Tumbe Group of International Journals

Full Text


ಸಂವಿಧಾನದ ಹಿತಚಿಂತಕ ಅಂಬೇಡ್ಕರ್

ಕುಶಾಲ್ ಕುಮಾರ್ ಜಿ

U11GT21A0090

ಬಿಎ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104

kushalgowda6662@gmail.com

Ph.no: 9164464254


ಅಂಬೇಡ್ಕರ್ ಜೀವನ:

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲ ಹೆಸರು ಭೀಮರಾವ್. ಅಂಬೇಡ್ಕರ್ ಅವರು ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ನ್ಯಾಯಶಾಸ್ತ್ರಜ್ಞ, ಸಮಾಜ ಸೇವಕ, ಬರಹಗಾರ ಮತ್ತು ಶಿಕ್ಷಣತಜ್ಞರಾಗಿದ್ದರು. ಅವರು ಏಪ್ರಿಲ್, 14, 1891 ರಂದು ಈಗ ಮಧ್ಯಪ್ರದೇಶದಲ್ಲಿರುವ ಮಾಹುದಲ್ಲಿ ಜನಿಸಿದರು. ಆ ಸಮಯದಲ್ಲಿ ಅತಿದೊಡ್ಡ ಅಸ್ಪೃಶ್ಯ ಜಾತಿಯಾದ ಮಹಾರರ ಕುಟುಂಬದಲ್ಲಿ ಜನಿಸಿದರು.ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.

ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ,ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು. ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು.

ಮಕ್ಕಳಗೆ ದೇಶಭಕ್ತಿ, ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುತ್ತಿದ್ದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.

ಶಿಕ್ಷಣ:

ಡಾ. ಅಂಬೇಡ್ಕರ್ ಅವರು ತಮ್ಮ ಹುಟ್ಟಿನಿಂದಲೇ ತಮ್ಮ ಶಾಲೆಯಲ್ಲಾಗಲೀ ಅಥವಾ ಅವರ ಕಚೇರಿಯಾಗಲೀ ತಮ್ಮ ಜೀವನದ ಪ್ರತಿಯೊಂದು ನಡೆಯಲ್ಲೂ ಕಾಲಕಾಲಕ್ಕೆ ಅವಮಾನವನ್ನು ಅನುಭವಿಸಬೇಕಾಗಿತ್ತು. ಆ ಸಮಯದಲ್ಲಿ ಅಸ್ಪೃಶ್ಯರ ಸ್ಥಿತಿ ತುಂಬಾ ಕೆಟ್ಟದಾಗಿತ್ತು ಮತ್ತು ದಲಿತರನ್ನು ತನ್ನ ಸಹಪಾಠಿಗಳು ಮತ್ತು ಶಾಲೆಯಲ್ಲಿ ಅವರ ಶಿಕ್ಷಕರಿಂದ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅವರನ್ನು ದೂರ ಕೂರಿಸುತ್ತಿದ್ದರು. ಮಗು ಭೀಮರಾಯನ ಪ್ರಾಥಮಿಕ ಶಿಕ್ಷಣ ದಾಪೋಲಿ ಮತ್ತು ಸತಾರಾದಲ್ಲಿ ನಡೆಯಿತು. ಅವರು 1907 ರಲ್ಲಿ ಬಾಂಬೆಯ ಎಲ್ಫಿನ್‌ಸ್ಟೋನ್ ಶಾಲೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.

ಅಂಬೇಡ್ಕರ್ ಪ್ರತಿಭಾವಂತ ವಿದ್ಯಾರ್ಥಿ. ಅವರು 1912 ರಲ್ಲಿ ತಮ್ಮ ಬಿಎ ಉತ್ತೀರ್ಣರಾದರು. ಅವರು ಬರೋಡಾ ರಾಜ್ಯದ ಹಿತಚಿಂತಕ ಮಹಾರಾಜರಿಂದ ವಿದ್ಯಾರ್ಥಿವೇತನವನ್ನು ಪಡೆದರು. ರಾಜ್ಯದಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸುವ ಒಪ್ಪಂದವಿತ್ತು. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋದರು. ಅಲ್ಲಿಂದ 1917ರಲ್ಲಿ ಪಿಎಚ್ ಡಿ ಪದವಿ ಮುಗಿಸಿದರು.ಕಾನೂನನ್ನು ಕೂಡ ಅಧ್ಯಯನ ಮಾಡಿದರು.

ಅಂಬೇಡ್ಕರ್‌ ಕೇವಲ 15 ದಿನಗಳ ಕೆಲಸ ಮಾಡಿದರು. ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ಟೆಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ. ತಂದೆ ಅಂತಿಮ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ:

ಅವರ ಮುಂದೆ ಏನು ಅನ್ನೂ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೋಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು. ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ.

1915 ರಲ್ಲಿಅವರು ಸ್ನಾತಕೋತ್ತರ ಪದವಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದಕ್ಕಾಗಿ ಅವರು ತಮ್ಮ ಪ್ರಬಂಧವನ್ನು ಬರೆದರು ‘ಪ್ರಾಚೀನ ಭಾರತದ ವಾಣಿಜ್ಯ’ ಅದರ ನಂತರ 1916 ರಲ್ಲಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅವರು ತಮ್ಮ ಪಿಎಚ್‌ಡಿ ಮಾಡಿದರು. ಅವರ ಪಿಎಚ್‌ಡಿ ಪಡೆದರು. ಸಂಶೋಧನೆಯ ವಿಷಯ ‘ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ವಿಕೇಂದ್ರೀಕರಣ’. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಫೆಲೋಶಿಪ್‌ನ ಕೊನೆಯಲ್ಲಿ ಅವರು ಭಾರತಕ್ಕೆ ಹಿಂತಿರುಗಬೇಕಿತ್ತು, ಆದ್ದರಿಂದ ಅವರು ಬ್ರಿಟನ್ ಮೂಲಕ ಹಿಂತಿರುಗುತ್ತಿದ್ದರು.

D.Sc. ಮತ್ತು ಕಾನೂನು ಸಂಸ್ಥೆಯಲ್ಲಿ ಬಾರ್-ಅಟ್-ಲಾ ಪದವಿಗಾಗಿ ಸ್ವತಃ ನೋಂದಾಯಿಸಿಕೊಂಡರು ಮತ್ತು ಭಾರತಕ್ಕೆ ಮರಳಿದರು. ಮೊದಲನೆಯದಾಗಿ, ವಿದ್ಯಾರ್ಥಿವೇತನದ ಷರತ್ತಿನ ಪ್ರಕಾರ, ಅವರು ಬರೋಡಾದ ರಾಜನ ಆಸ್ಥಾನದಲ್ಲಿ ಮಿಲಿಟರಿ ಅಧಿಕಾರಿ ಮತ್ತು ಆರ್ಥಿಕ ಸಲಹೆಗಾರನ ಜವಾಬ್ದಾರಿಯನ್ನು ಸ್ವೀಕರಿಸಿದರು. ಇಡೀ ನಗರದಲ್ಲಿ ಯಾರೂ ಅವರನ್ನು ನೇಮಿಸಿಕೊಳ್ಳಲು ಸಿದ್ಧರಿಲ್ಲದ ಗಂಭೀರ ಸಮಸ್ಯೆಯಿಂದಾಗಿ ಅವರು ಸ್ವಲ್ಪ ಸಮಯದ ನಂತರ ಮತ್ತೆ ಮುಂಬೈಗೆ ಬಂದರು.

ಪ್ರತ್ಯೇಕ ಮತದಾರರು:

ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಪರಿಶಿಷ್ಟ ವರ್ಗಗಳಿಗೆ ಸಮಾನತೆ ದೊರಕಿಸಲು ಹೋರಾಟ ನಡೆಸಿದರು. ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರರನ್ನು ಹೊಂದುವ ಮೂಲಕ ಅಸ್ಪೃಶ್ಯರ ಹಕ್ಕುಗಳನ್ನು ಉತ್ತಮವಾಗಿ ಪೂರೈಸಬಹುದು ಎಂದು ಅಂಬೇಡ್ಕರ್ ನಂಬಿದ್ದರು. 1932 ರಲ್ಲಿ, ಅವರ ಪ್ರಾಮುಖ್ಯತೆಯನ್ನು ನೀಡಿ, ಬ್ರಿಟಿಷರು ಅಂಬೇಡ್ಕರ್ ಅವರನ್ನು ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನಕ್ಕೆ ಆಹ್ವಾನಿಸಿದರು. ಪ್ರತ್ಯೇಕ ಮತದಾರರನ್ನು ಹೊಂದುವ ಅಂಬೇಡ್ಕರ್ ಅವರ ಯೋಜನೆಯನ್ನು ಬ್ರಿಟಿಷರು ಒಪ್ಪಿಕೊಂಡರು. ಮಹಾತ್ಮ ಗಾಂಧಿಯವರು ತೀವ್ರವಾಗಿ ವಿರೋಧಿಸಿದರು. ಸುದ್ದಿ ತಿಳಿದ ಗಾಂಧಿ ಜೈಲಿನಲ್ಲಿದ್ದಾಗ ಉಪವಾಸ ಕೈಗೊಂಡರು, ಹಿಂದೂ ಜನಸಂಖ್ಯೆಯಲ್ಲಿ ಭಾರಿ ನಾಗರಿಕ ಅಶಾಂತಿಯನ್ನು ಪ್ರಚೋದಿಸಿದರು.

ಅಂತಿಮವಾಗಿ ಸಾಂಪ್ರದಾಯಿಕ ಹಿಂದೂಗಳು ಮತ್ತು ದಲಿತರ ನಡುವಿನ ಸಂಘರ್ಷಕ್ಕೆ ಹೆದರಿ, ಅಂಬೇಡ್ಕರ್ ಪ್ರತ್ಯೇಕ ಮತದಾರರನ್ನು ತಪ್ಪಿಸಲು ಗಾಂಧಿಯವರೊಂದಿಗೆ ಒಪ್ಪಿಕೊಂಡರು. ಬದಲಾಗಿ, ಅಸ್ಪೃಶ್ಯರಿಗೆ ನಿರ್ದಿಷ್ಟ ಸಂಖ್ಯೆಯ ಸೀಟುಗಳನ್ನು ಮೀಸಲಿಡಲಾಗಿತ್ತು. ಇದನ್ನು ಪೂನಾ ಒಪ್ಪಂದ ಎಂದು ಕರೆಯಲಾಗುತ್ತಿತ್ತು. ರಾಜಕೀಯವಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಹತ್ತಿರಕ್ಕೆ ಎಳೆದರು. ಆದರೂ ಇಬ್ಬರ ನಡುವಿನ ವೈಮನಸ್ಸು ಇನ್ನೂ ಉಳಿದಿತ್ತು. ಅಂಬೇಡ್ಕರ್ ಅವರು ಸ್ವಾತಂತ್ರ್ಯವನ್ನು ಬಯಸಿದ್ದರು, ಆದರೆ ಅವರು ಸಮಾಜದಲ್ಲಿ ಅಸ್ಪೃಶ್ಯರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳ ಸುಧಾರಣೆಗೆ ಸಮಾನವಾದ ತೂಕವನ್ನು ನೀಡಿದರು.

ಭಾರತ ಸಂವಿಧಾನ:

29 ಆಗಸ್ಟ್ 1947 ರಂದು, ಅವರು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು, ಅಂಬೇಡ್ಕರ್ ಅವರು ಸಂವಿಧಾನದ ಅಂತಿಮ ಕರಡು ಸಿದ್ಧಪಡಿಸಲು 2 ವರ್ಷ 11 ತಿಂಗಳು 17 ದಿನಗಳನ್ನು ತೆಗೆದುಕೊಂಡರು. ಭಾರತದ ಹೊಸ ಸಂವಿಧಾನವನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಕಾಂಗ್ರೆಸ್ ಸರ್ಕಾರವು ಅವರನ್ನು ಆಹ್ವಾನಿಸಿತು. ಅಂಬೇಡ್ಕರ್‌ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಾಬಾಸಾಹೇಬರು 1952 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಆದರೆ ಸೋತರು. ಅವರು 1952 ರಲ್ಲಿ ರಾಜ್ಯಸಭೆಗೆ ನೇಮಕಗೊಂಡರು ಮತ್ತು ಸಾಯುವವರೆಗೂ ಈ ಸದನದ ಸದಸ್ಯರಾಗಿದ್ದರು. ಡಾ. ಭೀಮರಾವ್ ಅಂಬೇಡ್ಕರ್ ಅವರು ಬರೆದ ಕೊನೆಯ ಪುಸ್ತಕದ ಹೆಸರು ‘ಬುದ್ಧ ಮತ್ತು ಅವನ ಧಮ್ಮ’.

ಅಂಬೇಡ್ಕರ್‌ಯವರ ನಿಧನ:

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸ್ವಲ್ಪ ಸಮಯದ ನಂತರ, ಅವರು ದೆಹಲಿಯ ತಮ್ಮ ಮನೆಯಲ್ಲಿ 6 ಡಿಸೆಂಬರ್ 1956 ರಂದು ನಿದ್ರೆಯಲ್ಲಿ ನಿಧನರಾದರು. ಅವರು ಮಧುಮೇಹ ಮತ್ತು ಒತ್ತಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಬೌದ್ಧ ದಹನವನ್ನು ನೀಡಲಾಯಿತು ಮತ್ತು ಅರ್ಧ ಮಿಲಿಯನ್ ಜನರು ಗೌರವ ಸಲ್ಲಿಸಲು ಬಂದರು.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal