ಪ್ರಥಮ ಮಹಿಳಾ ಅಂತರಿಕ್ಷ ಯಾನಿ ಭಾರತದ ಸಂಜಾತ ಕಲ್ಪನಾ ಚಾವ್ಲಾ
ಮಮತ
U11GT21CO316
ಬಿಕಾಂ ಮೊದಲನೇ ವರ್ಷ, ದ್ವಿತೀಯ ಸೆಮಿಸ್ಟರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು -572104
mmamatha5660@gmail.com Ph.no: 84316 61216
ಭಾರತದ ಸಂಜಾತ ಕಲ್ಪನಾ ಚಾವ್ಲಾ ಅಮೆರಿಕದ ಕೊಲಂಬಿಯ ಶಟಲ್ ಉಡಾವಣಾ ಅಂತರಿಕ್ಷ ನೌಕೆಯೊಳಗೆ ಕುಳಿತು ಎರಡು ಬಾರಿ ಪರಿಭ್ರಮಣ ಮಾಡಿದ ಪ್ರಥಮ ಮಹಿಳಾ ಅಂತರಿಕ್ಷ ಯಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಬನಾರಸಿಲಾಲ್ ದಂಪತಿಗಳಿಗೆ ಕಲ್ಪನಾ 5ನೇ ಮಗುವಾಗಿ ದಿನಾಂಕ 17 ಮಾರ್ಚ್ 1962ರಂದು ಕರ್ನಲ್ ನಲ್ಲಿ ಜನಿಸಿದಳು. ಬಹಳ ಚೂಟಿಯಾಗಿದ್ದ ಇವಳು ತನ್ನ ಮುದ್ದು ಮಾತಿನಿಂದ ಆಟ ಪಾಠಗಳಿಂದ ಬಹುಬೇಗ ಎಲ್ಲರ ಮನಸ್ಸನ್ನು ಗೆದ್ದಳು. ಅವಳು ಮೂರು ವರ್ಷದವಳಿದ್ದಾಗ ಇವಳ ಅಕ್ಕ ಸುನಿತ ಇವಳನ್ನು ಪುಟ್ಟ ಮಕ್ಕಳ ಶಾಲೆಗೆ ಸೇರಿಸಲು ಕರೆದೊಯ್ದಳು.
ಶಾಲೆಯ ಉಪಾಧ್ಯಾಯರು ಇವಳ ಹೆಸರೇನು ಎಂದು ಪ್ರಶ್ನಿಸಿದಾಗ ಸುನಿತ ನಾವೆಲ್ಲ ಪ್ರೀತಿಯಿಂದ ಇವಳನ್ನು ಮೋಟೋ ಎಂದು ಕರೆಯುತ್ತೇವೆ. ಇವಳಿಗೆ ಜ್ಯೋತ್ಸ್ನಾ, ಸುನೈನ, ಕಲ್ಪನಾ ಇವುಗಳಲ್ಲಿ ಒಂದು ಇಡಬೇಕೆಂದಿದ್ದೇವೆ ಎಂದು ಹೇಳಿದ ತಕ್ಷಣ ಆ ಪುಟ್ಟ ಹುಡುಗಿ ತಾನೆ ನುಡಿದಳು. ನನ್ನ ಹೆಸರು ಕಲ್ಪನಾ. ಅವಳ ಮುದ್ದು ಮಾತು ಕೇಳಿ ಮೇಡಂ ಗೆ ಬಹಳ ಸಂತೋಷವಾಯಿತು. ಕಲ್ಪನಾ ಸಂಸ್ಕೃತದ ಪದ, ಅರ್ಥ ಭಾವನೆ, ಪ್ರತಿಭಾ ಶಕ್ತಿ ಮುಂದಾಲೋಚನ ಶಕ್ತಿ ಚೆನ್ನಾಗಿದೆ. ಇದೇ ಅವಳಿಗೆ ಹೆಸರಿರಲಿ ಎಂದರು. ಅದೇ ಅವಳ ಶಾಲಾ ದಾಖಲೆಯ ಹೆಸರಾಯಿತು. ಶಾಲೆಗೆ ಸೇರಿಸಲು ಆ ಮಗುವಿನ ವಯಸ್ಸು ಸಾಲದೆಂದು ಅವರು ಸೂಚಿಸಿದಾಗ ಸುನಿತ ತಂದೆಯನ್ನು ಸಂಪರ್ಕಿಸಿ ಜನ್ಮದಿನವನ್ನು ಬದಲಾಯಿಸಿ ಜುಲೈ ಒಂದು 1961 ಎಂದು ತಿಳಿಸಿದಳು.
ಆಗ ಕಲ್ಪನಾಳನ್ನು ಶಾಲೆಗೆ ದಾಖಲಿಸಿಕೊಂಡರು. ಇದೇ ದಿನಾಂಕ ಇಂದು ಅಧಿಕೃತ ದಾಖಲೆಯಾಗಿ ಶಾಲಾ ಕಾಲೇಜು ಹಾಗು ಸರ್ಕಾರಿ ರೆಕಾರ್ಡ್ ಗಳಲ್ಲಿ ನಮೂದಗಿದೆ. ಕಲ್ಪನಾ ಶಾಲೆಯಲ್ಲಿ ಬುದ್ಧಿವಂತಳೆಂದು ಶಾಲೆಯ ಉಪಾಧ್ಯಾಯರುಗಳು ಕರೆಯುತ್ತಿದ್ದರು. ಅವಳು ಎಂದು ರಾಂಕಿಂಗ್ ನಲ್ಲಿ ಮೊದಲಿಗಳಾಗಿ ಕಾಣಿಸಿಕೊಂಡಿದ್ದಿಲ್ಲ.
ಅಂತೂ ಮೊದಲನೆಯ ಐದರಲ್ಲಿ ಒಬ್ಬಳಾಗಿರುತ್ತಿದ್ದಳು. ಕಲ್ಪನಾ ಸಾಂಪ್ರದಾಯಿಕ ಮನೆಯ ಹುಡುಗಿಯಾದರು ಅವರು ಕೊಡುವ ಸಲ್ವಾರ್, ಕುರ್ತಾ ಹೆಚ್ಚು ಇಷ್ಟ ಪಡದೆ ಪ್ಯಾಂಟು ಶರ್ಟು ತೊಡುತ್ತಿದ್ದಳು. ಹುಡುಗರಿಗೆ ಸರಿ ಸಮಾನವಾಗಿ ಸೈಕಲ್ ಸವಾರಿ ಮಾಡುತ್ತಿದ್ದಳು. 14ನೇ ವಯಸ್ಸಿಗೆ ಕಾರು ನಡೆಸುವುದನ್ನು ಕಲಿತಿದ್ದಳು. ಕೆಲ ದಿನಗಳ ನಂತರ ಪಂಜಾಬ್ ಯುನಿವರ್ಸಿಟಿಯಿಂದ ಬಿ ಎಸ್ ಸಿ ಪಡೆದೊಡನೆ ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕಲ್ ಸಂಸ್ಥೆ (HAL) ಇವಳಿಗೆ ಒಂದು ಹುದ್ದೆಯನ್ನು ನೀಡಲು ಮುಂದಾಗಿತ್ತು. ಅದನ್ನು ನಿರಾಕರಿಸಿದ ಕಲ್ಪನಾ ಕೆಲಕಾಲ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಗಳಾಗಿದ್ದಳು. ಇದೇ ಕಾಲದಲ್ಲಿ ಅವಳು ಬಯಕೆಯನ್ನು ಪೂರೈಸಲು ರಹ ದಾರಿಯಾಯಿತು. ನಂತರ ನಾಸಾದಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಮಾಡಿದರು. ಕಲ್ಪನಾ ನಾಸಾದ ರಿಸರ್ಚ್ ಸೆಂಟರ್ ನಲ್ಲಿ ಉಪಾಧ್ಯಕ್ಷಳಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ವಿಮಾನ ಚಾಲನ ಕ್ಷೇತ್ರದಲ್ಲಿ ಅಧಿಕೃತ ತರಬೇತುದಾರಳಾಗಿ ಒಂದು ಹಾಗೂ ಹೆಚ್ಚು ಇಂಜಿನ್ ಗಳ ವಿಮಾನಗಳು, ಸಾಗರ ವಿಮಾನಗಳು ಚಾಲಕಳಾಗಿರುವ ಅರ್ಹತೆಗಳಿಸಿದಿದ್ದು ಆಕೆಯ ಹೆಗ್ಗಳಿಕೆ.
ಕಲ್ಪನಾಳ ಮುಗ್ಧ ಮುಖದಲ್ಲಿ ತುಂಬಿ ತುಳುಕುತ್ತಿದ್ದ ನಮ್ರತೆ, ಸೌಜನ್ಯ, ಮಾತಿನ ಮೃದುತ್ವ ಪತ್ರಕರ್ತರನ್ನೆಲ್ಲ ಮರಳು ಮಾಡಿತು. ಕಲ್ಪನಾ ಚಾವ್ಲಾ ಮನೋ ಧೈರ್ಯ, ಯೋಜಿತ ಕಾರ್ಯನಿರ್ವಹಣೆಯಲ್ಲಿನ ಆಕೆಯ ಆಸಕ್ತಿ ಮನೆಯವರನ್ನಲ್ಲದೆ, ಪತ್ರಕರ್ತರು ಹಾಗೂ ಇತರ ವಿಜ್ಞಾನಿಗಳನ್ನು ಆಶ್ಚರ್ಯ ಚಕಿತಗೊಳಿಸಿತ್ತು.
ಪ್ರಶಸ್ತಿ/ಪುರಸ್ಕಾರ
ಪ್ರವಾಸಿ ಭಾರತೀಯ ಸಮ್ಮಾನ ಕಲ್ಪನಾಳಿಗೆ ಭಾರತ ಸರ್ಕಾರ ನೀಡಿರುವ ಮರಣೋತ್ತರ ಪ್ರಶಸ್ತಿ.
ನಾಸಾ ಸ್ಪೇಸ್ ಫ್ಲೈಟ್ ಮೆಡಲ್ ಎ ಎಸ್ ಎ ಸ್ಪೇಸ್ ಫ್ಲೈಟ್ ಮೆಡಲ್ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಅಂತರಿಕ್ಷಾ ವಿಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ಅಂತರ್ದನಳಾದ ವಿಜ್ಞಾನಿ ಕಲ್ಪನಾ ಚಾವ್ಲಾ ಗಗನ ಸೇರಿ ಪ್ರಜ್ವಲಿಸುವ ದಿವ್ಯ ನಕ್ಷತ್ರವಾದಳು.
ಇಂದು ಗಗನಯಾನಿ ಕಲ್ಪನಾ ನಶ್ವರ ಶರೀರ ಕಳೆದು ನಭದಲ್ಲಿ ಶಾಶ್ವತ ಮಿನುಗುವ ತಾರೆಯಾಗಿದ್ದಾಳೆ.