೇವಲ ತತ್ತ್ವಜ್ಞಾನ ಮಾತ್ರವಲ್ಲದೆ ಸಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು,

ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal